download app

FOLLOW US ON >

Saturday, May 28, 2022
Breaking News
ತೃತೀಯ ರಂಗಕ್ಕೆ ದೇವೇಗೌಡರ ಮಾರ್ಗದರ್ಶನ ; ಕೆಸಿಆರ್ ತಂತ್ರ!ಹಳೇ ಪಠ್ಯಪುಸ್ತಕವನ್ನೇ ಮುಂದುವರೆಸಲು ಕರವೇ ನಾರಾಯಣಗೌಡ ಆಗ್ರಹ!ಹಿಂದಿನ ಸರ್ಕಾರಗಳು ತಂತ್ರಜ್ಞಾನವನ್ನು ಬಡವರ ವಿರೋಧಿ ಎಂದು ಬಿಂಬಿಸಿದ್ದವು : ಮೋದಿ!ಬಿಜೆಪಿಗೆ ಡಿಕೆಶಿ ಅವರಂತ ಕಳ್ಳರ ಅವಶ್ಯಕತೆ ಇಲ್ಲ : ಯತ್ನಾಳ್!ಇಂದಿರಾ ಕ್ಯಾಂಟೀನ್ ನಿರ್ವಹಣೆ ಇಸ್ಕಾನ್‍ಗೆ ವಹಿಸಲು ಚಿಂತನೆ!ಮೋದಿ ಮೂಲಗುರಿ ಪ್ರಾದೇಶಿಕ ಪಕ್ಷಗಳ ಮೂಲೋತ್ಪಾಟನೆ : ಹೆಚ್.ಡಿ ಕುಮಾರಸ್ವಾಮಿ!ಚೆನ್ನಪಟ್ಟಣದಲ್ಲಿ ಡಿಕೆಶಿ ವಿರುದ್ದವೇ ಬಂಡಾಯ ಸಾರಿದ ಭಾವ ಶರತ್‍ಚಂದ್ರ!ಸಂವಿಧಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ, ಇತ್ತ ‘ಆಪರೇಷನ್ ಕಮಲ’ : ಮೋದಿಗೆ ಹೆಚ್.ಡಿ.ಕೆ ಟಾಂಗ್!ಆರ್‍ಎಸ್‍ಎಸ್‍ನವರು ಮೂಲ ಭಾರತೀಯರಲ್ಲ : ಸಿದ್ದರಾಮಯ್ಯ!ದಾಳಿ ವೇಳೆ ನನ್ನ ಗೌಪ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ ಸಿಬಿಐ : ಕಾರ್ತಿ ಚಿದಂಬರಂ!
English English Kannada Kannada

January 8, 2022

ಹಾಟ್‌ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಶಾರುಖ್‌ ಪುತ್ರಿ

ಈಗಾಗಲೇ ಬರೋಬ್ಬರಿ 2 ಮಿಲಿಯನ್​ಗೂ ಅಧಿಕ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುವ, ಇತ್ತೀಚೆಗೆ ಸಖತ್ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸುಹಾನಾ ಪೋಸ್ಟ್​​ಗಳಿಗೆ ಫ್ಯಾನ್ಸ್ ಚಕಿತರಾಗಿದ್ದು, ಬಾಲಿವುಡ್ ಪ್ರವೇಶ ಯಾವಾಗ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಮಣಿಪುರದಲ್ಲಿ 2 ಹಂತದಲ್ಲಿ ಚುನಾವಣೆ

ಮಣಿಪುರದ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 27ರಂದು ಮೊದಲ ಹಂತದ ಚುನಾವಣೆ ನಡೆದರೆ, ಮಾರ್ಚ್ 3ರಂದು ಎರಡನೇ ಹಾಗೂ ಕೊನೆಯ ಹಂತದ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಮಣಿಪುರದ ಜೊತೆಗೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಯಶ್‌ ಹುಟ್ಟುಹಬ್ಬಕ್ಕೆ ಕೆಜಿಎಫ್‌ 2 ಪೋಸ್ಟರ್‌ ಬಿಡುಗಡೆ

ಹುಟ್ಟುಹಬ್ಬದ ಹಿನ್ನಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಎಫ್ 2 ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ . ಅವರ  ಜನ್ಮದಿನದಂದೇ ಪೋಸ್ಟರ್  ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ  ಖುಷಿ ಪಟ್ಟಿದ್ದಾರೆ. ರಾಕಿ ಬಾಯ್ ಬರ್ತಡೆಗೆ ಕೆಜಿಎಫ್ 2 ಸಿನಿಮಾದ ಟೀಸರ್  ಹೊರಬರಬಹುದು ಎಂದು ನಿರೀಕ್ಷೆ ಇತ್ತು ಆದರೆ ಈಗ ಅದು ಸುಳ್ಳಾಗಿದೆ.  ಇದರ ಬದಲು ಅವರ ಅಭಿಮಾನಿಗಳಿಗೆ ಖುಷಿಯಾಗಲಿ ಎಂಬ ಕಾರಣಕ್ಕಾಗಿ ಚಿತ್ರತಂಡ ಕೆಜಿಎಫ್‌ 2ನ  ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ

ಪಂಚ ರಾಜ್ಯ ಚುನಾವಣೆಗೆ ದಿನಾಂಕ ನಿಗದಿ

ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ (Chief Election Commissioner Sushil Chandra), ಉತ್ತರ ಪ್ರದೇಶ, ಉತ್ತರಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದರು.  ಒಟ್ಟಾರೆ 690 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಬುಲ್ಲಿ ಬಾಯ್‍ ಆ್ಯಪ್‍ನ ಪ್ರಮುಖ ಆರೋಪಿ ಬಂಧನ

