• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

Rashmitha Anish by Rashmitha Anish
in ರಾಜ್ಯ
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
0
SHARES
92
VIEWS
Share on FacebookShare on Twitter

Bengaluru: ರಾಜ್ಯದಲ್ಲಿ ಈಗಾಗಲೇ ಖಾದ್ಯ ತೈಲಗಳ ಮೇಲಿರುವ ಬೆಲೆ ಇಳಿಕೆಯಿಂದ ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದ ಜನರನ್ನು (Rice Pulses price hike) ಇದೀಗ ಕಳೆದೊಂದು ತಿಂಗಳಿಂದ ಏರಿಕೆಯಾಗುತ್ತಿರುವ ಅಕ್ಕಿ,

ಬೇಳೆ ಕಾಳುಗಳ(Pulses) ಬೆಲೆಯಿಂದ ಕಂಗಾಲಾಗುವಂತೆ ಮಾಡಿದೆ, ಇದರಿಂದ ದಿನದಿಂದ ದಿನಕ್ಕೆ ಶ್ರೀಸಾಮಾನ್ಯನ ಬದುಕು ಕಷ್ಟಕರವಾಗುತ್ತಿದೆ. ಹದಿನೈದು ದಿನಗಳಿಂದ ಬೇಳೆಕಾಳುಗಳ ಬೆಲೆ ದಿಢೀರ್‌

ಏರಿದ್ದರೆ, ಅಕ್ಕಿ(Rice) ಬೆಲೆ 2 ರು.ನಿಂದ ಆರಂಭವಾಗಿ ಇದೀಗ ಸುಮಾರು 10-12 ರು.ವರೆಗೆ ಹೆಚ್ಚಳವಾಗಿದೆ. ಬೇಳೆಕಾಳುಗಳ ಬೆಲೆ 20-.30 ರವರೆಗೂ ಒಂದು ತಿಂಗಳ ಅಂತರದಲ್ಲೇ ಏರಿಕೆಯಾಗಿದೆ.

Rice Pulses price hike

ಅಕ್ಕಿ 20 ರು.ವರೆಗೂ ದುಬಾರಿ

ಎರಡು ತಿಂಗಳ ಹಿಂದೆ ಆರ್‌ಎನ್‌ಆರ್‌ ಸ್ಟೀಮ್‌(RNR Steam) ಅಕ್ಕಿಯು ಪ್ರತಿ ಕೇಜಿಗೆ .38- .40 ಇತ್ತು. ಈಗ .50ಗೇರಿದೆ.ಸದ್ಯ ರಾ ರೈಸ್‌ . 55 ಇದೆ. ಸೋನಾ ಮಸೂರಿ ಸ್ಟೀಮ್‌ (Sona Masoori Steam).

55-56 ಇದೆ ಇನ್ನು ಕೋಲಮ್‌ ಅಂದರೆ ಬುಲೆಟ್‌ ರೈಸ್‌ ಸದ್ಯ 72-73ಕ್ಕೆ ಏರಿಕೆಯಾಗಿದೆ. ಇದು ಈ ಹಿಂದೆ . 52-55 ಇತ್ತು.ವರ್ತಕರು ಇನ್ನು ಈ ಬೆಲೆ ಇನ್ನೂ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ರಾಜ್ಯದಲ್ಲಿ ಏರಿಕೆಯಾಗುತ್ತಿರುವ ಬೇಳೆಕಾಳುಗಳ ಮತ್ತು ಅಕ್ಕಿ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳಿಲ್ಲ.ಇನ್ನು ಈ ಬಗ್ಗೆ ಮಾರುಕಟ್ಟೆ ತಜ್ಞರು ಈ ಬೆಲೆ ಏರಿಕೆಯು ಮುಂದಿನ ನಾಲ್ಕು

ತಿಂಗಳವರೆಗೂ ಮುಂದುವರಿಯಬಹುದು ಅಥವಾ ತುಸು ಹೆಚ್ಚು ಕಡಿಮೆಯಾಗಬಹುದೆಂದು (Rice Pulses price hike) ವಿಶ್ಲೇಷಿಸಿದ್ದಾರೆ.

