2021ರ ಖೇಲೋ ಇಂಡಿಯಾದ ಭಾಗವಾಗಿ ನಾಲ್ಕು ಕ್ರೀಡೆಗಳ ಸೇರ್ಪಡೆಗೆ ಕ್ರೀಡಾ ಸಚಿವಾಲಯ ಅನುಮೋದನೆ

ದೆಹಲಿ, ಡಿ. 24: ದೇಶದ ಯುವ ಕ್ರೀಡಾಪಟುಗಳ ಪ್ರತಿಭೆ ಅನಾವರಣಗೊಳಿಸುವ ಜತೆಗೆ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಹೊಸದಾಗಿ ನಾಲ್ಕು ಸ್ಥಳೀಯ ಕ್ರೀಡೆಗಳನ್ನು ಸೇರಿಸಲು ಕ್ರೀಡಾ ಸಚಿವಾಲಯ ಅನುಮೋದನೆ ನೀಡಿದೆ.

ಖೇಲೋ ಇಂಡಿಯಾ ಯೂತ್ ಗೇಮ್ಸ್ 2021ರ ಭಾಗವಾಗಲು ನಾಲ್ಕು ಸ್ಥಳೀಯ ಕ್ರೀಡೆಗಳಾದ ಗಟ್ಕಾ, ಕಲರಿಪಯಟ್ಟು, ಥಾಂಗ್-ತಾ ಮತ್ತು ಮಲ್ಲ ಕಂಬ ಕ್ರೀಡೆಗಳು ಖೇಲೋ ಇಂಡಿಯಾದ ಭಾಗವಾಗಿ ಪ್ರತಿನಿಧಿಸುತ್ತವೆ.

ಈ ನಾಲ್ಕು ದೇಶಿ ಕ್ರೀಡೆಗಳು ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸಲಿವೆ. ಕಲರಿಪಯಟ್ಟು ಕ್ರೀಡೆ ಕೇರಳ ರಾಜ್ಯವನ್ನು ಪ್ರತಿನಿಧಿಸಿದರೆ, ದೇಶದಲ್ಲಿ ಈಗಾಯ ಭಾರತದಾದ್ಯಂತ ಚಿರಪರಿಚಿತವಾಗಿರುವ ಮಲ್ಲ ಕಂಬ ಮಧ್ಯಪ್ರದೇಶ ಹಾಗೂ
ಮಹಾರಾಷ್ಟ್ರ ಈ ಕ್ರೀಡೆಯ ತಾಣಗಳಾಗಿವೆ. ಗಟ್ಕಾ ಪಂಜಾಬ್‌ನಿಂದ ಹುಟ್ಟಿಕೊಂಡಿದೆ ಮತ್ತು ಸಿಖ್ ವಾರಿಯರ್ಸ್‌ನ ಈ ಸಾಂಪ್ರದಾಯಿಕ ಹೋರಾಟದ ಶೈಲಿಯು ಆತ್ಮರಕ್ಷಣೆ ಮತ್ತು ಕ್ರೀಡೆಯಾಗಿ ಬಳಸಲಾಗುತ್ತದೆ.

ಇವುಗಳ ಜತೆಗೆ ಇತ್ತೀಚಿನ ದಶಕಗಳಲ್ಲಿ ಮಣಿಪುರದ ವೈವಾಹಿಕ ಕಲೆ ಥಾಂಗ್-ಟಾ ಕ್ರೀಡೆ ಪ್ರಖ್ಯಾತಿ ಪಡೆದಿದೆ.

Exit mobile version