ಕಳೆದ 24 ಗಂಟೆಗಳಲ್ಲಿ 37,593 ಹೊಸ ಕೋವಿಡ್ ಕೇಸ್, 648 ಮಂದಿ ಸಾವು

ನವದೆಹಲಿ, ಆ. 25: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 37,593 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 648 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 3,25,12,366 ಕ್ಕೆ ಏರಿಕೆಯಾಗಿದ್ದು, ಆ ಪೈಕಿ 4,35,758 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ 3,17,54,281 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 3,22,327 ಸಕ್ರಿಯ ಪ್ರಕರಣಗಳಿವೆ.

ಕೇರಳದಲ್ಲಿ 1,59,870, ಮಹಾರಾಷ್ಟ್ರದಲ್ಲಿ 53,260, ಕರ್ನಾಟಕದಲ್ಲಿ 19,810, ತಮಿಳುನಾಡಿನಲ್ಲಿ 18,603, ಆಂಧ್ರಪ್ರದೇಶದಲ್ಲಿ 13,677 ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಈವರೆಗೆ 59,55,04,593 ಡೋಸ್‌ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Exit mobile version