ಐಕ್ಯೂ ಮೊಬೈಲ್ (IQOO Mobile) ಸ್ಮಾರ್ಟ್ಫೋನ್ ಸಂಸ್ಥೆ ಹಂಚಿಕೊಂಡ ಪೋಸ್ಟರ್ ಪ್ರಕಾರ, ಐಕ್ಯೂ 12 5G ಡಿಸೆಂಬರ್ (December) 12ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ ಈ ಚಿತ್ರವೂ ಹಿಂಬದಿಯ ಕ್ಯಾಮೆರಾ ವಿನ್ಯಾಸವನ್ನು ತೋರಿಸುತ್ತದೆ. ಪೋಸ್ಟರ್ ನಲ್ಲಿರುವ ಸ್ಮಾರ್ಟ್ ಫೋನ್ BMW ಮೋಟರ್ ಸ್ಪೋರ್ಟ್ಸನ ವಿಶೇಷವೃತ್ತಿಯ ಮಾದರಿಯನ್ನು ಖಚಿತಪಡಿಸಿದೆ.
ಪ್ರಸಿದ್ದ ಐಕ್ಯೂ ಕಂಪನಿಯ ಹೊಸ ಮಾದರಿಯ ಈ ಸ್ಮಾರ್ಟ್ ಫೋನ್ (Smart Phone) ಭಾರತದಲ್ಲಿ ಡಿಸೆಂಬರ್ 12ರಂದು ಬಿಡುಗಡೆಯಾಗಲಿದ್ದು, ಭಾರತದಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ. ಐಕ್ಯೂ 12 ಭಾರತದಲ್ಲಿ ಮ್ಯಾಪ್ ಡ್ರಾಗನ್ (Map Dragon) 8 Gen 3 ಚಿಪ್ಸಟ್ಟಿನಿಂದ ಚಾಲಿತವಾಗಿರುವ ಮೊದಲ ಫೋನ್ ಆಗಿದೆ.
ಐಕ್ಯೂ 12 5G ಭಾರತದ ಬಿಡುಗಡೆಯ ವಿವರ :
ಐಕ್ಯೂ 12 (IQ 12) ಬಿಡುಗಡೆಯ ನಂತರ ಪ್ರಸಿದ್ಧ ಈ ಕಾಮರ್ಸ್ ಸ್ಥಾನವಾದ ಅಮೆಜಾನ್ನಲ್ಲಿ (Amazon) ಮಾರಾಟವಾಗಲಿದೆ. ಇದರ ಹಿಂಬದಿಯ ಕ್ಯಾಮೆರಾ
ವಿನ್ಯಾಸ ಬಲು ಆಕರ್ಷಿತವಾಗಿದೆ.
ಐಕ್ಯೂ 12 5G ಫೀಚರ್ಸ್
- ಡಿಸ್ಪ್ಲೇ : ಐಕ್ಯೂ 12 6.78– ಇಂಚಿನ 1.5K BOEಅವರಿಗೆ OLED ಡಿಸ್ಪ್ಲೇ, 144Hz ವರಿಗೆ ರಿಫ್ರೇಶ್ ರೇಟ್ ಮತ್ತು 3000nits ಪಿಕ್ ಬ್ರೈಟ್ ನೆಸ್ ಅನ್ನು ಹೊಂದಿರುತ್ತದೆ.
- ಚಿಪ್ ಸೆಟ್ : ಈ ಫೋನ್ ಸ್ನಾಪ್ ಡ್ರ್ಯಾಗನ್ 8 ಜೆನ್ 3 ಚಿಪ್ ಸೆಟ್ ಅನ್ನು ಒಳಗೊಂಡಿರುವುದು ಖಚಿತವಾಗಿದೆ.
- RAM ಮತ್ತು ಸಂಗ್ರಹಣ: ಈ ಫೋನ್ 16GB RAM ಮತ್ತು1TB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಬರಲಿದೆ.
- ಓ ಎಸ್ : ಒರಿಜಿನ್ ಓ ಎಸ್ 4.0 ಹೊಂದಿರುವ ಆಂಡ್ರಾಯ್ಡ್ 14 ಮೂಲಕ ರನ್ ಆಗಲಿದೆ.
- ಕ್ಯಾಮರಾಗಳು : ಐಕ್ಯೂ 12 5G OIS ಜೊತೆಗೆ 50MP omni vision OV50H ಪ್ರಾಥಮಿಕ ಸಂವೇದಕ,50MP ಸ್ಯಾಮ್ಸಂಗ್ JN1 ಅಲ್ಟ್ರಾ ವೈಟ್ ಲೆನ್ಸ್ ಮತ್ತು 64MP ಟೆಲಿಫೋಟೋ ಲೆನ್ಸ್ ಒಳಗೊಂಡಿದೆ ಎಂದು ವದಂತಿಗಳಿವೆ.
- ಬ್ಯಾಟರಿ -ಚಾರ್ಜಿಂಗ್ : ಈ ಸ್ಮಾರ್ಟ್ ಫೋನ್ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿರಬಹುದು.
ಧನಂಜಯ್