ಮುಂದಿನ ವರ್ಷದಿಂದ 5G ಸೇವೆ ಪ್ರಾರಂಭ

ನವದೆಹಲಿ ಡಿ 3: ಭಾರತದ ಹಲವು ಕಡೆ ಪ್ರಸ್ತುತ 4G ಸೇವೆಗಳಿದ್ದು ಅದನ್ನು 5G ಗೆ ಪರಿವರ್ತಿಸಸಲು ಕೇಂದ್ರ ಚಿಣತನೆ ನಡೆಸಿದ್ದು, ಕೇಂದ್ರ ಸರ್ಕಾರವು 2022 ರ ಆಗಸ್ಟ್ 15 ರೊಳಗೆ 5G ಸೇವೆಗಳನ್ನು ಪ್ರಾರಂಭಿಸಲು ಯೋಜಿಸಿದೆ. ಇದಕ್ಕಾಗಿ ಸ್ಪೆಕ್ಟ್ರಮ್ ಹರಾಜುಗಳು ಮುಂದಿನ ವರ್ಷ ಏಪ್ರಿಲ್-ಮೇ ವೇಳೆಗೆ ನಡೆಯಬಹುದು ಎಂಬ ನಿರೀಕ್ಷೆ ಇದೆ.

ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರು ದೂರಸಂಪರ್ಕ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯನ್ನು ನಡೆಸಿ, ನಿರ್ದಿಷ್ಟ ಸ್ಥಳಗಳು ಮತ್ತು ವಲಯಗಳಲ್ಲಿ 5G ಸೇವೆಗಳನ್ನು ವಾಣಿಜ್ಯಿಕವಾಗಿ ಪ್ರಾರಂಭಿಸುವುದು 2022 ರ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಸಾಧ್ಯವೇ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.

ವರದಿಗಳು ಪ್ರಕಾರ, ಹರಾಜು ಪ್ರಕ್ರಿಯೆಗೆ ಇಡಬಹುದಾದ ಅನಿಯಂತ್ರಿತ ಸ್ಪೆಕ್ಟ್ರಮ್ ಬಗ್ಗೆ ದೂರ ಸಂಪರ್ಕ ಇಲಾಖೆ ಸ್ಪಷ್ಟತೆಯನ್ನು ನೀಡಿದರೆ ಹೇಳಿದ ಸಮಯಕ್ಕೆ 5G ಸೇವೆಗಳನ್ನು ಪ್ರಾರಂಭಿಸಲು ಸಾಧ್ಯವಾಗಲಿದೆ.

“ಕೆಲ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿದರೆ, ಟೆಲಿಕಾಂ ಆಪರೇಟರ್‌ಗಳು ಉಪಕರಣಗಳಿಗಾಗಿ ಆರ್ಡರ್‌ಗಳನ್ನು ನೀಡಬಹುದು ಮತ್ತು 5ಜಿ ಸೇವೆ ಆರಂಭಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಬಹುದು, ಇದರಿಂದಾಗಿ ಏಪ್ರಿಲ್-ಮೇನಲ್ಲಿ ಹರಾಜುಗಳನ್ನು ನಡೆಸಿದಾಗ, ಟೆಲಿಕಾಂಗಳು ಕಡಿಮೆ ಸಮಯದಲ್ಲಿ ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಾಗುತ್ತವೆ ” ಎಂದು ಉದ್ಯಮದ ಮೂಲವೊಂದು ತಿಳಿಸಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಫೆಬ್ರವರಿ-ಮಾರ್ಚ್‌ನಲ್ಲಿ ಸ್ಪೆಕ್ಟ್ರಮ್‌ನ ಬೆಲೆಯ ಕುರಿತು ತನ್ನ ಶಿಫಾರಸುಗಳನ್ನು ಹರಾಜಿಗೆ ಮುಂಚಿತವಾಗಿ ಒದಗಿಸುತ್ತದೆ.

Exit mobile version