RCB : 7 ಕೋಟಿ ರೂ. ಖರ್ಚು ಮಾಡಿ 7 ಆಟಗಾರರನ್ನು ಸೇರ್ಪಡೆ! ಯಾರಿಗೆ ಎಷ್ಟು ಕೋಟಿ ?

Bengaluru : ರಾಯಲ್‌ ಚಾಲೆಂಜರ್ಸ್‌(Royal Challengers) ಬೆಂಗಳೂರು ತಂಡ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌(Indian Premier League) ಟೂರ್ನಿಗೆ ಈಗ ಸಂಪೂರ್ಣ ಸಜ್ಜಾಗಿದೆ.

2022 ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಆಟಗಾರರ ಕೊರತೆ ಇದ್ದ ಕಾರಣ ಟ್ರೋಫಿ ಗೆಲ್ಲಲಾಗಲಿಲ್ಲ ಎಂಬ ಕಾರಣಕ್ಕಾಗಿ ತನ್ನಲ್ಲಿನ ಕೊರತೆಗಳನ್ನು ನೀಗಿಸಿಕೊಳ್ಳುವ ನಿಟ್ಟಿನಲ್ಲಿ ಐಪಿಎಲ್‌ 2023 ಟೂರ್ನಿ ಸಲುವಾಗಿ ನಡೆದ ಮಿನಿ ಆಕ್ಷನ್‌ನಲ್ಲಿ ಕೆಲ ಅಗತ್ಯದ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ.

ಎಂಟೂವರೆ ಕೋಟಿ ರೂ. ದೊಡ್ಡ ಮೊತ್ತದೊಂದಿಗೆ ಹರಾಜಿನಲ್ಲಿ ಪಾಲ್ಗೊಂಡಿದ್ದ ಚಾಲೆಂಜರ್ಸ್‌ನಲ್ಲಿ , 7 ಕೋಟಿ ರೂ. ಖರ್ಚು ಮಾಡಿ 7 ಆಟಗಾರರನ್ನು ಆಯ್ಕೆ ಮಾಡಿದೆ. ಹರಾಜಿಗೂ ಮೊದಲು ಆರ್‌ಸಿಬಿ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡು ಅವರಲ್ಲಿ 5 ಆಟಗಾರರನ್ನು ಬಿಡುಗಡೆ ಮಾಡಿ ಇದೀಗಾ ಹೊಸದಾಗಿ 7 ಆಟಗಾರರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಇದನ್ನೂ ಓದಿ : https://vijayatimes.com/statement-on-k-sudhakar/

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಐಪಿಎಲ್‌ 2023 ಟೂರ್ನಿಯ ಮಿನಿ ಹರಾಜಿನಲ್ಲಿ 7 ಆಟಗಾರರನ್ನು ತಮ್ಮದಾಗಿಸಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು. ಅದಲ್ಲದೆ ಇಂಗ್ಲೆಂಡ್‌ನ ಆಲ್‌ರೌಂಡರ್‌ ವಿಲ್‌ ಜಾಕ್ಸ್‌ ಖರೀದಿಗೆ 3.2 ಕೋಟಿ ರೂ.ಗಳನ್ನು ಖರ್ಚು ಆರ್‌ಸಿಬಿ ಮಾಡಿದೆ. ಒಟ್ಟಾರೆಯಾಗಿ 8.75 ಕೋಟಿ ರೂ. ಮೊತ್ತದೊಂದಿಗೆ ಆರ್‌ಸಿಬಿ ಹರಾಜಿನಲ್ಲಿ ಪಾಲ್ಗೊಂಡಿತ್ತು.

Exit mobile version