ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ ; ಪೈಲಟ್ ಸೇರಿದಂತೆ 7 ಮಂದಿ ಸಾವು!

Kedarnath : ಉತ್ತರಾಖಂಡದ (Uttarkhand) ಕೇದಾರನಾಥ ಬಳಿ ನಡೆದ ಹೆಲಿಕಾಪ್ಟರ್(7 Dead in Helicopter Crash) ಅಪಘಾತದಲ್ಲಿ ಪೈಲಟ್ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ.

ಕೇದಾರನಾಥದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಗರುಡ್ ಚಟ್ಟಿಯಲ್ಲಿ ಈ ಘಟನೆ (7 Dead in Helicopter Crash)ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಹೆಲಿಕಾಪ್ಟರ್ ಗುಪ್ತಕಾಶಿಯಿಂದ ಹೊರಟು ಕೇದಾರನಾಥಕ್ಕೆ ಹೊರಟಿತ್ತು. ಆರ್ಯನ್ ಏವಿಯೇಷನ್ ​​ಹೆಲಿಕಾಪ್ಟರ್ ಗುಪ್ತಕಾಶಿಯ ಫಾಟಾ ಹೆಲಿಪ್ಯಾಡ್‌ನಿಂದ ಹೊರಟು ಕೇದಾರನಾಥ ಪ್ರದೇಶದತ್ತ ಸಾಗುತ್ತಿತ್ತು. 33 ಕಿ.ಮೀ ದೂರ ಕ್ರಮಿಸಲು ಹೊರಡುವ ಮುನ್ನವೇ ನಿರ್ಧರಿಸಲಾಗಿತ್ತು ಎಂದು ಹೇಳಲಾಗಿದೆ.

ವರದಿಗಳಲ್ಲಿ ಉಲ್ಲೇಖವಾಗಿರುವ ಮಾಹಿತಿ ಅನುಸಾರ, ಹೆಲಿಕಾಪ್ಟರ್ ಗರುಡ ಚಟ್ಟಿ ಪ್ರದೇಶದತ್ತ ಸಾಗುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದು ಇನ್ನು ಖಚಿತವಾಗಿ ತಿಳಿದುಬಂದಿಲ್ಲ. ರಕ್ಷಣಾ ತಂಡಗಳು ಸ್ಥಳದಲ್ಲಿದ್ದು, ಶೀಘ್ರದಲ್ಲೇ ತನಿಖೆ ಆರಂಭವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ : https://vijayatimes.com/bjp-targets-siddaramaiah-2/

ಎತ್ತರದಲ್ಲಿರುವ ಕೇದಾರನಾಥ ಯಾತ್ರಾಸ್ಥಳದ ಹವಾಮಾನವು ಸಾಮಾನ್ಯವಾಗಿ ಅನಿರೀಕ್ಷಿತವಾಗಿರುತ್ತದೆ. ಬಹುಪಾಲು ಯಾತ್ರಾರ್ಥಿಗಳು ಗುಪ್ತಕಾಶಿಯಿಂದ ಕೇದಾರನಾಥಕ್ಕೆ ಪ್ರಯಾಸಕರ ಮಾರ್ಗವನ್ನು ಚಾರಣದ ಮೂಲಕ ತೆರಳಲು ಬಯಸುತ್ತಾರೆ. ಆದ್ರೆ, ಕೆಲವು ಯಾತ್ರಿಗಳು ವಿವಿಧ ಹೆಲಿಕಾಪ್ಟರ್ ಸೇವೆಗಳನ್ನು ಬಳಸಲು ಇಚ್ಛಿಸಿ ಹೆಲಿಕಾಪ್ಟರ್ ಮೊರೆ ಹೋಗುತ್ತಾರೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯದ ಜನರಲ್ (DGCA) ಮೂಲಗಳು, ಸ್ವೀಕರಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ದೆಹಲಿ ಮೂಲದ ನಾನ್-ಶೆಡ್ಯೂಲ್ಡ್ ಆಪರೇಟರ್ಸ್ ಪರ್ಮಿಟ್ (NSOP) ಹೊಂದಿರುವ ಮಿಸ್ ಆರ್ಯನ್ ಏವಿಯೇಷನ್‌ಗೆ ಸೇರಿದ ಬೆಲ್ 407 ಹೆಲಿಕಾಪ್ಟರ್ VT-RPN ಮಾರ್ಗದಲ್ಲಿ ಅಪಘಾತಕ್ಕೀಡಾಗಿದೆ.

https://youtu.be/2gBpiqMiKks ರಸ್ತೆ ಕಾಣದ ಕ್ಷೇತ್ರ! ದಶಕಗಳಿಂದ ಅಭಿವೃದ್ಧಿ ಕಾಣದ ಯಶವಂತಪುರ ಕ್ಷೇತ್ರ.

ಕೇದಾರನಾಥದಿಂದ ಗುಪ್ತಕಾಶಿಗೆ ತೆರಳುವ ಮಾರ್ಗದಲ್ಲಿ ಬಹುಶಃ ಕೆಟ್ಟ ಹವಾಮಾನ ಇದ್ದ ಕಾರಣದಿಂದಲೋ, ಏನೋ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಊಹಿಸಿ ಹೇಳಲಾಗಿದೆ.

Exit mobile version