• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಬಿಜೆಪಿ ಕಾಲದ ಮತಾಂತರ ನಿಷೇಧ ಮತ್ತು ಗೋ ಹತ್ಯೆ ನಿಷೇಧ ಕಾಯ್ದೆಗಳು ಈ ಅಧಿವೇಶನದಲ್ಲಿ ವಾಪಸ್‌ ಇಲ್ಲ?: ತಜ್ಞರುಗಳ ಅಭಿಪಾಯ ಪಡೆದು ಮುಂದಿನ ನಡೆ

Rashmitha Anish by Rashmitha Anish
in ರಾಜಕೀಯ
ಬಿಜೆಪಿ ಕಾಲದ ಮತಾಂತರ ನಿಷೇಧ ಮತ್ತು ಗೋ ಹತ್ಯೆ ನಿಷೇಧ ಕಾಯ್ದೆಗಳು ಈ ಅಧಿವೇಶನದಲ್ಲಿ ವಾಪಸ್‌ ಇಲ್ಲ?: ತಜ್ಞರುಗಳ ಅಭಿಪಾಯ ಪಡೆದು ಮುಂದಿನ ನಡೆ
0
SHARES
231
VIEWS
Share on FacebookShare on Twitter

Bengaluru : ಬಿಜೆಪಿ (BJP) ಸರ್ಕಾರ ಜಾರಿಗೆ ತಂದಿದ್ದ, ತೀವ್ರ ವಿರೋಧಕ್ಕೆ ಹಾಗೂ ವಿವಾದಗಳಿಗೆ (about ProhibitionAct in session) ಕಾರಣವಾಗಿದ್ದ ಮತಾಂತರ ನಿಷೇಧ ಕಾಯ್ದೆಗಳ ತಿದ್ದುಪಡಿ

ಅಥವಾ ಹಿಂಪಡೆಯುವ ವಿಧೇಯಕವನ್ನು ಮತ್ತು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಾಲಿ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ. ಕಾನೂನು ಸಚಿವ

ಎಚ್‌.ಕೆ. ಪಾಟೀಲ್‌ (H.K Patil) ಈ ಎರಡು ಕಾಯ್ದೆಗಳನ್ನು ತಿದ್ದುಪಡಿ ಅಥವಾ ಹಿಂಪಡೆಯುವ ಸಂಬಂಧ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಹೇಳಿದ್ದರು.

ಆದರೆ ಸರ್ಕಾರವು ಈ ಕಾಯ್ದಯನ್ನು ಪ್ರಸಕ್ತ ಅಧಿವೇಶನದಲ್ಲಿ ಮಂಡಿಸುವ ಬಗ್ಗೆ ಈವರೆಗೆ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ .

about ProhibitionAct in session

ಈ ಎರಡು ಕಾಯ್ದೆಗಳ ಬಗ್ಗೆ ಪ್ರಮುಖವಾಗಿ ಪರ-ವಿರೋಧ ಅಭಿಪ್ರಾಯ ಇದೆ. ಸೂಕ್ಷ್ಮವಾಗಿರುವ ಇಂತಹ ಕಾಯ್ದೆಯನ್ನು ಹಿಂಪಡೆಯುವ ಬದಲು ಅಥವಾ ಏಕಾಏಕಿ ತಿದ್ದುಪಡಿ ಮಾಡುವುದರ ಬದಲು ಮೊದಲು

ವಿವಿಧ ಸಮುದಾಯದ ಮುಖಂಡರ ಮತ್ತು ಕಾನೂನು ತಜ್ಞರ ಅಭಿಪ್ರಾಯ ಪಡೆದು ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ಈ ಅಧಿವೇಶನದಲ್ಲಿ ಮಂಡಿಸದಿರುವ ಚಿಂತನೆ ನಡೆಸಲಾಗಿದೆ.

