2023 ರ ಏಕದಿನ ವಿಶ್ವಕಪ್‌ ಬಗ್ಗೆ ಪಾಕ್‌ ಕ್ರಿಕೆಟ್‌ ನೂತನ ಅಧ್ಯಕ್ಷರ ನಿರ್ಧಾರವೇನು?

Karachi : 2023ರ ಏಷ್ಯಾಕಪ್ ಕ್ರಿಕೆಟ್ ಪಾಕಿಸ್ತಾನದಲ್ಲಿ ನಡೆಯಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾದ ನಜಮ್‌ ಸೇಥಿ “2023 ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಕ್ರಿಕೆಟಿಗೆ (2023 ODI World Cup) ಪಾಕಿಸ್ತಾನ ತಂಡವನ್ನು ಕಳುಹಿಸುವ ನಿರ್ಧಾರವನ್ನು ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲಾಗುವುದು” ಎಂದು ಕರಾಚಿಯಲ್ಲಿ ಹೇಳಿದ್ದಾರೆ.

ಹಾಗೂ ಈ ಹಿಂದಿನ ಅಧ್ಯಕ್ಷ ರಮೀಜ್‌ ರಾಜಾ (Rameez Raja) “ 20023ರಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ ಬರದಿದ್ದರೆ ಪಾಕ್,

ಹಿಂದೆ ಸರಿಯಲಿದೆ “ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಇವರು ಪಾಕ್‌ ಟೀಮ್ ಭಾರತಕ್ಕೆ ಹೋಗಬಾರದು ಎಂದು ಸರ್ಕಾರ ಆದೇಶಿಸಿದರೆ ನಾವು ಹೋಗಲ್ಲ ಎಂದಿದ್ದಾರೆ.

ಇದನ್ನೂ ಓದಿ: https://vijayatimes.com/nirmala-sitharaman-admitted-to-hospital/

ಈ ಹಿಂದೆ ಪಾಕಿಸ್ತಾನ (2023 ODI World Cup) ಕ್ರಿಕೆಟ್ ಮಂಡಳಿಯ ಹಿಂದಿನ ಅಧ್ಯಕ್ಷ ರಮೀಜ್‌ ರಾಜ “ 2023ರಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಕ್ಕೆ ಭಾರತ ತಂಡವು ಪಾಕಿಸ್ತಾನಕ್ಕೆ ಬರದಿದ್ದರೆ ,

2023ರ ಏಕದಿನ ವಿಶ್ವಕಪ್ ಟೂರ್ನಿಯಿಂದ ಪಾಕ್‌ ತಂಡ ಹೊರಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಭಾರತ ಪಾಕಿಸ್ತಾನ ತಂಡ ಮುಖಾಮುಖಿಯಾಗಿಲ್ಲದಿದ್ದರೆ ಯಾರು ಕೂಡ ಈ ಟೂರ್ನಿಯನ್ನು (Tourney) ನೋಡುವುದಿಲ್ಲ,

ಭಾರತ ಪಾಕಿಸ್ತಾನ ಪಂದ್ಯವನ್ನು ನೋಡಲು ಅಭಿಮಾನಿಗಳು ಬಯಸುತ್ತಾರೆ ಎಂದು ಈ ಹಿಂದೆ ಎಚ್ಚರಿಸಿದ್ದರು.

ಈ ವಿಚಾರಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಈ ಬಗ್ಗೆ ಮಾತನಾಡಿದ ರಮೀಜ್‌ ರಾಜ “ಏಷ್ಯಾ ಕಪ್‌ ಟೂರ್ನಿಯ ಆತಿಥ್ಯವನ್ನು ನಮಗೆ ನೀಡಿ,

ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದಿಲ್ಲವೆಂಬಂತೆ ಹೇಳಿಕೆಗಳನ್ನು ಏಕು ಕೊಡುತ್ತೀರಿ?

ಪಾಕಿಸ್ತಾನಕ್ಕೆ ಭಾರತ ಬರಲ್ಲ ಎಂಬುದನ್ನು ನಾನು ಸ್ವೀಕರಿಸಿದ್ದೇನೆ ಏಕೆಂದರೆ, ಸರ್ಕಾರ ಇದಕ್ಕೆ ಅನುಮತಿ ನೀಡುವುದಿಲ್ಲ.

