ವಾಟ್ಸಾಪ್ ಬಳಕೆದಾರರಿಗೆ ಹೊಸ ಹೊಸ ಸೌಕರ್ಯಗಳು ಬರುತ್ತಲೇ ಇವೆ. ವಾಟ್ಸಾಪ್ ಪೇಮೆಂಟ್, ವಾಟ್ಸಾಪ್ ಶಾಶ್ವತ ಮ್ಯೂಟ್, ಮೆಸೇಜ್ ತನ್ನಿಂದ ತಾನೇ ಅಳಿಸಿ ಹಾಕುವ ಪ್ರಕ್ರಿಯೆ ಹೀಗೆ ಅನೇಕ ಸೇವೆಗಳನ್ನ ನೀಡಿದೆ. ಹಾಗಾದರೆ ಕೇವಲ 2 ತಿಂಗಳಲ್ಲಿ ವಾಟ್ಸಾಪ್ ಯಾವ್ಯಾವ ಸೌಲಭ್ಯಗಳ ನೀಡಿದೆ ಅನ್ನೋದರ ಸಾರಾಂಶಗಳ ವಿವರ ಇಲ್ಲಿದೆ ನೋಡಿ.
1) ಡಿಸಪಿಯರಿಂಗ್ ಮೆಸೇಜ್. ಅಂದರೆ ಈ ಬಟನ್ನ್ನ ಕ್ಲಿಕ್ ಮಾಡೋದ್ರಿಂದ ನೀವು ಆಯ್ಕೆ ಮಾಡಿದ ಕಾಂಟ್ಯಾಕ್ಟ್ನ ಮೆಸೇಜ್ಗಳು ಒಂದು ವಾರದಲ್ಲಿ ಡಿಲೀಟ್ ಆಗಲಿದೆ. ಈ ಡಿಸಪಿಯರಿಂಗ್ ಮೆಸೇಜ್ ಆಯ್ಕೆಯನ್ನ ನೀವು ಗ್ರೂಪ್ ಚಾಟ್ಗಳಿಗೂ ಬಳಕೆ ಮಾಡಬಹುದಾಗಿದೆ. ಇದರಿಂದ ನಿಮ್ಮ ಮೊಬೈಲ್ನಲ್ಲಿ ಮೆಮೋರಿ ತುಂಬೋದನ್ನ ನೀವು ತಪ್ಪಿಸಬಹುದಾಗಿದೆ. ನಿಮಗೆ ಬೇಡ ಎನಿಸಿದ್ರೆ ನೀವು ಈ ಆಯ್ಕೆಯನ್ನ ಆಫ್ ಕೂಡ ಮಾಡಬಹುದಾಗಿದೆ.
2) ವಾಟ್ಸಾಪ್ ಪೇಮೆಂಟ್ ಆಯ್ಕೆ ಕೂಡ ಬಳಕೆದಾರರಿಗೆ ಸಿಕ್ಕಾಪಟ್ಟೆ ಅನುಕೂಲಕರವಾಗಲಿದೆ. 2018ರಿಂದ ಎನ್ಪಿಸಿಐ ಒಪ್ಪಿಗೆಗಾಗಿ ಕಾದ ವಾಟ್ಸಾಪ್ ಇದೀಗ ಭಾರತದಲ್ಲಿ ಯಶಸ್ವಿಯಾಗಿ ಲಾಂಚ್ ಆಗಿದೆ.
3) ವಾಟ್ಸಾಪ್ ಪೇ ನ. 6 ರಂದು ಲೋಕಾರ್ಪಣೆಗೊಂಡಿದೆ. ಗೂಗಲ್ ಪೇನಂತೆ ಈ ವಾಟ್ಸಾಪ್ ಪೇ ಕಾರ್ಯ ನಿರ್ವಹಿಸುತ್ತಿದೆ. ಕಳೆದ 2 ತಿಂಗಳಲ್ಲಿ ವಾಟ್ಸಾಪ್ ತಂದ ಮತ್ತೊಂದು ಉತ್ತಮ ಆಯ್ಕೆ ಅಂದರೆ
4) ಶಾಶ್ವತ ಮ್ಯೂಟ್ ಆಯ್ಕೆ. ಈ ಮೊದಲು ಅಬ್ಬಬ್ಬಾ ಅಂದರೆ ಕೇವಲ 1 ವರ್ಷಗಳ ಕಾಲ ಮಾತ್ರ ಗ್ರೂಪ್ ಚಾಟ್ ಇಲ್ಲವೇ ವೈಯಕ್ತಿಕ ಚಾಟ್ಗಳನ್ನ ಮ್ಯೂಟ್ ಮಾಡಲು ಅವಕಾಶವಿತ್ತು. ಆದರೆ ಈಗ ಶಾಶ್ವತವಾಗಿ ಯಾರನ್ನ ಬೇಕಿದ್ದರೂ ಮ್ಯೂಟ್ ಮಾಡಬಹುದಾಗಿದೆ. ಈ ಮೂಲಕ ಕಿರಿಕಿರಿ ಎನ್ನಿಸುವ ಗ್ರೂಪ್ಗಳ ಕಾಟದಿಂದ ತಪ್ಪಿಸಿಕೊಳ್ಳಬಹುದಾಗಿದೆ.