3 ತಿಂಗಳ ಹಿಂದೆ ಬೇಳೆ ಕಾಳು ಬೆಲೆ ಎಷ್ಟಿತ್ತು?, ಈಗೆಷ್ಟು?: ಬಾಕ್ಸ್‌ ಹಳೆ ದರ ಹೊಸ ದರ

ತೊಗರಿಬೇಳೆ .110 – 160
ಉದ್ದಿನಬೇಳೆ .110 – 135
ಮಸೂರ್‌ ದಾಲ್‌ .84 – 110
ಹೆಸರುಬೇಳೆ .120 – 140
ಅಲಸಂದೆ .85 – 100
ಅರಿಶಿನ .126 – 180
ಜೀರಿಗೆ .350 – 600
ಮೆಣಸಿನಪುಡಿ .186 – 400+
ದನಿಯಾ ಪೌಡರ್‌ .150 – 218
ಕಾಳುಮೆಣಸಿನ ಪುಡಿ .380 – 520
ಬ್ಯಾಡಗಿ ಮೆಣಸು .330 – 850

ಬೇಳೆ ಪೂರೈಕೆ ಕಡಿಮೆ:

ಬೇಳೆಗಳ ಅಭಾವ ಇದೀಗ ದೇಶಾದ್ಯಂತ ಇದೆ.ಏಕೆಂದರೆ ಇಂಡೋನೇಷ್ಯಾ (Indonesia) ಮತ್ತು ಥಾಯ್ಲೆಂಡ್‌(Thailand) ಸೇರಿ ಇತರೆಡೆಯಿಂದ ಬೇಳೆಕಾಳುಗಳ ಆಮದು ಶೇ. 30ರಷ್ಟುಕಡಿಮೆಯಾಗಿದೆ.

ಮಧ್ಯಪ್ರದೇಶದಿಂದ(Madhya Pradesh) ಹೆಚ್ಚಾಗಿ ನಮ್ಮ ರಾಜ್ಯಕ್ಕೆ ತೊಗರಿಬೇಳೆ ಬರುತ್ತದೆ. ಇದು ಕೂಡ ಇದೀಗ ಕಡಿಮೆಯಾಗಿದೆ. ಕಲಬುರಗಿಯಲ್ಲಿ (Kalburgi) ಈ ಹಿಂದೆ ಮಳೆ ಅಭಾವ, ಮಳೆ

ವೈಪರೀತ್ಯದಿಂದ ತೊಗರಿ ನಾಶವಾಗಿದೆ. ವರ್ತಕರು ಲಭ್ಯವಿರುವಷ್ಟು ಬೇಳೆಗಳನ್ನು ಇವೆಲ್ಲ ಕಾರಣಗಳಿಂದ ದಾಸ್ತಾನು ಮಾಡಿಟ್ಟುಕೊಳ್ಳಲು ಹೆಚ್ಚು ಒತ್ತು ಕೊಡುತ್ತಿದ್ದಾರೆ. ದರ ಏರಿಕೆಗೆ ಮುಖ್ಯ ಕಾರಣ

ಏನೆಂದರೆ ಮಾರುಕಟ್ಟೆಗೆ ಅಲ್ಪ ಪ್ರಮಾಣದಲ್ಲಿ ಬೇಳೆಕಾಳು ಬರುತ್ತಿರುವುದು.

Rice Pulses

ಅಕ್ಕಿ ಕೊಡಲು ಹಿಂದೇಟು:

ಪಂಜಾಬ್‌ (Punjab), ತೆಲಂಗಾಣ (Telangana), ಆಂಧ್ರಪ್ರದೇಶಗಳು (Andhra Pradesh) ರಾಜ್ಯಕ್ಕೆ ಅಕ್ಕಿ ಪೂರೈಸುವ ರಾಜ್ಯಗಳಾಗಿವೆ ಆದರೆ ಇವರು ಅಕ್ಕಿ ನೀಡಲು ಸದ್ಯಕ್ಕೆ ಹಿಂದೇಟು ಹಾಕುತ್ತಿವೆ

ಎಂದು ಯಶವಂತಪುರ(Yashwantpura) ಎಪಿಎಂಸಿ (APMC)ವರ್ತಕರು ತಿಳಿಸಿದ್ದಾರೆ. ಕರ್ನಾಟಕದಲ್ಲಿ (Karnataka) ಅಕ್ಕಿ ಅಭಾವ ಇದೆ ಎಂದು ಅವರಿಗೆ ತಿಳಿಯುತ್ತಿದ್ದಂತೆ ಇದೀಗ ಅಕ್ಕಿ ಪೂರೈಕೆ

ಮಾಡಲು ಹಿಂದೇಟು ಹಾಕುತ್ತಿವೆ. ಆಂಧ್ರದಲ್ಲಿಯೂ (Andhra Pradesh) ಸಹ ಅಕ್ಕಿ ಕೊರತೆ ಇದೆ. ಆದರೆ ಅಲ್ಲಿ ಮೊದಲ ಬೆಳೆ ನಮಗಿಂತ ಒಂದು ತಿಂಗಳು ಮೊದಲು ಬರುತ್ತದೆ.

