International Yoga Day 2023: ಯೋಗಾಭ್ಯಾಸವು ನಮ್ಮೆಲ್ಲರ ಜೀವನದಲ್ಲಿ ಆರೋಗ್ಯವಾಗಿರಲು ಮತ್ತು ಸದಾ (About International Yoga Day) ಸಕ್ರಿಯವಾಗಿರಲು ಬಹಳ ಸಹಾಯಕವಾಗಿದೆ.
ಯೋಗವು (Yoga) ಆಧುನಿಕ ಜಗತ್ತಿನಲ್ಲಿ ಹೆಚ್ಚು ಮನ್ನಣೆಯನ್ನು ಗಳಿಸಿದೆ ಮತ್ತು ಆಧ್ಯಾತ್ಮಿಕ, ದೈಹಿಕ ಆರೋಗ್ಯ ಮತ್ತು ಸ್ವಯಂ-ಶಿಸ್ತಿಗೆ ಉನ್ನತ ಜೀವನ ಶಿಕ್ಷಣವಾಗಿ ಗುರುತಿಸಲ್ಪಟ್ಟಿದೆ. ಪ್ರಸ್ತುತ ಪ್ರಪಂಚದಾದ್ಯಂತ
ವಿವಿಧ ರೂಪಗಳಲ್ಲಿ ಹರಡಿರುವ ಯೋಗ ವಿದ್ಯೆಯು ಭಾರತೀಯ ನೆಲದಲ್ಲಿ ತನ್ನ ಬೇರುಗಳನ್ನು ಹೊಂದಿದೆ ಮತ್ತು ಮಹಾಯೋಗುರು ಎಂದು ಕರೆಯಲ್ಪಡುವ ಮಹರ್ಷಿ ಪತಂಜಲಿಯಿಂದ (Patanjali) ಪ್ರವರ್ತಕವಾಗಿದೆ.

ನಿಮಗೆಲ್ಲ ತಿಳಿದಿರುವಂತೆ ಜೂನ್ 21, 2023 ಅಂತರಾಷ್ಟ್ರೀಯ ಯೋಗ ದಿನ (International Yoga Day). 2015 ಅನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದಾಗಿನಿಂದ, ಜೂನ್ 21 ಅನ್ನು ಪ್ರತಿ ವರ್ಷ
ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು ಇದು ಭಾರತದಲ್ಲಿ (India) ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನುಸರಿಸುತ್ತಿರುವ ಜೀವನಕ್ರಮವಾಗಿದೆ. ಇದು ಯೋಗದ ಪ್ರಾಚೀನ ಅಭ್ಯಾಸದ
ಪ್ರಯೋಜನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ವರ್ಷ ಒಂಬತ್ತನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಗುರುತಿಸುತ್ತದೆ ಮತ್ತು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi)
ಅವರು ವಿಶ್ವಸಂಸ್ಥೆಯ (About International Yoga Day) ಪ್ರಧಾನ ಕಚೇರಿಯಲ್ಲಿ
ಯೋಗಾಭ್ಯಾಸವನ್ನು ಆಯೋಜಿಸಲಿದ್ದಾರೆ. ಈ ಬಾರಿ ವಿಶ್ವದಾದ್ಯಂತ 25 ಕೋಟಿ ಜನರು ಯೋಗಾಭ್ಯಾಸ ಮಾಡಲಿದ್ದಾರೆ.ಇಂದು ಯೋಗಾಭ್ಯಾಸ 180 ದೇಶಗಳ ಗಣ್ಯರು ಮಾಡಲಿದ್ದಾರೆ.

ಸೆಪ್ಟೆಂಬರ್ 27, 2014 ರಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದರು ಮತ್ತು ಯೋಗ ದಿನವನ್ನು ಆಚರಿಸಲು ಸೂಕ್ತ ಸಲಹೆಗಳನ್ನು ಪ್ರಸ್ತಾಪಿಸಿದರು. ಮೋದಿಯವರ
ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಜೊತೆಗೆ, ನಿರ್ಣಯವನ್ನು ಡಿಸೆಂಬರ್ 11, 2014 ರಂದು ಅಂಗೀಕರಿಸಲಾಯಿತು. ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು
ಜೂನ್ 21, 2015 ರಂದು ಆಚರಿಸಲಾಯಿತು.
ಇದನ್ನೂ ಓದಿ : ಜೂನ್ 16 ರಂದು ಚಾಲನೆ ಆಗಬೇಕಿದ್ದ ಗೃಹಲಕ್ಷ್ಮೀ ಯೋಜನೆ ಮುಂದೂಡಿಕೆ
ಅಂತರಾಷ್ಟ್ರೀಯ ಯೋಗ ದಿನವು ಯೋಗಾಭ್ಯಾಸದ ಅನೇಕ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಪಂಚದಾದ್ಯಂತ ಜನರನ್ನು ಉತ್ತೇಜಿಸುವ ಗುರಿಯನ್ನು
ಹೊಂದಿದೆ.ಯೋಗವು ದೈಹಿಕ ಆರೋಗ್ಯವನ್ನು ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗದ ಮೂಲಕ ಉಸಿರಾಟವನ್ನು ನಿಯಂತ್ರಿಸಲಾಗುತ್ತದೆ, ರಕ್ತ ಪರಿಚಲನೆ
ಸುಧಾರಿಸುತ್ತದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳು ಮಾಯವಾಗುತ್ತವೆ.
ಯೋಗ ಬಲ್ಲವನಿಗೆ ರೋಗವಿಲ್ಲ!
ಅಧಿಕ ರಕ್ತದೊತ್ತಡವನ್ನು (Blood Pressure) ನಿಯಂತ್ರಿಸಲು, ತೂಕವನ್ನು ನಿಯಂತ್ರಿಸಲು, ದೈಹಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದರ ಜೊತೆಗೆ, ಇದು ಆಗಾಗ್ಗೆ ಸ್ನಾಯು ಸೆಳೆತವನ್ನು ನಿವಾರಿಸುತ್ತದೆ.
ಯೋಗದ ಮೂಲಕ ಏಕಾಗ್ರತೆ ಸಾದಿಸುವುದು ಅನೇಕ ಮಾನಸಿಕ ಸಮಸ್ಯೆಗಳಿಗೆ ಪರಿಹಾರವಾಗಿದೆ. ಹಾಗಾಗಿ ಯೋಗ ಬಲ್ಲವನಿಗೆ ರೋಗವಿಲ್ಲ ಎಂದು ಹೇಳಲಾಗುತ್ತದೆ.
ರಶ್ಮಿತಾ ಅನೀಶ್