Guwahati: ಸರ್ಕಾರಿ ನೌಕರರು ಯಾವುದೇ ಧರ್ಮದವರಾಗಿದ್ದರೂ, ಅವರಿಗೆ ವೈಯಕ್ತಿಕ (Assam Govt new Order) ಕಾನೂನಿನಡಿಯಲ್ಲಿ ದ್ವಿಪತ್ನಿತ್ವವನ್ನು ಅನುಮತಿಸಲಾಗಿದ್ದರೂ ಸಹ
ಸರ್ಕಾರಿ ರಾಜ್ಯ ಸರ್ಕಾರದ ಅನುಮೋದನೆಯಿಲ್ಲದೆ ಎರಡನೇ ಮದುವೆ ಆಗುವಂತಿಲ್ಲ ಎಂದು ಅಸ್ಸಾಂ (Assam) ಸರ್ಕಾರ ಆದೇಶಿ ನೀಡಿದ್ದು, ಕೇಂದ್ರ ಮತ್ತು ರಾಜ್ಯಗಳ ನಿಯಮ ಪುಸ್ತಕದ
ಭಾಗವಾಗಿರುವ ಈ ನಿಬಂಧನೆಯನ್ನು ಸರ್ಕಾರಿ (Assam Govt new Order) ನೌಕರರಿಗೆ ನೆನಪಿಸಿದೆ.
ಅಕ್ಟೋಬರ್ (October) 20 ರಂದು ಹೊರಡಿಸಲಾದ ಈ ಆದೇಶವು ರಾಜ್ಯದಲ್ಲಿ ಬಹುಪತ್ನಿತ್ವವನ್ನು ತಡೆಗಟ್ಟಲು ತಮ್ಮ ಸರ್ಕಾರವು ಕಾನೂನನ್ನು ಜಾರಿಗೆ ತರಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ
ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ಅವರು ಆಗಸ್ಟ್ನಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ಈ ಆದೇಶ ಹೊರ ಬಂದಿದೆ.
ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು 1965 ರ ನಿಯಮ 26 ರ ನಿಬಂಧನೆಗಳ ಪ್ರಕಾರ, (1) ಹೆಂಡತಿಯನ್ನು ಹೊಂದಿರುವ ಯಾವುದೇ ಸರ್ಕಾರಿ ನೌಕರನು ಸರ್ಕಾರದ ಅನುಮತಿಯನ್ನು
ಪಡೆಯದೆ ಮತ್ತೊಂದು ವಿವಾಹವನ್ನು ಮಾಡಿಕೊಳ್ಳಬಾರದು ಎಂದು ಈ ಮೂಲಕ ಪುನರುಚ್ಚರಿಸಲಾಗಿದೆ. ಅದೇ ರೀತಿ ಯಾವುದೇ ಮಹಿಳಾ ಸರ್ಕಾರಿ ನೌಕರಳು ಸರ್ಕಾರದ ಅನುಮತಿಯನ್ನು ಪಡೆಯದೆ
ಈಗಾಗಲೇ ಹೆಂಡತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನು ಮದುವೆಯಾಗಬಾರದು ಎಂದು ಅಸ್ಸಾಂನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ವರ್ಮಾ (Neeraj Verma) ಅವರು ಹೊರಡಿಸಿದ
ಆದೇಶದಲ್ಲಿ ತಿಳಿಸಿದ್ದಾರೆ.
ಈ ನಿಯಮದ ಉಲ್ಲಂಘನೆಯು ಕಡ್ಡಾಯ ನಿವೃತ್ತಿ ಸೇರಿದಂತೆ ಪ್ರಮುಖ ದಂಡವನ್ನು ವಿಧಿಸಲು ರಾಜ್ಯದ ನೀತಿ ನಿಯಮಗಳ ಅಡಿಯಲ್ಲಿ ವಿಚಾರಣೆಗೆ ಕಾರಣವಾಗುತ್ತದೆ ಎಂದು ವರ್ಮಾ ಅವರ ಆದೇಶವು
ನೌಕರರನ್ನು ಎಚ್ಚರಿಸಿದೆ. ಅಂತಹ ಪ್ರಕರಣಗಳು ಪತ್ತೆಯಾದಾಗ ಕಾನೂನಿನ ನಿಬಂಧನೆಗಳ ಪ್ರಕಾರ ನ್ಯಾಯಾಲಯದ ಮೂಲಕ ಕಾನೂನು ದಂಡದ ಕ್ರಮವನ್ನು ಕೈಗೊಳ್ಳಲು ಅಗತ್ಯ ಕ್ರಮಗಳನ್ನು
ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನು ದ್ವಿಪತ್ನಿತ್ವ ಹೊಂದಿರುವ ನೌಕರ ಮರಣ ಹೊಂದಿದ ನಂತರ ಆತನ ಕೆಲಸ ಮತ್ತು ಪಿಂಚಣಿ ಹಣಕ್ಕಾಗಿ ಮೊದಲ ಮತ್ತು ಎರಡನೇಯ ಹೆಂಡತಿಯರ ನಡುವೆ ಪೈಪೋಟಿ ಕಂಡು ಬರುತ್ತಿದ್ದು,
ಇದೊಂದು ಕಾನೂನಾತ್ಮಕ ಸಮಸ್ಯೆಗೆ ಕಾರಣವಾಗಿತ್ತು. ಅಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಅಸ್ಸಾಂನಲ್ಲಿ (Assam) ಸರ್ಕಾರಿ ನೌಕರರು ಮೊದಲ ಹೆಂಡಿತಿ
ಜೀವಂತವಾಗಿರುವಾಗಲೇ 2ನೇ ವಿವಾಹವಾಗಬಾರದು. ಹೀಗೆ ಮಾಡಿದರೆ ಅಂತಹ ನೌಕರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.
ಇದನ್ನು ಓದಿ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಕ್ರೆಡಿಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