ಬಿಶ್ನೋಯ್ ತನ್ನ ಗುರುತನ್ನು ಹಾಗೂ ಈ ಆಪ್‌ ತಯಾರಿಸಿದ್ದು ಏಕೆ ಎಂಬ ಕಾರಣಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದ. ಅಸ್ಸಾಂನ ಜೊರ್ಹಾತ್‌ನಲ್ಲಿರುವ ತನ್ನ ಪೋಷಕರ ಮನೆಯಲ್ಲಿ ಇದ್ದಾಗ ಆತ ಟ್ವಿಟ್ಟರ್‌ನಲ್ಲಿ ‘ಬುಲ್ಲಿಬಾಯಿ’ ಖಾತೆಯಲ್ಲಿ ತಾನು ನೇಪಾಳದ ಸುಂಧಾರ ನಿವಾಸಿ ಎಂದು ಹೇಳಿಕೊಂಡಿದ್ದ. ತನಗೆ ಪಾಕಿಸ್ತಾನಿ ಸಂಸ್ಥೆಗಳು ಬುಲ್ಲಿ ಬಾಯ್‍ ಆ್ಯಪ್ ಸೃಷ್ಟಿಸಲು ಹಣ ನೀಡಿದ್ದು, ತನ್ನ ಯೋಜನೆಯಲ್ಲಿ ಯಶಸ್ಸು ಕಂಡಿದ್ದಾಗಿ ಹೇಳುವ ಮೂಲಕ ತನಿಖಾಧಿಕಾರಿಗಳ ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಕಾಳಿಚರಣ್‌ ಮಹರಾಜ್‌ಗೆ ಜಾಮೀನು

ಮಹಾತ್ಮ ಗಾಂಧಿ ಅವಹೇಳನಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಸಾಕ್ಷಿ ಮಹಾರಾಜ್‌ರನ್ನು ಬಿಡುಗಡೆಗೊಳಿಸುವಂತೆ ಹಲವು ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರಕರಣದಲ್ಲಿ ಏಕಮುಖವಾಗಿ ತನಿಖೆ ನಡೆಸಲಾಗಿದೆ, ಹಿಂದೂ ಸಮುದಾಯವನ್ನು ಪ್ರಚೋದಿಸಲು ಕಾಳಿಚರಣ್ ಮಹಾರಾಜ್‌ರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ತಕ್ಷಣವೇ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕೆಂದು ಹಿಂದುತ್ವವಾದಿಗಳು ಆಗ್ರಹಿಸಿದ್ದರು.

2021ರ ಅತ್ಯಂತ ಪ್ರಭಾವಿ ವ್ಯಕ್ತಿ ಪಟ್ಟಿಯಲ್ಲಿ ಮೋದಿಗೆ ಪ್ರಥಮ ಸ್ಥಾನ

ಭಾರತೀಯ ಕ್ರಿಕೆಟ್ ತಂಡದ ನಾಯಕರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಕೂಡ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಪ್ರಮುಖ ಗ್ರಾಹಕ ಡೇಟಾ ಗುಪ್ತಚರ ಕಂಪನಿ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ತಿಳಿಸಿದೆ.

ಪಾದಯಾತ್ರೆಯಿಂದ ಸಮಸ್ಯೆ ಪರಿಹಾರವಾಗುವುದಾದರೆ ನಾನೇ ಮುಂಚೂಣಿಯಲ್ಲಿರುತ್ತೇನೆ – ಹೆಚ್‌ಡಿಕೆ

ಮೇಕೆದಾಟು ಪಾದಯಾತ್ರೆ ಮೂಲಕ ಆ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡುತ್ತದೆ ಎಂದು ಕಾಂಗ್ರೆಸ್ಸಿಗರು ನನಗೆ ಗ್ಯಾರಂಟಿ ಕೊಟ್ಟರೆ ನಾನು ಕೂಡ ಎಲ್ಲರಿಗಿಂತ ಮೊದಲೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ವಿದೇಶದಿಂದ ಆಗಮಿಸುವವರಿಗೆ ಹೋಮ್‌ ಕ್ವಾರಂಟೈನ್ ಕಡ್ಡಾಯ

ಪ್ರಸ್ತುತ ದೇಶದಲ್ಲಿ ಕೋವಿಡ್ -19 ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿಅಧಿಸೂಚನೆಯನ್ನು ಹೊರಡಿಸಲಾಗಿದೆ.
ಕೇರಳದಲ್ಲಿ ಇದುವರೆಗೆ 280 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ ಮತ್ತು ಕಡಿಮೆ ಅಪಾಯದ ದೇಶಗಳಿಂದ ಬಂದವರಿಂದ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ

ಕಾಂಗ್ರೆಸ್‌ ಪಾದಯಾತ್ರೆಗೆ ಬೀಳುತ್ತಾ ಬ್ರೇಕ್‌ ?

ಪಾದಯಾತ್ರೆಗೆ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಮೇಕೆದಾಟುವಿಗೆ ಹೋಗಲು ಪಂಚಾಯಿತಿ ಮಟ್ಟದಲ್ಲಿ ವಾಹನ ವ್ಯವಸ್ಥೆ ಮಾಡಿ ಜನರನ್ನು ಸಜ್ಜುಗೊಳಿಸಿದ್ದಾರೆ. ಆದರೆ, ಕಳೆದೆರಡು ದಿನಗಳಿಂದ ಪೊಲೀಸರು ಕೈಗೊಳ್ಳುತ್ತಿರುವ ಕ್ರಮ ಹಾಗೂ ವೈರಸ್ ಹರಡುವ ಭೀತಿಯು ಹಲವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಕುರಿತು ಮರುಚಿಂತನೆ ಮಾಡಲು ಆರಂಭಿಸಿದ್ದಾರೆಂದು ತಿಳಿದುಬಂದಿದೆ.

error: Content is protected !!

Submit Your Article