Bengaluru : ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ನಡೆದ ಹೈಕಮಾಂಡ್ (High Command) ನಾಯಕರ ಜತೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೊಂಡಿದ್ದು, ಸಭೆ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಸಂಪುಟ ಸೇರಲಿರುವ 24 ಸಚಿವರ ಪಟ್ಟಿ ಅಂತಿಮಗೊಂಡಿದೆ. ಇಂದು (ಮೇ 27) ಬೆಳಗ್ಗೆ 11.45ಕ್ಕೆ ರಾಜಭವನದ ಗಾಜಿನ (24 Ministers To Take Oath) ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ 24 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DCM DK Sivakumar) ಅವರನ್ನೊಳಗೊಂಡ ಅಸ್ತಿತ್ವದಲ್ಲಿರುವ 10 ಸದಸ್ಯರ ಸಂಪುಟಕ್ಕೆ
ಇಂದು 24 ಸದಸ್ಯರು ಸೇರ್ಪಡೆಗೊಂಡರೆ ಅದು ಪರಿಪೂರ್ಣ ಸಚಿವ ಸಂಪುಟವಾಗಲಿದೆ. ಸಾಮಾನ್ಯವಾಗಿ, ಸಚಿವ ಅಭ್ಯರ್ಥಿಗಳ ತೀವ್ರ ಒತ್ತಡದಿಂದಾಗಿ ಒಂದು ಅಥವಾ ಎರಡು ಸಚಿವ ಸ್ಥಾನಗಳು ಖಾಲಿ ಉಳಿಯುತ್ತವೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬುಧವಾರ ರಾತ್ರಿ ದೆಹಲಿಗೆ ತೆರಳಿದ್ದು, ಜಾತಿ, ಪ್ರದೇಶ, ಹಿರಿತನ ಸೇರಿದಂತೆ ನಾನಾ ಮಾನದಂಡಗಳ ಆಧಾರದಲ್ಲಿ (24 Ministers To Take Oath) ತಲಾ ಒಂದು ಪಟ್ಟಿ ತಯಾರಿಸಿದ್ದಾರೆ.
ದೆಹಲಿಗೆ ಬಂದ ನಾಯಕರ ಜತೆ ಕೆ.ಸಿ.ವೇಣುಗೋಪಾಲ್ (KC Venugopal) ತಡರಾತ್ರಿ ಒಂದು ಸುತ್ತಿನ ಸಭೆ ನಡೆಸಿದರು. ವೇಣುಗೋಪಾಲ್ ಅವರ ನಿವಾಸದಲ್ಲಿ ಗುರುವಾರ ಮತ್ತೆ ಎರಡನೇ ಸುತ್ತಿನ ಸಭೆ ನಡೆಯಿತು.
ಇದನ್ನೂ ಓದಿ : https://vijayatimes.com/gold-and-silver-prices-decrease/
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಿನ್ನೆ ಬೆಳಿಗ್ಗೆ 11 ಗಂಟೆಗೆ ರಣದೀಪ್ ಸಿಂಗ್‌ಸುರ್ಜೇವಾಲ (Singh Surjewala),
ವೇಣುಗೋಪಾಲ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ನಡುವೆ ಚರ್ಚೆ ನಡೆಯಿತು. ನಂತರ ಒಟ್ಟು 24 ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಯಿತು.
ಇನ್ನು ರಾಜ್ಯಪಾಲರ ಲಭ್ಯತೆಯ ಬಗ್ಗೆಸರ್ಕಾರ ಮಾಹಿತಿ ತಿಳಿದುಕೊಂಡಿತು. ನೂತನ ಪಾರ್ಲಿಮೆಂಟ್ ಕಟ್ಟಡ ಉದ್ಘಾಟನಾ ಸಮಾರಂಭ ಭಾನುವಾರ ಇರುವ
ಕಾರಣ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಇಂದು ಶನಿವಾರ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲು ಒಪ್ಪಿಗೆ ಸೂಚಿಸಿದ್ದರು.
ನೂತನ ಸಚಿವರ ಪಟ್ಟಿ
ಕೆ.ಎನ್.ರಾಜಣ್ಣ
ಕೃಷ್ಣಭೈರೇಗೌಡ
ಚಲುವರಾಯಸ್ವಾಮಿ
ಹೆಚ್.ಕೆ.ಪಾಟೀಲ್
ಈಶ್ವರ ಖಂಡ್ರೆ
ದಿನೇಶ್ ಗುಂಡೂರಾವ್
ಪಿರಿಯಾಪಟ್ಟಣ ವೆಂಕಟೇಶ್
ಡಾ.ಹೆಚ್.ಸಿ.ಮಹದೇವಪ್ಪ
ಇದನ್ನೂ ಓದಿ : https://vijayatimes.com/gold-and-silver-prices-decrease/
ಆರ್.ಬಿ.ತಿಮ್ಮಾಪುರ
ಶಿವರಾಜ ತಂಗಡಗಿ
ಎಸ್.ಎಸ್.ಮಲ್ಲಿಕಾರ್ಜುನ
ಶರಣಬಸಪ್ಪ ದರ್ಶನಾಪುರ
ಶಿವಾನಂದ ಪಾಟೀಲ್
ಮಂಕಾಳು ವೈದ್ಯ
ಲಕ್ಷ್ಮೀ ಹೆಬ್ಬಾಳ್ಕರ್
ರಹೀಂ ಖಾನ್
ಡಾ.ಶರಣ ಪ್ರಕಾಶ್ ಪಾಟೀಲ್
ಬೋಸರಾಜು
ಮಧು ಬಂಗಾರಪ್ಪ
ಬಿ.ಎಸ್.ಸುರೇಶ್
ಡಿ.ಸುಧಾಕರ್
ಸಂತೋಷ್ ಲಾಡ್
ಬಿ.ನಾಗೇಂದ್ರ
ಎಂ.ಸಿ.ಸುಧಾಕರ್

ಇನ್ನು 2700 ಪೊಲಿಸ್ ಸಿಬ್ಬಂಧಿಯನ್ನು ರಾಜಭವನ ಸುತ್ತಮುತ್ತ ನಿಯೋಜನೆ ಮಾಡಲಾಗಿದೆ.37 ಎಸಿಪಿ, 17 ಡಿಸಿಪಿ (DCP), 208 ಪಿಎಸ್ಐ (PSI), 114 ಇನ್ಸ್ ಪೆಕ್ಟರ್ ಸೇರಿ ಒಟ್ಟು 2700 ಪೊಲೀಸರನ್ನು ನಿಯೋಜಿಸಲಾಗಿದೆ.ಇನ್ನು 200 ಕ್ಕೂ ಅಧಿಕ ಪೊಲೀಸರು ಮಫ್ತಿಯಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ. ವಾಟರ್ಜೆಟ್, ಡಿಸ್ವಾಟ್ ಕ್ರಮವಾಗಿ ಮುಂಜಾಗ್ರತಾ ಕ್ರಮವಾಗಿ ನಿಯೋಜನೆ ಮಾಡಲಾಗಿದೆ.
- ರಶ್ಮಿತಾ ಅನೀಶ್