Benefits of Waking Up Early: ಅಬ್ಬಬ್ಬಾ ಚಳಿಗಾಲ (Benefits of Waking Up Early) ಬಂತಂದ್ರೆ ಬೆಚ್ಚಗೆ ಬೆಡ್ ಮೇಲೆ ಮಲಗಿದರೆ ಬೆಳಿಗ್ಗೆಯಾದರು ಗೊತ್ತೆ ಆಗುವುದಿಲ್ಲ. ಆದರೆ ಬೇಗನೆ
ಎದ್ದು ನಿತ್ಯದ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆಗುವ (Benefits of Waking Up Early) ಆರೋಗ್ಯದ ಲಾಭಗಳನ್ನು ತಿಳಿಯೋಣ..
- ಸಂಜೆಯ ವ್ಯಾಯಾಮಗಳಿಗಿಂತ ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮ (Exercise) ಮಾಡುವುದು ಒಳ್ಳೆಯದು ನಮ್ಮ ದೇಹಕ್ಕೆ ಆರೋಗ್ಯದ ದೃಷ್ಟಿಯಿಂದ ವ್ಯಾಯಾಮದ ಅಗತ್ಯವಿದ್ದು, ಸಂಜೆಯ
- ಹೊತ್ತು ದೇಹವನ್ನು ನಿಧಾನವಾಗಿ ಶಾಂತತೆಗೆ ಇರಿಸವುದು ಅಷ್ಟೇ ಮುಖ್ಯ ಅಂದರೆ, ಬೆಳಗ್ಗಿನಿಂದ ಸಂಜೆಯವರೆಗೆ ಕೆಲಸಗಳನ್ನು ಮಾಡಿ, ಕೊನೆಗೆ ನಿಧಾನವಾಗಿ ಕೆಲಸಗಳನ್ನು ಕಡಿಮೆಗೊಳಿಸುತ್ತಾ
- ನಿದ್ದೆಗೆ (Sleep) ಜಾರುವುದು ಒಳ್ಳೆಯ ಕ್ರಮ. ಎಲ್ಲ ಕೆಲಸಗಳ ನಂತರ ದೇಹವನ್ನು ಮತ್ತೆ ಸಂಜೆಯ ಮೇಲೆ ದಂಡಿಸುವುದು ಹಿತಕರವಲ್ಲ. ಆಯುರ್ವೇದವೂ (Ayurveda) ಇದನ್ನೇ ಪುಷ್ಠೀಕರಿಸುತ್ತದೆ.
ಹೀಗಾಗಿ, ಬೆಳಗ್ಗೆ ಬೇಗನೆ ಎದ್ದರೆ ವ್ಯಾಯಾಮಕ್ಕೆ ಸಮಯ ದೊರೆಯುತ್ತದೆ. ಕನಿಷ್ಟ ಅರ್ಧ ಗಂಟೆಯಾದರೂ ವ್ಯಾಯಾಮಕ್ಕೆ ಸಮಯ ನೀಡುವುದು ಒಳ್ಳೆಯದು.
- ಬೇಗ ಎದ್ದು ವ್ಯಾಯಾಮ ಮಾಡಿಕೊಂಡು ಕಚೇರಿ ಕೆಲಸಗಳನ್ನು ಆರಂಭಿಸುವಾಗ, ಮನಸ್ಸು, ಬುದ್ಧಿ ಚುರುಕಾಗಿ ಕೆಲಸದ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಕೆಲಸದಲ್ಲಿ ಲವಲವಿಕೆಯೂ ಇರುತ್ತದೆ.
- ಹೊರಗೆ ಪ್ರಕೃತಿಯ ನಡುವೆ ಒಂದು ವಾಕ್ (Walk) ಹೋಗಿ ಬಂದರೆ ಒತ್ತಡ ನಿವಾರಣೆಯಾಗುವುದರ ಜೊತೆಗೆ ಮಾನಸಿಕವಾಗಿ ಸದೃಢರಾಗುತ್ತೇವೆ ವೃತ್ತಿ ಮಾನಸಿಕವಾಗಿ ಸಾಮರ್ಥ್ಯ ಹೆಚ್ಚಾಗುತ್ತದೆ.
ಮನಸ್ಸಿಗೆ ನೆಮ್ಮದಿ ಕೂಡಾ ಸಿಗುತ್ತದೆ.
- ವ್ಯಾಯಾಮ ಮಾಡುವ ಮೂಲಕ ದಿನವನ್ನು ಆರಂಭಿಸುವುದರಿಂದ ಸಹಜವಾಗಿಯೇ ನೀವು ಬೆಳಗ್ಗೆ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ದೇಹದ ಪಚನಕ್ರಿಯೆ ಚುರುಕುಗೊಳ್ಳುತ್ತದೆ.
ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. - ಬೆಳಿಗ್ಗೆ ಸೂರ್ಯನ ಬೆಳಕು ನಿಮ್ಮ ಚರ್ಮವನ್ನು ಸರ್ಶಿಸುವುದರಿಂದ ನಮ್ಮ ದೇಹಕ್ಕೆ ಅವಶ್ಯವಿರುವ ವಿಟಮಿನ್ (Vitamin) ಸರಿಯಾಗಿ ಸಿಗುತ್ತವೆ. ಇದು ದೈಹಿಕ ಆರೋಗ್ಯಕ್ಕೂ, ಮಾನಸಿಕ
ಆರೋಗ್ಯಕ್ಕೂ ಒಳ್ಳೆಯದು.
- ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮಲ್ಲಿ ಸಂತೋಷ ತುಂಬಿ ತುಳುಕುತ್ತದೆ. ಇಡೀ ದಿನ ಉಲ್ಲಸಿತರಾಗಿ, ಖುಷಿಯಿಂದ ಇರುತ್ತೀರಿ. ಏನೋ ಒಂದು ಖುಷಿ, ಸಂಪನ್ನತೆ ನಿಮ್ಮಲ್ಲಿ ತುಂಬಿಕೊಳ್ಳುತ್ತದೆ.
- ಕೆಲಸ ಮಾಡಲು ಮತ್ತಷ್ಟು ಏಕಾಗ್ರತೆ ಹೆಚ್ಚುತ್ತದೆ ಯಾವುದೇ ಒಳ್ಳೆಯ ಕೆಲಸಗಳನ್ನು ಇಂದು ಮಾಡಿ ಮುಗಿಸಬೇಕು ಎಂಬುದರ ಬಗ್ಗೆ ಪಕ್ವತೆ, ನಿರ್ಧಿಷ್ಟತೆ ಇರುತ್ತದೆ. ಹಾಗೂ ಅಂದುಕೊಂಡ ಹಾಗೆ
ಜೀವನ ಉಲ್ಲಾಸ ಬರಿತವಾಗಿರುತ್ತದೆ.
ಇದನ್ನು ಓದಿ: ಹಸು ಮೇಯಿಸಲು ಹೋದ ಮಹಿಳೆ ಬಲಿ ಪಡೆದ ಹುಲಿ: ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಸೆರೆ.
- ಮೇಘಾ ಮನೋಹರ ಕಂಪು