ನಮ್ಮ ರಾಜ್ಯದಲ್ಲಿ ಮೊದಲ ಬೆಳೆಯನ್ನು ನವೆಂಬರ್‌ನಲ್ಲಿ ನಿರೀಕ್ಷಿಸಬಹುದು. ಅಲ್ಲಿವೆರೆಗೆ ದರ ಏರಿಕೆ ಹೆಚ್ಚಬಹುದು ಎಂದು ತಿಳಿಸಿದರು.

ಇದನ್ನೂ ಓದಿ : ಗೃಹಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸಬೇಕೇ?? ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..

ಟೊಮೆಟೋ ಬೆಲೆ ಹೆಚ್ಚಳ

ಟೊಮೆಟೋ(Tometo) ಬೆಲೆ ತಿಂಗಳ ಹಿಂದೆ ಕೇಜಿಗೆ .20- .25 ಇತ್ತು ಆದರೆ ಇದೀಗ ಈಗ ಮೂರು ಪಟ್ಟು ಹೆಚ್ಚಾಗಿದೆ. ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ (K.R Market) ಭಾನುವಾರದಂದು ಗುಣಮಟ್ಟದ ಟೊಮೆಟೋ ದರ.

60-80 ಇತ್ತು ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ 100 ರು. ಸನಿಹಕ್ಕೆ ಬಂದಿದೆ . ಬೆಲೆ ಹೆಚ್ಚಳಕ್ಕೆ ಪೂರೈಕೆ ತೀರಾ ಕಡಿಮೆಯಾಗಿರುವುದು ಕಾರಣ ಎಂದು ವರ್ತಕರು ಹೇಳಿದರು. ಈಗಾಗಲೇ ಬೀನ್ಸ್‌,

ನುಗ್ಗೇಕಾಯಿ ಬೆಲೆ ಹಾಪ್‌ಕಾಮ್ಸ್‌ನಲ್ಲಿ (Hopcoms) ಶತಕ ದಾಟಿವೆ.

Rice Pulses price hike

ನವೆಂಬರ್‌ವರೆಗೂ (November) ಮಳೆ ಅಭಾವ ಕಾರಣದಿಂದ ಇದೇ ರೀತಿ ಬೆಲೆ ಏರಿಕೆ ಮುಂದುವರಿವ ಸಾಧ್ಯತೆ ಇದೆ.ಬೇಳೆ ಕಾಳು ವರ್ತಕರ ಸಂಘದ ಕಾರ್ಯದರ್ಶಿ ಸಾಯಿರಾಮ್‌ ಪ್ರಸಾದ್‌ (Sai Ram Prasad)

ತಿಳಿಸಿರುವ ಪ್ರಕಾರ ಅಕ್ಕಿ, ಬೇಳೆ ಕಾಳುಗಳ ದಾಸ್ತಾನು ಮಾಡಿಟ್ಟುಕೊಳ್ಳುವ ಅನಿವಾರ್ಯತೆ, ಮಳೆ ಅಭಾವ, ರಫ್ತಿನ ವಿಚಾರದಲ್ಲಿ ಎಡವಿರುವುದು ಇದಕ್ಕೆ ಕಾರಣ.

ಹೋಟೆಲ್‌ (Hotel), ಕೇಟರಿಂಗ್‌ ಉದ್ಯಮ ಸಹ ದರ ಏರಿಕೆಯಿಂದ ಕಂಗಾಲಾಗಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ವಹಿಸಬೇಕು. ಜನಸಾಮಾನ್ಯರಿಗೆ ಇಲ್ಲದಿದ್ದರೆ ತುಂಬಾ ತೊಂದರೆ

ಆಗಲಿದೆ ಅಂತ ಬೃಹತ್‌ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ಪಿ.ಸಿ.ರಾವ್‌ (P.C Rao)ಹೇಳಿದ್ದಾರೆ.

ರಶ್ಮಿತಾ ಅನೀಶ್

Tags: Karnatakapricehikedrice

Related News

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ

September 30, 2023
ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ
ಪ್ರಮುಖ ಸುದ್ದಿ

ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ

September 30, 2023
KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

September 30, 2023
ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ
ಪ್ರಮುಖ ಸುದ್ದಿ

ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.