5 ಗ್ಯಾರಂಟಿಗಳನ್ನು ಇಂದೇ ಜಾರಿ ಮಾಡುತ್ತೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Bengaluru : ನಗರದ ಕಂಠೀರವ ಕ್ರೀಡಾಂಗಣದಲ್ಲಿ (Kantheerava Stadium) ಇಂದು (ಮೇ 20) ಸಿದ್ದರಾಮಯ್ಯ (Siddaramaiah) ರವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ (5 Congress guarantees enforcement) ವಚನ ಸ್ವೀಕರಿಸಿದರು. ತದನಂತರ ಮೊದಲ ಬಾರಿಗೆ ರಾಜ್ಯವನ್ನು ಉದ್ದೇಶಿಸಿ
ಕಾಂಗ್ರೆಸ್ (Congress) ಪಕ್ಷದ ಈ ಗೆಲುವು 7 ಕೋಟಿ ಕನ್ನಡಿಗರ ಜಯವಾಗಿದೆ.

ಇಂದು ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ರಾಜ್ಯದ ಜನತೆಯ ಗೆಲುವಾಗಿದೆ ಎಂದರು. ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ (5 Congress guarantees enforcement) ಬಂದು ಸರ್ಕಾರ ರಚನೆಯಾಗಿದೆ.

ನಾವು ಜನರಿಗೆ ಆಶ್ವಾಸನೆ ಕೊಟ್ಟ ಎಲ್ಲಾ ಭರವಸೆಗಳನ್ನು ಕೊಡುತ್ತೇವೆ ಇನ್ನು ಮುಂದೆ ಜನರ ಇಚ್ಛೆಯಂತೆ ಆಡಳಿತ ನಡೆಸಬೇಕು.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಆದೇಶ ಹೊರಡಿಸಿ ಜನರಿಗೆ ಐದು ಭರವಸೆಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತೇವೆ.

ಇದು ನಮ್ಮ ಹೊಸ ಸರ್ಕಾರದ ಭರವಸೆ ಎಂದರು. ಇದನ್ನು ಇದನ್ನು ಈಡೇರಿಸಿಯೇ ತೀರುತ್ತೇವೆ ಎಂದು ಅವರು ಹೇಳಿದರು. ನಾವು ಹಿಂದೆ ಹೇಳಿದ್ದನ್ನೇ ಮುಂದೆಯೂ ಅನುಸರಿಸುತ್ತೇವೆ ಎಂದರು.

ಇದನ್ನೂ ಓದಿ : https://vijayatimes.com/legal-notice-to-patanjali/

ಕಾಂಗ್ರೆಸ್ ಗೆದ್ದಿದೆ, ಸರ್ಕಾರ ಅಸ್ತಿತ್ವಕ್ಕೆ ಬಂತು, ದೇಶದ ಜನತೆಯ ಆಶೀರ್ವಾದದಿಂದಾಗಿಯೇ ಈ ಆಂದೋಲನ ರಾಹುಲ್ ಗಾಂಧಿಯವರ ಭಾರತ್ ಜೋಡೋದಿಂದ (Bharat Jodo) ಆರಂಭವಾಗಿದೆ.

ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಪ್ರಿಯಾಂಕಾ ಗಾಂಧಿ (Priyanka Gandhi) ಸೇರಿದಂತೆ ಹಲವು ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಧನ್ಯವಾದಗಳು.

ಅಷ್ಟೇ ಅಲ್ಲದೆ ಚಿಂತಕರು,ಸಾಹಿತಿಗಳು,ಯುವಕರು,ಸಂಘಟನೆಗಳಿಗೆ, ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಧನ್ಯವಾದ ತಿಳಿಸಲು ಬಯಸುತ್ತದೆ.


ನಮಗೆ ಶುಭಕೋರಲು ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಹಲವು ರಾಷ್ಟ್ರನಾಯಕರು ಬಂದಿದ್ದಾರೆ.ಕನ್ನಡದ ಎಲ್ಲಾ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ : https://vijayatimes.com/siddaramaiah-takes-oath-2023/

ಇನ್ನು ಈ ಸಮಾರಂಭಕ್ಕೆ ಬಂದಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (AICC President Rahul Gandhi), ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಮತ್ತು ರಾಷ್ಟ್ರದ ಬೇರೆ ಬೇರೆ ರಾಜ್ಯಾಗಳಿಂದ ಬಂದಿರುವ ಮಾಜಿ ಮುಖ್ಯಮಂತ್ರಿಗಳು, ಮುಖ್ಯಮಂತ್ರಿ,ಲೋಕಸಭಾ, ರಾಜ್ಯಸಭಾ ಸದಸ್ಯರಿಗೆ ಧನ್ಯವಾದ ತಿಳಿಸಿದರು.

Exit mobile version