New Delhi: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE in regional languages) ಬೋರ್ಡ್ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿಯನ್ನು ನೀಡಿದೆ. ಭವಿಷ್ಯದಲ್ಲಿ, ಸ್ಥಳೀಯ ಭಾಷೆಗಳಲ್ಲಿ
ಮಾಧ್ಯಮಗಳಲ್ಲೂ ಶಿಕ್ಷಣವನ್ನು ನೀಡುಲು ಮುಂದಾಗಿದೆ. ಹೌದು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ, ಕೇಂದ್ರೀಯ ಪಠ್ಯಕ್ರಮ ಮಂಡಳಿ, CBSE, ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣವನ್ನು
ನೀಡಬಹುದು ಎಂದು ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ (CBSE in regional languages) ಸೂಚಿಸಿದೆ.
ಇಲ್ಲಿಯವರೆಗೆ, ಸಿಬಿಎಸ್‌ಇ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ (English Medium) ಮಾತ್ರ ಶಿಕ್ಷಣವನ್ನು ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಹೊಸ ನಿರ್ದೇಶನದ ಅಡಿಯಲ್ಲಿ, CBSE ಶಾಲೆಗಳು
ಈಗ ಬೋಧನೆಗಾಗಿ ಕನ್ನಡ (Kannada)ಮತ್ತು ಸಾರ್ವಜನಿಕ ಪಠ್ಯಕ್ರಮದ ಶಾಲೆಗಳಂತಹ ಪ್ರಾದೇಶಿಕ ಭಾಷಾ(Regional Language) ಮಾಧ್ಯಮಗಳನ್ನು ಕೂಡ ಬಳಸಬಹುದು.

ಈ ವಿಷಯವನ್ನು ತಿಳಿಸಲು CBSE ಶಾಲೆಗಳಿಗೆ ಪತ್ರವನ್ನು ಕಳುಹಿಸಿದೆ.ಎನ್‌ಇಪಿಯ (NEP) ಸ್ಥಳೀಯ ಭಾಷಾ ಶಿಕ್ಷಣಕ್ಕೆ ಒತ್ತು ನೀಡುವ ನೀತಿಯ ಪ್ರಕಾರ, CBSE ಶಾಲೆಗಳು ಅಸ್ತಿತ್ವದಲ್ಲಿರುವ
ಸಂಪನ್ಮೂಲಗಳನ್ನು ಬಳಸಿಕೊಂಡು ತಜ್ಞರನ್ನು ಸಂಪರ್ಕಿಸಬಹುದು ಮತ್ತು ಬಹುಭಾಷಾ ಶಿಕ್ಷಣವನ್ನು ಒದಗಿಸಲು ಇತರ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಇದರ ಜೊತೆಗೆ,
ಪಠ್ಯಗಳು ಮುಂದಿನ ವರ್ಷದಿಂದ 22 ನಿಗದಿತ ಭಾಷೆಗಳಲ್ಲಿ ಲಭ್ಯವಿರುತ್ತವೆ ಎಂದು CBSE ಹೇಳಿದೆ.
ಇದನ್ನೂ ಓದಿ : 8ನೇ ತರಗತಿಯಿಂದ ಕನ್ನಡ ಪಾಠ ಬೇಡ : ಪ್ರಾಂಶುಪಾಲರ ಬಳಿ ಕೆಲ ಪೋಷಕರ ಆಗ್ರಹ!
ಇನ್ನು ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಪ್ರತಿಕ್ರಿಯೆ ನೀಡಿ ಭಾರತೀಯ ಭಾಷೆಗಳಲ್ಲಿ ಬೋಧನೆ ಮಾಧ್ಯಮವಾಗಿ ಬಳಸುವಂತೆ ಸೆಂಟ್ರಲ್
ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಪ್ರಾಥಮಿಕ ಶಾಲೆಗಳಿಂದ ಪಿಯುಸಿ ವರೆಗೆ (PUC)ಎಲ್ಲಾ ಶಾಲೆಗಳಿಗು ಸೂಚಿಸಿದೆ. ಇದು ನಿಜವಾಗಲೂ ಪ್ರಶಸಂನೀಯ ಹೆಜ್ಜೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ (Tweet) ಮಾಡಿರುವ ಸಚಿವರು, ನಮ್ಮ ಎಲ್ಲಾ ಶಾಲೆಗಳಲ್ಲಿ ಭಾರತೀಯ ಭಾಷೆಗಳಲ್ಲಿ ಪ್ರಾಥಮಿಕದಿಂದ ಹನ್ನೆರಡನೇ ತರಗತಿವರೆಗೆ ಶಿಕ್ಷಣ ಆಯ್ಕೆಯನ್ನು ಒದಗಿಸಿದ್ದಕ್ಕಾಗಿ ನಾನು
ಸಿಬಿಎಸ್‌ಇಯನ್ನು ಅಭಿನಂದಿಸುತ್ತೇನೆ.ಶಾಲೆಗಳಲ್ಲಿ ಮಾತೃಭಾಷೆ ಮತ್ತು ಭಾರತೀಯ ಭಾಷೆಗಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂದು ಪ್ರಶಸಂನನೀಯ ಹೆಜ್ಜೆಯಾಗಿದೆ. ಭಾರತೀಯ
ಭಾಷಾ ಆಧಾರಿತ ಶಿಕ್ಷಣವನ್ನು ಎನ್‌ಇಪಿ ಕಲ್ಪಿಸಿದಂತೆ, ಇದು ಶಾಲೆಗಳಲ್ಲಿ ಉತ್ತೋಜಿಸುತ್ತದೆ. ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳತ್ತ ಇದು ಉತ್ತಮ ಆರಂಭವಾಗಿದೆ’ ಎಂದಿದ್ದಾರೆ.
ರಶ್ಮಿತಾ ಅನೀಶ್