ಎಟಿಎಂ ಗೆ ತುಂಬಲು ತಂದ 64 ಲಕ್ಷ ಹಣ ಕದ್ದು ಪರಾರಿಯಾದವನ ಪತ್ತೆ

ಬೆಂಗಳೂರು ,ಫೆ.11: ಫೆ 3 ರಂದು  ಎಟಿಎಂಗೆ ಹಣ  ತುಂಬಲು ಬಂದಿದ್ದ ಎಟಿಎಂ ಚಾಲಕ ಯೋಗೇಶ್ ಅವರು  64 ಲಕ್ಷ ರೂಪಾಯಿಯನ್ನು ಕದ್ದುಕೊಂಡು ಪರಾರಿಯಾಗಿದ್ದರು. ಈ ಆರೋಪಿಯನ್ನು ಬಂಧಿಸಿ ಪೊಲೀಸರು, ಆತನಿಂದ ವಶ ಪಡಿಸಿಕೊಂಡಿರೋದು ಮಾತ್ರ 15 ಸಾವಿರ ರೂಪಾಯಿಗಳನ್ನು ಅಷ್ಟೆ.

ಮಂಡ್ಯದ ಯೋಗೇಶ್ ಸೆಕ್ಯೂರ್ ವ್ಯಾಲ್ಯೂ ಎಜೆನ್ಸಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 3ರಂದು ಎಟಿಎಂಗೆ ಹಣ ತುಂಬಲು ತೆರಳಿದ್ದ ಸಂದರ್ಭದಲ್ಲಿ 64 ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಸುಬ್ರಹ್ಮಣ್ಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯ ಪತ್ತೆಗೆ ಬಲೆ ಬೀಸಿದ ಪೊಲೀಸರು ಆರೋಪಿಯ ಯೋಗೇಶ್ ಪೋನ್ ಟ್ರಾಫ್ ಮಾಡಿದ್ದಂತ ಪೊಲೀಸರಿಗೆ, ಯೋಗೇಶ್ ದಿಕ್ಕು ತಪ್ಪಿಸಿದ್ದರು.  ಸ್ನೇಹಿತರನ್ನು ಸಂಪರ್ಕಿಸಿದ್ದ ಪೊಲೀಸರಿಗೆ ಆತ ಎಲ್ಲಿದ್ದಾನೆ ಎನ್ನುವ ಬಗ್ಗೆಮಾಹಿತಿ ಕಲೆ ಸಿಕ್ಕಿತ್ತು.

ಕಾರ್ಯಾಚರಣೆ ಮುಂದುವರೆಸಿದಂತ ಪೊಲೀಸರು, ಮೈಸೂರಿನ ಲಾಡ್ಜ್ ಒಂದರಲ್ಲಿ ತಲೆ ಮರೆಸಿಕೊಂಡಿದ್ದಂತ ಆರೋಪಿಯನ್ನು  ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ಯೋಗೇಶ್ ಗೆ ಈಗಾಗಲೇ ಮದುವೆಯಾಗಿತ್ತುಆದರೂ ಲಾಡ್ಜ್ ನಲ್ಲಿ ತನ್ನ ಅತ್ತೆಯ ಮಗಳ ಜೊತೆಗೆ ಉಳಿದುಕೊಂಡಿದ್ದ ವೇಳೆ ಆತನನ್ನು ಬಂಧಿಸಲಾಗಿದೆ. ಆತನಿಂದ 15 ಸಾವಿರ ರೂಪಾಯಿ ಮಾತ್ರವೇ ಪೊಲೀಸರ ಕೈಗೆ ಸಿಕ್ಕಿದೆ.   ಮಿಕ್ಕ ಹಣವನ್ನು ಎಲ್ಲಿ ಇಟ್ಟಿದ್ದಾನೆ. ಎನ್ನುವ ಮಾಹಿತಿಯನ್ನು ಪೊಲೀಸರ ಬಳಿ ಬಾಯ್ ಬಿಟ್ಟಿಲ್ಲ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಮತ್ತಷ್ಟು ತನಿಖೆಯನ್ನು ಮುಂದುವರೆಸಿದ್ದಾರೆ.

Exit mobile version