ಎ. ಆರ್. ರೆಹಮಾನ್ ಗೆ ಮಾತೃ ವಿಯೋಗ

ಮುಂಬೈ, ಡಿ. 28:  ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ತಾಯಿ ಕರೀಮಾ ಬೇಗಂ ಇಂದು ಚೆನ್ನೈನಲ್ಲಿ ನಿಧನರಾಗಿದ್ದು, ಮಾತೃ ವಿಯೋಗದ ಕುರಿತು ರಹಮಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕರೀಮಾ ಬೇಗಂ ಅವರು ನಿಧನರಾಗಿದ್ದು, ಪಾರ್ಥೀವ ಶರೀರದ ಅಂತಿಮ ದರ್ಶನದ ನಂತರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕರೀಮಾ ಬೇಗಂ ಅವರು ರಾಜಾಗೋಪಾಲ್ ಕುಲಶೇಖರನ್ (ಆರ್. ಕೆ. ಶೇಖರ್) ಅವರನ್ನು ವಿವಾಹವಾಗಿದ್ದರು. ಕುಲಶೇಖರನ್ ಹೆಸರಾಂತ ಸಂಗೀತ ನಿರ್ದೇಶಕರಾಗಿದ್ದು, ಮಲಯಾಳಂ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿದ್ದರು. ಸುಮಾರು 52 ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದು 23 ಮಲಯಾಳಂ ಸಿನಿಮಾಗಳೀಗೂ ಸಂಗೀತ ನಿರ್ಧೇಶಿಸಿದ್ದರು. ಇವರು ನಿರ್ದೇಶಿಸಿದ್ದ ಚೊಟ್ಟಾ ಮುತಲ್ ಚುಡಾಲಾ ವಾರೆ ಸಂಗೀತ ಕೇರಳದಲ್ಲಿ ಸೂಪರ್ ಹಿಟ್ ಆಗಿತ್ತು.

ತನ್ನ ಬದುಕಿಗೆ ತಾಯಿಯ ಕೊಡುಗೆ ಅಪಾರ ಎಂಬುದಾಗಿ ಎ. ಆರ್. ರಹಮಾನ್ ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ರಹಮಾನ್ ತಂದೆಯ ಸ್ಟುಡಿಯೋದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು. ತಂದೆ ಆರ್. ಕೆ. ಶೇಖರ್ ವಿಧಿವಶರಾದಾಗ ರಹಮಾನ್ ಗೆ ಒಂಬತ್ತು ವರ್ಷ. ಬಳಿಕ ಕುಟುಂಬ ನಿರ್ವಹಣೆ ಜವಾಬ್ದಾರಿ ಎಆರ್ ರಹಮಾನ್ ಗೆ ಹೆಗಲಿಗೆ ಬಿದ್ದಿತ್ತು.

Exit mobile version