ಜತೆಗೆ ಈ ಬಗ್ಗೆ ಶುಕ್ರವಾರ (Friday) ನಡೆಯಲಿರುವ ಬಜೆಟ್‌ ಮಂಡನೆ ನಂತರ ವ್ಯಾಪಕವಾಗಿ ಚರ್ಚೆ ನಡೆಯಬೇಕಾಗಿದೆ.ಸರ್ಕಾರವು ಇಂತಹ ಸಂದರ್ಭದಲ್ಲಿ ಸದನದಲ್ಲಿ ವಿವಾದಾತ್ಮಕ ಕಾಯ್ದೆಗಳ ಬಗ್ಗೆ ಚರ್ಚೆ

ಶುರುವಾದರೆ ಉಳಿದ ಕಲಾಪಕ್ಕೆ ಅಡ್ಡಿಯಾಗಬಹುದು ಎಂಬ ಕಾರಣದಿಂದ ಇಂತಹ ನಿರ್ಧಾರಕ್ಕೆ (about ProhibitionAct in session) ಬಂದಿದೆ ಎನ್ನಲಾಗಿದೆ.

Act in session

ಪರಿಷತ್‌ ಬಲಾಬಲ ಕಾರಣವಲ್ಲ:

ಕಾಂಗ್ರೆಸ್‌ಗೆ (Congress) ವಿಧಾನಸಭೆಯಲ್ಲಿ (Vidhana Sabha) ಹೆಚ್ಚಿನ ಸಂಖ್ಯಾಬಲ ಇದೆ. ಆದರೆ ಕಾಂಗ್ರೆಸ್‌ಗೆ ವಿಧಾನಪರಿಷತ್ತಿನಲ್ಲಿ ಸಂಖ್ಯಾಬಲ ಇಲ್ಲ. ಹೀಗಾಗಿ ತಿದ್ದುಪಡಿ ಅಥವಾ ಹಿಂಪಡೆಯಲು

ನಿರ್ಧರಿಸಿದರೂ ಕೆಳಮನೆಯಲ್ಲಿ ಸುಲಭವಾಗಿ ಅನುಮತಿ ಪಡೆಯಬಹುದು. ವಿಧೇಯಕ ವಿಧಾನ ಪರಿಷತ್ತಿನಲ್ಲಿ ಬಿದ್ದು ಹೋದರೂ ಮತ್ತೊಮ್ಮೆ ಇದನ್ನು ಕೆಳಮನೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಸರ್ಕಾರಕ್ಕೆ

ಅವಕಾಶವಿದೆ.ಹಿರಿಯ ನಾಯಕರ ಅಭಿಪ್ರಾಯ ಏನೆಂದರೆ ಆದರೆ ಅಂತಹ ಪರಿಸ್ಥಿತಿಗೆ ಹೋಗುವುದು ಬೇಡ ಎಂಬುದು. ಒಟ್ಟಾರೆ ರಾಜ್ಯ ಸರ್ಕಾರವು ವಿವಾದಾತ್ಮಕ ಈ ಎರಡು ಕಾಯ್ದೆಗಳನ್ನು ಹಾಲಿ ಅಧಿವೇಶನದಲ್ಲಿ

ಮಂಡಿಸದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮೂಲಗಳು ಹೇಳಿವೆ.

ರಾಜ್ಯ ಸರ್ಕಾರದ ವಿರುದ್ಧ ವಿವಿಧ ಮಠಾಧೀಶರ ಆಕ್ರೋಶ:

ಕಲಬುರಗಿ (Kalburgi) ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು ಕಾಂಗ್ರೆಸ್‌ ಸರ್ಕಾರದಿಂದ ಗೋಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವ ವಿಚಾರದಲ್ಲಿ ವ್ಯಗ್ರರಾಗಿದ್ದಾರೆ.

