Bengaluru (ಜೂನ್ 28, 2023): ಸದ್ಯ ರಾಜ್ಯ ಸರ್ಕಾರವು ಕಾಂಗ್ರೆಸ್ (about annabhagya new announcement) ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನ ಭಾಗ್ಯಕ್ಕೆ (Anna Bhagya)
ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ. ತಲಾ 10 ಕೆಜಿ ಅಕ್ಕಿಯನ್ನು ಪ್ರತಿ ಬಿಪಿಎಲ್ (BPL) ಕಾರ್ಡುದಾರರಿಗೂ ನೀಡುವುದಾಗಿ ರಾಜ್ಯ ಸರ್ಕಾರ ಗ್ಯಾರಂಟಿ ನೀಡಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ
ಅಕ್ಕಿ ನೀಡಲು ಸಾಧ್ಯವಾಗದ ಕಾರಣ ಸರ್ಕಾರವು 5 ಕೆಜಿ ಅಕ್ಕಿಯ ಜತೆಗೆ ಹಣ ನೀಡಲು ತೀರ್ಮಾನ ಮಾಡಿದೆ. ಜುಲೈ 1 ರಿಂದಲೇ (about annabhagya new announcement) ಇದು ಜಾರಿಗೆ ಬರಲಿದೆ.

ಹೌದು ಸರ್ಕಾರವು 5 ಕೆಜಿ ಅಕ್ಕಿಯ ಜತೆಗೆ ತಲಾ 1 ಕೆಜಿಗೆ 34 ರೂಪಾಯಿಯಂತೆ ಒಟ್ಟು 5 ಕೆಜಿಗೆ 170 ರೂಪಾಯಿ ಹಣ ನೀಡಲು ತೀರ್ಮಾನ ಮಾಡಿದೆ. ಬಿಪಿಎಲ್ ಕಾರ್ಡುದಾರರಿಗೆ ಈ ಹಿನ್ನೆಲೆ ಬಂಪರ್ ನೀಡಿದೆ
ಸರ್ಕಾರ ಎಂದು ಆಹಾರ ಸಚಿವ ಮುನಿಯಪ್ಪ (K.H Muniyappa) ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಸಚಿವ ಕೆ.ಹೆಚ್ ಮುನಿಯಪ್ಪ ಹಾಗೂ ಹೆಚ್.ಕೆ ಪಾಟೀಲ್ (H.K Patil) ಕ್ಯಾಬಿನೆಟ್ ಸಭೆಯ (Cabinet Meeting) ಬಳಿಕ ಸುದ್ದಿಗೋಷ್ಠಿ ನಡೆಸಿ ಬಳಿಕ ಮಾತನಾಡಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ಹೊಂದಿಸುವ ಬಗ್ಗೆ ಚರ್ಚೆ
ನಡೆಸಲಾಯಿತು. ಇತರೆ ರಾಜ್ಯಗಳಿಂದ ಅಕ್ಕಿ ಕೊಳ್ಳುವ ಮುಂದಿನ ನಡೆ ಮತ್ತು ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾಪ ತಿರಸ್ಕಾರ ಬಗ್ಗೆ ಸಹಾ ಚರ್ಚೆ ನಡೆಲಾಯಿತು ಎಂದರು.

ಬಳಿಕ 10 ಕೆ.ಜಿ ಅಕ್ಕಿ ಬದಲಿಗೆ 2 ಕೆ.ಜಿ ರಾಗಿ/ಗೋಧಿ ಅಥವಾ ಜೋಳ ಮತ್ತು 8 ಕೆ.ಜಿ ಅಕ್ಕಿ, ಕೊಡುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ.ಆ ನಂತರ 5 ಕೆ.ಜಿ ಅಕ್ಕಿ ಕೊಟ್ಟು ಇನ್ನೂ 5 ಕೆ.ಜಿ ಅಕ್ಕಿಗೆ ಹಣ ಕೊಡೋವುದರ ಬಗ್ಗೆ ನಿರ್ಧಾರ ಮಾಡಲಾಯಿತು ಎಂದು ಹೇಳಿದರು.
ರಶ್ಮಿತಾ ಅನೀಶ್