October 16, 2021

ಬಾಲಕಿಯ ಮೇಲೆ ಅತ್ಯಾಚಾರ, RSS ಮುಖಂಡನ ಮೇಲೆ ಆರೋಪ

ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಾಲಕಿ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ನಾರಾಯಣ ರೈ ಹೆಸರು ಹೇಳಿದರೆ, ಕೇಸು ಹಾಕಿ ಜೈಲಿಗೆ ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಸಂಪ್ಯ ಠಾಣೆ ಪೊಲೀಸರು ಆರೋಪಿಯನ್ನು ರಕ್ಷಿಸುವುದಕ್ಕಾಗಿ ಘಟನೆಗೆ ಸಂಬಂಧವಿಲ್ಲದ ಪ್ರಮೋದ್ ಎನ್ನುವ ವ್ಯಕ್ತಿಯನ್ನು ಪ್ರಕರಣದಲ್ಲಿ ಸೇರಿಸಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧಿಸಿ ಬಾಲಕಿಯ ಸೋದರನನ್ನು ಪೊಲೀಸರು ಬಂಧಿಸಿದ್ದಾರೆ

ಯುವ ಕ್ರಿಕೆಟಿಗ ಹೃದಯಾಘಾತಕ್ಕೆ ಬಲಿ

ಮನೆಯಲ್ಲಿ ಅಸ್ವಸ್ಥಗೊಂಡ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅವರು ನಿಧನರಾಗಿದ್ದಾರೆ.ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಪತ್ನಿಗೆ ಪತಿಯ ಅಗಲಿಕೆ ನಿಜಕ್ಕೂ ಆಘಾತ ತಂದಿದೆ.ಅವಿಯ ತಂದೆ 42 ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಈಗ ಅವಿ ಬರೋಟ್ ನಿಧನ ಹಿನ್ನಲೆಯಲ್ಲಿ  ಅವರ ತಾಯಿ ಮತ್ತು ನಾಲ್ಕು ತಿಂಗಳ ಗರ್ಭಿಣಿ ಪತ್ನಿಗೆ ದಿಕ್ಕೆ ತೋಚದಂತಾಗಿದೆ.

ಎಲ್ಲಾ ಹಿಂದೂ ದೇವಾಲಯಗಳನ್ನು ಆರ್‌ಎಸ್ಎಸ್ ಸುಪರ್ದಿಗೆ ಕೊಡ್ಬೇಕಾ ?– ಹೆಚ್‌.ಡಿ. ಕುಮಾರಸ್ವಾಮಿ

ದೇವಾಲಯದ ನಿರ್ವಹಣಾ ಹಕ್ಕುಗಳನ್ನು ಹಿಂದೂಗಳಿಗೆ ನೀಡಬೇಕು ಮತ್ತು ಅದರ ಸಂಪತ್ತನ್ನು ಹಿಂದೂ ಸಮುದಾಯದ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು ಎಂದು ವಿಜಯದಶಮಿ ದಿನ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರಲ್ಲಿ ದೇಶ ಒಡೆಯುವ ಉದ್ದೇಶವಿದೆ. ದೇಶವನ್ನು ಇವರಿಗೆ ನಾವು ಗುತ್ತಿಗೆ ಕೊಟ್ಟಿದ್ದೀವಾ? ಎಂದು ಪ್ರಶ್ನಿಸಿ ಹರಿಹಾಯ್ದಿದ್ದಾರೆ.

ಉದ್ದೇಶ ಪೂರ್ವಕವಾಗಿಯೇ ‘ಕೋಟಿಗೊಬ್ಬ 3’ ನಿಲ್ಲಿಸಿದ್ದರು – ಕಿಚ್ಚ ಸುದೀಪ್

”ಅವರನ್ನು ದೇವರು ಚೆನ್ನಾಗಿಟ್ಟಿದ್ದಾರೆ, ಒಳ್ಳೆಯ ಹೆಸರಿದೆ, ಅವರ ಸಿನಿಮಾಗಳು ಚೆನ್ನಾಗಿ ಓಡುತ್ತಿರುತ್ತವೆ. ಹೀಗಿದ್ದಾಗ ಚಿತ್ರಮಂದಿರಗಳಿಗೆ ಕರೆ ಮಾಡಿ, ಸಿನಿಮಾ ರಿಲೀಸ್ ಮಾಡಬೇಡಿ ಎನ್ನುತ್ತಾರೆ. ಇಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ, ಹೀಗೆ ಮಾಡಿ-ಮಾಡಿ ಎಷ್ಟು ಹೊಸಬರನ್ನು ಇವರು ಹಾಳು ಮಾಡಿರಬಹುದು ಎಂಬ ಯೋಚನೆ ಬರುತ್ತದೆ” ಎಂದು ಹೆಸರು ಹೇಳದೆ ಹಿರಿಯ ವಿತರಕರ ವಿರುದ್ಧ ವಾಗ್ದಾಳಿ ನಡೆಸಿದರು ಸುದೀಪ್.

