Bengaluru, ಜುಲೈ 28: ದ್ವಿತೀಯ ಪಿಯುಸಿಯಲ್ಲಿ (about second Supplementary Exam) ಅನುತೀರ್ಣರಾದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು
(Karnataka Board of School Examination and Evaluation) ಈ ಬಾರಿ ಹೊಸ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಅನುತೀರ್ಣರಾದ ವಿದ್ಯಾರ್ಥಿಗಳ ಹೊಸ ಭರವಸೆಗೆ ಕಾರಣವಾಗಿದೆ.
ವಾರ್ಷಿಕ ಮುಖ್ಯ ಪರೀಕ್ಷೆ(Annual Main Examination) ಹಾಗೂ ಮೊದಲ ಪೂರಕ ಪರೀಕ್ಷೆ(First supplementary examination) ಎರಡರಲ್ಲಿಯೂ ಉತ್ತೀರರ್ಣರಾಗದ ವಿದ್ಯಾರ್ಥಿಗಳಿಗಾಗಿ ಕರ್ನಾಟಕ
ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2022-23ರ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಗೆ ಎರಡನೇ ಬಾರಿಗೆ ಪೂರಕ ಪರೀಕ್ಷೆಯನ್ನು ನಡೆಸುವುದಾಗಿ ಪ್ರಕಟಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿರುವ ಪ್ರಕಾರ ಇನ್ನು ಈ ಪೂರಕ ಪರೀಕ್ಷೆ ಬರೆಯಲು 2022-23ರ ಶೈಕ್ಷಣಿಕ ವರ್ಷ ಹೊರತು ಪಡಿಸಿ ಅದರ ಹಿಂದಿನ
ವರ್ಷಗಳಲ್ಲಿ ಕೂಡ ಅನುತೀರ್ಣರಾದವರು ನೊಂದಾಯಿಸಿಕೊಳ್ಳಬಹುದು ಎಂದು (about second Supplementary Exam) ತಿಳಿಸಿದೆ.

ಒಟ್ಟು 1,57,756 ವಿದ್ಯಾರ್ಥಿಗಳು ಈ ಹಿಂದೆ ಮೇ 23 ರಿಂದ ಜೂನ್ 2 ರವರೆಗೆ ನಡೆದ ಮೊದಲ ಪೂರಕ ಪರೀಕ್ಷೆಗಳಲ್ಲಿ ಪರೀಕ್ಷೆ ಬರೆದಿದ್ದರು. ಈ ಪೈಕಿ ಒಟ್ಟು 50,478 ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆಯಲ್ಲಿ
ಯಶಸ್ವಿಯಾಗಿ ಉತ್ತೀರ್ಣರಾಗಿ ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಆದರೆ ಇದೀಗ ಆಗಸ್ಟ್ (August) 21 ರಿಂದ ಸಪ್ಟೆಂಬರ್ (September) 02 ರವೆಗೆ ಎರಡನೇ ಪೂರಕ ಪರೀಕ್ಷೆ ನಡೆಯಲಿದೆ
ಇದರ ಮೂಲಕ ಮೊದಲ ಪೂರಕ ಪರೀಕ್ಷೆಯಲ್ಲೂ ಅನುತೀರ್ಣರಾದವರಿಗೆ ಎರಡನೇ ಅವಕಾಶ ನೀಡಲಾಗಿದೆ.
ಇನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಎರಡನೇ ಬಾರಿ ಪೂರಕ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿದ್ದು, ಈ ನಿರ್ಧಾರವನ್ನು ಉಪನ್ಯಾಸಕರು
(Lectures) ವಿರೋಧಿಸಿದ್ದಾರೆ. ಆದರೆ ಇದೀಗ ಮಂಡಳಿಯು ಎರಡನೇ ಬಾರಿ ಪೂರಕ ಪರೀಕ್ಷೆ ಬೇಕು ಬೇಡ ಎನ್ನುವ ಚರ್ಚೆಯ ನಡುವೆಯೇ ಪೂರಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ದ್ವಿತೀಯ ಪಿಯುಸಿಗೆ ಎರಡನೇ ಬಾರಿಗೆ ಪೂರಕ ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತಿದೆ.
21-08-2023ರಂದು ಕನ್ನಡ, ಆರೇಬಿಕ್
22-08-2023ರಂದು ಐಚ್ಛಿಕ ಕನ್ನಡ, ಕೆಮಿಸ್ಟ್ರಿ, ಬೇಸಿಕ್ ಮ್ಯಾಥ್ಸ್
23-08-2023ರಂದು ಸಮಾಜ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
24-08-2023ರಂದು ಲಾಜಿಕ್, ಹಿಂದೂಸ್ಥಾನಿ ಮ್ಯೂಸಿಕ್, ಬ್ಯುಸಿನೆಸ್ ಸ್ಟಡೀಸ್
25-08-2023ರಂದು ಇತಿಹಾಸ, ಸ್ಯಾಟಿಸ್ಟಿಕ್ಸ್,
26-08-2023ರಂದು ಇನ್ನರ್ಮೇಷನ್ ಟೆಕ್ನಾಲಜಿ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್
28-08-2023ರಂದು ಜಿಯೋಗ್ರಾಫಿ, ಸೈಕಾಲಜಿ, ಫಿಜಿಕ್ಸ್,
29-08-2023ರಂದು ಅಕೌಂಟ್ಸ್, ಜಿಯಾಲಜಿ, ಎಜುಕೇಷನ್, ಹೋಂ ಸೈನ್ಸ್
30-08-2023ರಂದು ಪೊಲಿಟಿಕಲ್ ಸೈನ್ಸ್, ಮ್ಯಾಥಮೆಟಿಕ್ಸ್
31-08-2023ರಂದು ಹಿಂದಿ
01-09-2023ರಂದು ಎಕನಾಮಿಕ್ಸ್, ಬಯಾಲಜಿ.
02-09-2023ರಂದು ತಮಿಳ್, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಫ್ರೆಂಚ್ ಪರೀಕ್ಷೆ ನಡೆಯಲಿದೆ.
ರಶ್ಮಿತಾ ಅನೀಶ್