ಅಸ್ಸಾಂನಲ್ಲಿ 5.2ರಷ್ಟು ತೀವ್ರತೆಯ ಭೂಕಂಪ

ಗುವಾಹಟಿ, ಜು. 07: ಅಸ್ಸಾಂನಲ್ಲಿ ಬುಧವಾರ ಬೆಳಿಗ್ಗೆ 5.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಬಾಂಗ್ಲಾದೇಶ ಸೇರಿದಂತೆ ನೆರೆ ರಾಜ್ಯಗಳಾದ ಮೇಘಾಲಯ ಮತ್ತು ಪಶ್ಚಿಮ ಬಂಗಾಳದ ಉತ್ತರ ಭಾಗಗಳಲ್ಲೂ ಭೂಕಂಪದ ಅನುಭವ ಆಗಿದೆ.

ಅಸ್ಸಾಂನಲ್ಲಿ ಬೆಳಿಗ್ಗೆ 8.45ಕ್ಕೆ ಭೂಕಂಪ ಸಂಭವಿಸಿದ್ದು, ಗೋಲ್ಪಾರದಲ್ಲಿ 14 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಕಂಪ ಸಂಭವಿಸಿದ ಸ್ಥಳದಿಂದ 71 ಕಿ.ಮೀ ದೂರದಲ್ಲಿರುವ ಮೇಘಾಲಯದ ಉತ್ತರ ಭಾಗದ ತುರಾದಲ್ಲೂ ಭೂಮಿ ನಡುಗಿದ ಅನುಭವ ಆಗಿದೆ. ಗುವಾಹಟಿ ಮತ್ತು ಮೇಘಾಲಯದ ಜನರು ಭಯದಿಂದ ಮನೆಯಿಂದ ಹೊರಗೆ ಬಂದಿದ್ದಾರೆ’ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ (ಆರ್‌ಎಂಸಿ) ಉಪನಿರ್ದೇಶಕ ಸಂಜಯ್ ಒನೀಲ್ ಶಾ ಅವರು ಹೇಳಿದರು.

ಭೂಕಂಪದಿಂದ ಯಾವುದೇ ಸಾವು–ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

Exit mobile version