ಸರ್ಕಾರದ ವಿರುದ್ಧ ಒಂದು ವೇಳೆ ಈ ಕಾಯ್ದೆಗಳನ್ನು ವಾಪಸು ತೆಗೆದುಕೊಂಡರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿ ಗುಡುಗಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಯಾವುದೇ

ಕಾರಣಕ್ಕೂ ಹಿಂಪಡೆಯಬಾರದು, ಸುಸಂಸ್ಕೃತ ಸಮಾಜಕ್ಕೆ ಗೋಹತ್ಯೆ ನಿಷೇಧ ಕಾಯ್ದೆ ವಾಪಾಸು ಪಡೆಯುವುದು ಅಪಮಾನ ಮಾಡಿದ ಹಾಗೆ, ಆದರೂ ವಾಪಸ್‌ ಪಡೆದರೆ ಗಂಭೀರ ಪರಿಣಾಮ

ಎದುರಿಸಬೇಕಾಗುತ್ತದೆ ಎಂದು ಮಠಾಧೀಶರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಚ್ಚರಿಸಿದ್ದಾರೆ.

ಸರ್ಕಾರದ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ ಪಡೆದಲ್ಲಿಎಲ್ಲರೂ ಸೇರಿ ಉಗ್ರ ಹೋರಾಟ ಶುರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಆಡಳಿತದಲ್ಲಿ ಗೋ ಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ ಆದರೆ ಈ ಕಾನೂನುಗಳನ್ನು ರಾಜ್ಯದಲ್ಲಿರುವ ಕಾಂಗ್ರೆಸ್‌ ಬಂದಾಕ್ಷಣ ತೆಗೆದುಹಾಕುತ್ತಿರೋದಕ್ಕೆ

ಮಠಾಧೀಶರೆಲ್ಲರೂ ತೀವ್ರ ವಿರೋಧಿಸುವುದಾಗಿ ಹೇಳಿದರು

ರಶ್ಮಿತಾ ಅನೀಶ್

Tags: assembly session"Karnatakapolitical

Related News

2022ರ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡಲು ಗೃಹ ಇಲಾಖೆಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ..!
ಪ್ರಮುಖ ಸುದ್ದಿ

2022ರ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡಲು ಗೃಹ ಇಲಾಖೆಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ..!

October 3, 2023
ಚಿಲುಮೆ ಪ್ರಕರಣ: ತುಷಾರ್‌ ಗಿರಿನಾಥ್‌ಗೂ ತಟ್ಟಿದ ಚಿಲುಮೆ ಬಿಸಿ, ತನಿಖೆಗೆ ಆದೇಶಿಸಿದ ಸರ್ಕಾರ
ಪ್ರಮುಖ ಸುದ್ದಿ

ಚಿಲುಮೆ ಪ್ರಕರಣ: ತುಷಾರ್‌ ಗಿರಿನಾಥ್‌ಗೂ ತಟ್ಟಿದ ಚಿಲುಮೆ ಬಿಸಿ, ತನಿಖೆಗೆ ಆದೇಶಿಸಿದ ಸರ್ಕಾರ

October 3, 2023
ಮಧ್ಯದಂಗಡಿ ತೆರೆಯುವ ಪ್ರಸ್ತಾಪಕ್ಕೆ ಕಾಂಗ್ರೆಸ್‌ ಶಾಸಕರಿಂದಲೇ ವಿರೋಧ: ವಿವಿಧ ಸಂಘಟನೆಗಳಿಂದ ತೀವ್ರ ಆಕ್ರೋಶ
ಪ್ರಮುಖ ಸುದ್ದಿ

ಮಧ್ಯದಂಗಡಿ ತೆರೆಯುವ ಪ್ರಸ್ತಾಪಕ್ಕೆ ಕಾಂಗ್ರೆಸ್‌ ಶಾಸಕರಿಂದಲೇ ವಿರೋಧ: ವಿವಿಧ ಸಂಘಟನೆಗಳಿಂದ ತೀವ್ರ ಆಕ್ರೋಶ

October 3, 2023
ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ: ಹಸಿರು ಮಾರ್ಗದ ರೈಲು ಸಂಚಾರ ನಿಷೇಧ
ಪ್ರಮುಖ ಸುದ್ದಿ

ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ: ಹಸಿರು ಮಾರ್ಗದ ರೈಲು ಸಂಚಾರ ನಿಷೇಧ

October 3, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.