ಭಾರತಕ್ಕೆ ಮತ್ತಷ್ಟು ರಕ್ಷಣಾ ಬಲ ನೀಡಿದ ಪ್ರಧಾನಿ ಮೋದಿ

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ರಕ್ಷಣಾ ವಲಯದಲ್ಲಿ ಹಲವು ಪ್ರಮುಖ ಸುಧಾರಣೆಗಳು ಆಗುತ್ತಿವೆ ಎಂದ ಪ್ರಧಾನಿ, ಆತ್ಮನಿರ್ಭರ ಭಾರತ ಅಭಿಯಾನವು ಭಾರತವನ್ನು ತನ್ನದೇ ಆದ ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಮತ್ತು ಭಾರತದಲ್ಲಿ ಆಧುನಿಕ ಮಿಲಿಟರಿ ಉದ್ಯಮದ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಉಳಿಗಾಲವಿಲ್ಲ – ಹೆಚ್‌ ಡಿ ಕುಮಾರಸ್ವಾಮಿ

ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ʼಅಹಿಂದʼ ಎಂದು ಜನರನ್ನು ‘ಅಡ್ಡದಾರಿ’ ಹಿಡಿಸಿದ ʼಸಿದ್ದಹಸ್ತ ಶೂರರುʼ ತಮ್ಮ ಸ್ವಪಕ್ಷದಲ್ಲೇ ಮುಸ್ಲೀಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ʼಅಲ್ಪಸಂಖ್ಯಾತರ ಅಂತ್ಯ ರಾಜಕಾರಣʼದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೆ ದಾಖಲೆಯ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು ಶನಿವಾರ ದೇಶದಾದ್ಯಂತ ಇಂಧನ ದರವನ್ನು ಮತ್ತೆ ಹೆಚ್ಚಳ ಮಾಡಿದ್ದು, ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 35 ಪೈಸೆ ಏರಿಕೆಯಾಗಿದ್ದು, 105.49 ರೂ.ಗೆ ತಲುಪಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರವು 35 ಪೈಸೆ ಏರಿಕೆಯಾಗಿದ್ದು, 94.22 ರೂ. ತಲುಪಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 36 ಪೈಸೆ ಏರಿಕೆಯಾಗಿದ್ದು, 109.16 ರೂ.ಗೆ ತಲುಪಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರವು 37 ಪೈಸೆ ಏರಿಕೆಯಾಗಿ, ಶತಕ(100) ಭಾರಿಸಿದೆ.

ಹಾಲಕ್ಕಿ ಒಕ್ಕಲಿಗರನ್ನು ಎಸ್‌ಟಿಗೆ ಸೇರ್ಪಡಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಧರಣಿ – ಮಾಜಿ ಶಾಸಕ ಸತೀಶ್ ಸೈಲ್

ಹಾಲಕ್ಕಿ ಒಕ್ಕಲಿಗರ ಬೇಡಿಕೆ ಈಡೇರಿಕೆಗಾಗಿ ಪಕ್ಷಾತೀತ ಹೋರಾಟದ ಅವಶ್ಯಕತೆ ಇದೆ. ಇದರ ಪ್ರಾರಂಭಿಕ ಹಂತವಾಗಿ ಬೆಳಗಾವಿ ಅಧಿವೇಶದಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಯಿತು

ಸಿಹಿತಿಂಡಿಯ ವಿಷ ರಹಸ್ಯ ! ಸಿಹಿತಿಂಡಿಗೆ ಬಳಸೋ ತುಪ್ಪ, ಖೋವಾನೂ ನಕಲಿ, ಕಿಲ್ಲರ್ ಕಲರ್ ಬಳಸ್ತಾರೆ ಜೋಕೆ. ವಿಜಯಟೈಮ್ಸ್ನಿಂದ ಸಿಹಿ ತಿಂಡಿಯೊಳಗಿನ ಕೊಳಕು ಸೀಕ್ರೆಟ್ ಬಯಲು.

ಸಿಹಿ ತಿಂಡಿ ಪ್ರಿಯರೇ ನಿಮಗಿದೆ ಶಾಕಿಂಗ್ ನ್ಯೂಸ್ ! ನಕಲಿ ಸಿಹಿತಿಂಡಿ ತಯಾರು ಮಾಡೋ ಫ್ಯಾಕ್ಟರಿಗಳಿವೆ. ಕಡಿಮೆ ಬೆಲೆಯ ಸಿಹಿತಿಂಡಿಯೊಳಗಿದೆ ವಿಷ ರಾಸಾಯನಿಕ !. ನಕಲಿ ಹಾಲು, ಗೋಡೆಗೆ ಬಳಿಯೋ ವಾಲ್ಪುಟ್ಟಿ ಹಾಕ್ತಾರೆ. ತುಪ್ಪ, ಖೋವಾನೂ ನಕಲಿ, ಕಿಲ್ಲರ್ ಕಲರ್ ಬಳಸ್ತಾರೆ ಜೋಕೆ. ವಿಷಯುಕ್ತ ನಕಲಿ ಸಿಹಿ ತಿಂದ್ರೆ ನಿಮ್ಮ ಆರೋಗ್ಯ ಢಮಾರ್. ಕಿಡ್ನಿ, ಲಿವರ್, ಎಲುಬಿನ ಜೊತೆ ಚರ್ಮ, ಕರುಳೂ ಹಾಳಾಗುತ್ತೆ

ಶುಲ್ಕ ವಸೂಲಾತಿ ಮಾಡಲು ಶಾಲೆಗಳಿಗೆ ಮುಕ್ತ ಅವಕಾಶ

ಕಳೆದ ಮೇ 20ರಂದು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದ ನ್ಯಾಯಾಲಯ ಕಂತು ಪಾವತಿಯ ಗಡುವು ಬಹಳ ಹಿಂದೆಯೇ ಮುಗಿದಿದ್ದರೂ ಪೋಷಕರು, ಪಾಲಕರು ಇನ್ನೂ ಹಣ ಪಾವತಿಸಿಲ್ಲ ಹಾಗೂ ಮರುಪಾವತಿಗೆ ವಿಫಲರಾಗಿದ್ದಾರೆ ಎಂದು ಶಾಲೆಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಪಿ.ಎಂ ಖಾನ್ಸಿಲ್ಕರ್ ಮತ್ತು ಸಿ.ಟಿ ರವಿಕುಮಾರ್‌ ಅವರಿದ್ದ ಪೀಠ ಅದೇಶ ನೀಡಿದೆ.