ಆದರೆ, ಇದರ ಆಧಾರದ ಮೇಲೆ ಏಷ್ಯಾ ಕಪ್‌ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನದಿಂದ ಕಿತ್ತುಕೊಳ್ಳುವುದು ಸರಿಯಲ್ಲ,” ಎಂದರು.

“ಭಾರತ ಮತ್ತು ಪಾಕಿಸ್ತಾನ ಟೂರ್ನಿಗೆ ಜನ ಕಾತರದಿಂದ ಕಾಯುತ್ತಿರುತ್ತಾರೆ , ನಾನು ಹಲವು ಐಪಿಎಲ್ (IPL) ಆಟಗಳಲ್ಲಿ ಕಾಮೆಂಟರಿ ಕೊಟ್ಟಿದ್ಟೇನೆ.

ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ನೋಡಲು ಅಭಿಮಾನಿಗಳು ಬಯಸುತ್ತಾರೆ ಎಂದು ನನಗೆ ತಿಳಿದಿದೆ.

ಈ ವಿಷಯಕ್ಕೆ ಐಸಿಸಿ ನಡೆತೆಯ ಬಗ್ಗೆ ನನಗೆ ಸ್ವಲ್ಪ ನಿರಾಶೆಯಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಗೌತಮ್‌ ಗಂಭೀರ್‌ ರವರ ಅಭಿಪ್ರಾಯ: ಈ ಬಗ್ಗೆ ಇತ್ತೀಚೆಗೆ ಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದ ಭಾರತ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ (Gautham Gambhir),

” ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದು ಹಾಗೂ ಪಾಕಿಸ್ತಾನ ತಂಡ ಭಾರತಕ್ಕೆ ಬರುವ ಬಗ್ಗೆ ಪಿಸಿಬಿ ಮತ್ತು ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

https://vijayatimes.com/covid19-vaccination-3rd-dose/

ಈ ಬಗ್ಗೆ ಏನೇ ನಿರ್ಧಾರ ಇದ್ದರೂ ಈ ಎರಡೂ ಮಂಡಳಿಗಳು ತೆಗೆದುಕೊಳ್ಳುತ್ತವೆ,” ಎಂದು ತಿಳಿಸಿದ್ದಾರೆ.

ರಾಜಕೀಯ ಕಾರಣಗಳಿಂದಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ದ್ವಿಪಕ್ಷೀಯ ಸರಣಿಗಳಲ್ಲಿ ಮುಖಾಮುಖಿಯಾಗುತ್ತಿಲ್ಲ.

2008ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡಲು ಕೊನೆಯ ಬಾರಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡಿತ್ತು ಹಾಗೂ 2012ರಲ್ಲಿ ಕೊನೆಯ ಬಾರಿ ಭಾರತಕ್ಕೆ ಪಾಕಿಸ್ತಾನ ಬಂದಿತ್ತು. ಆದರೆ,

ಅಂದಿನಿಂದ ಇಲ್ಲಿಯವರೆಗೂ ರಾಜಕೀಯ ಕಾರಣಗಳಿಂದಾಗಿ ಉಭಯ ತಂಡಗಳು ದ್ವಿಪಕ್ಷೀಯ ಸರಣಿ ಆಡುತ್ತಿಲ್ಲ.

ಕೇವಲ ಐಸಿಸಿ (ICC) ಹಾಗೂ ಎಸಿಸಿ (ACC) ಆಯೋಜಿತ ಟೂರ್ನಿಗಳಲ್ಲಿ ಮಾತ್ರ ಆಡುತ್ತಿವೆ ಎಂದು ಹೇಳಿದ್ದರು.

ರಮೀಜ್‌ ರಾಜ ಹೇಳಿಕೆಗೆ ಕಾರಣ:

ಕಳೆದ ಹಲವು ದಿನಗಳ ಹಿಂದೆ “ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಟೂರ್ನಿ ನಡೆದರೆ ಭಾರತ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ,

ಟೂರ್ನಿಯನ್ನು ಬೇರೆ ಸ್ಥಳದಲ್ಲಿ ಆಯೋಜಿಸಬೇಕೆಂದು ಬಿಸಿಸಿಐ (BCCI) ಕಾರ್ಯದರ್ಶಿಯಾದ ಜಯ ಶಾ (Jay Shah) ಅವರು ಪ್ರಸ್ತಾಪಿಸಿದ್ದರು.
Exit mobile version