ಕಳೆದ ೨೪ಗಂಟೆಗಳಲ್ಲಿ 3.43 ಲಕ್ಷ ಹೊಸ ಕೊವಿಡ್ ಪ್ರಕರಣಗಳು ಪತ್ತೆ

ನವದೆಹಲಿ, ಮೇ. 14: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3.43 ಲಕ್ಷ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 4,000 ಕೊವಿಡ್ ರೋಗಿಗಳು ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು ರೋಗಿಗಳ ಸಂಖ್ಯೆ 2,40,46,809 ಆಗಿದ್ದು, 37,04,893 ಸಕ್ರಿಯ ಪ್ರಕರಣಗಳಿವೆ. ಈವರೆಗೆ 2,00,79,599 ಮಂದಿ ಚೇತರಿಸಿಕೊಂಡಿದ್ದು 2,62,317 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ .

ಮಹಾರಾಷ್ಟ್ರದಲ್ಲಿ 42,582 ಹೊಸ ಪ್ರಕರಣಗಳು ವರದಿ ಆಗಿದ್ದು ಕೇರಳದಲ್ಲಿ ಪ್ರಕರಣಗಳ ಸಂಖ್ಯೆ 39,955 ಆಗಿದೆ. ಅತೀ ಹೆಚ್ಚು ಪ್ರಕರಣಗಳಿರುವ ಐದು ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಇಲ್ಲ. ಆಂಧ್ರಪ್ರದೇಶದಲ್ಲಿ 22,000 ಕ್ಕೂ ಹೆಚ್ಚು ಪ್ರಕರಣಗಳಿವೆ. ಗುರುವಾರ ವರದಿಯಾದ ಸಾವಿನ ಸಂಖ್ಯೆಗಳಲ್ಲಿ ಮಹಾರಾಷ್ಟ್ರದಲ್ಲಿ 882 ಮತ್ತು ಕರ್ನಾಟಕದಲ್ಲಿ 344 ಸಾವು ವರದಿ ಆಗಿದೆ.

ಭಾರತಕ್ಕೆ ಸರಬರಾಜು ಮಾಡಲು ಮೂರು ಜಾಗತಿಕ ಲಸಿಕೆ ತಯಾರಕರಾದ ಪೈಜರ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಫಾರ್ಮಾ ಕಂಪನಿಗಳ ಜತೆ ಸಂವಹನ ನಡೆಸಿದ್ದು, ಅವರು Q3, 2021 (ಜುಲೈ ತಿಂಗಳಲ್ಲಿ) ಮಾತ್ರ ಚರ್ಚೆಗೆ ತೆರೆದುಕೊಳ್ಳಲಿದ್ದಾರೆ ಎಂದು ಹೇಳಿದೆ. ಹಾಗಿದ್ದರೂ, ಆಗಸ್ಟ್ ಮತ್ತು ಡಿಸೆಂಬರ್ ನಡುವೆ ಐದು ತಿಂಗಳಲ್ಲಿ ಎರಡು ಬಿಲಿಯನ್ ಡೋಸ್ ಕೊವಿಡ್ -19 ಲಸಿಕೆಗಳು ದೇಶದಲ್ಲಿ ಲಭ್ಯವಾಗಬಹುದು ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ ಕೆ ಪೌಲ್ ಹೇಳಿದ್ದಾರೆ.

Exit mobile version