Karnataka: ಚುನಾವಣೆಗೂ ಮುನ್ನ ಕರ್ನಾಟಕ ಕಾಂಗ್ರೆಸ್ (about Shakti Yojana ending) ನಾವು ಅಧಿಕಾರಕ್ಕೆ ಬಂದರೆ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ
ಮಾಡಲಾಗುವುದು ಎಂದು ಹೇಳಿತ್ತು. ಅದರಂತೆಯೇ ಕಾಂಗ್ರೆಸ್ ಸರ್ಕಾರವು ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ,
ಯುವ ನಿಧಿ ಅನ್ನು ಅಧಿಕಾರವನ್ನು ಪಡೆದ (about Shakti Yojana ending) ಬಳಿಕ ಜಾರಿಗೆ ತರುತ್ತಿದೆ.
ಈ ಪೈಕಿ ಈಗಾಗಲೇ ಅನ್ನ ಭಾಗ್ಯ(Anna Bhagya), ಗೃಹ ಜ್ಯೋತಿ (Griha Jyoti), ಶಕ್ತಿ ಯೋಜನೆ(Shakti Scheme),ಮತ್ತು ಗೃಹ ಲಕ್ಷ್ಮೀ (Griha lakshmi) ಯೋಜನೆ ಜಾರಿಗೆ ಬಂದಿದೆ.
ಅಷ್ಟೇ ಅಲ್ಲದೆ ಸರ್ಕಾರವು ಯುವನಿಧಿ (Yuva nidhi) ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಹೇಳಿದೆ. ಇದರಲ್ಲಿ ಮುಖ್ಯವಾಗಿ ಶಕ್ತಿ ಯೋಜನೆಯನ್ನು ಈ ಐದು ಗ್ಯಾರಂಟಿ
ಯೋಜನೆಗಳ ಪೈಕಿ ಮೊದಲು ಜಾರಿಗೊಳಿಸಲಾಗಿದೆ. ಆದರೆ ಇದೀಗ ಎಲ್ಲೆಡೆ ಈ ಯೋಜನೆ ಈಗ ಅಂತ್ಯವಾಗುತ್ತಿದೆ ಎಂದು ಸುದ್ದಿಗಳು ಹರಿದಾಡುತ್ತಿದೆ.

ಶಕ್ತಿ ಯೋಜನೆ ಅಂತ್ಯವಾಗುತ್ತಾ, ಸರ್ಕಾರ ಹೇಳುವುದೇನು?
ಜೂನ್ 11 ರಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಮಾಡಲು ರಾಜ್ಯ ಸರ್ಕಾರವು ಯೋಜನೆಯಾದ ಶಕ್ತಿ ಯೋಜನೆಯು ಜಾರಿಗೆ ಬಂದಿದೆ. ಅಂದರೆ ಈಗಾಗಲೇ 2 ತಿಂಗಳು ಈ
ಯೋಜನೆ ಜಾರಿಗೆ ಬಂದು ಆಗಿದೆ.ಆದರೆ ಇದೀಗ ಈ ಎರಡು ತಿಂಗಳಲ್ಲೇ ಸಾಮಾಜಿಕ ಜಾಲತಾಣದಲ್ಲಿ(Social Media) ಯೋಜನೆಯನ್ನು ಕೊನೆ ಮಾಡಲಾಗುತ್ತಿದೆ ಎಂದು ಸುದ್ದಿಗಳು(news) ಹರಿದಾಡುತ್ತಿದೆ.
ಇದನ್ನೂ ಓದಿ : ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ : ಸಿಎಂ ಸಿದ್ದರಾಮಯ್ಯ
ಇದೀಗ ಸರ್ಕಾರವು(Government) ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿದೆ. ಮಹಿಳೆಯರಿಗೆ ಒದಗಿಸುತ್ತಿರುವ ಉಚಿತ ಪ್ರಯಾಣ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ, ಸರ್ಕಾರದ ಮಹತ್ವಾಕಾಂಕ್ಷೆ
ಯೋಜನೆಯಾದ ಶಕ್ತಿ ಯೋಜನೆ ಕೊನೆಗೊಳ್ಳಲಿದ್ದು, ಎಂಬುದಾಗಿ “ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಪ್ರಕಟಿಸುತ್ತಿರುವುದು ಸತ್ಯಕ್ಕೆ ದೂರವಾದ ವಿಷಯವಾಗಿರುತ್ತದೆ,” ಎಂದು
ಕೆಎಸ್ಆರ್ಟಿಸಿ(KSRTC) ಟ್ವೀಟ್ (about Shakti Yojana ending)ಮೂಲಕ ಮಾಹಿತಿ ನೀಡಿದೆ.

ಸಾರ್ವಜನಿಕ ಪ್ರಯಾಣಿಕರು “ಈ ರೀತಿಯ ಯಾವುದೇ ಗೊಂದಲದ ಸಂದೇಶಗಳನ್ನು(Message) ನಂಬಬಾರದು. ಈ ಬಗ್ಗೆ ನಾವು ಕಾಲಕಾಲಕ್ಕೆ ಸಮರ್ಪಕವಾದ ಮಾಹಿತಿಯನ್ನು ಸಾರ್ವಜನಿಕರಿಗೆ
ಒದಗಿಸುತ್ತೇವೆ. ಎಂದಿನಂತೆ ಶಕ್ತಿ ಯೋಜನೆಯು ಮುಂದುವರೆಯಲಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ,” ಎಂದು ಟ್ವೀಟ್ನಲ್ಲಿ ಸೇರಿಸಲಾಗಿದೆ. ಇನ್ನು ಆಗಸ್ಟ್(August) 15 ರಂದು ಒಟ್ಟಾಗಿ
99,37,598 ಮಂದಿ ಕೆಸ್ಆರ್ಟಿಸಿ ಅಥವಾ ಶಕ್ತಿ ಯೋಜನೆಗೆ ಒಳಪಡುವ ಬಸ್ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಮಹಿಳೆಯರು ಈ ಪೈಕಿ 65,39,073 ಪ್ರಯಾಣಿಕರು ಆಗಿದ್ದಾರೆ. ಒಟ್ಟು 14,15,99,271
ರೂಪಾಯಿ ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್ ಮೌಲ್ಯವು ಆಗಿದೆ.
ಇದನ್ನೂ ಓದಿ : 2025-26ನೇ ಸಾಲಿನಿಂದ 1ನೇ ತರಗತಿ ಪ್ರವೇಶ ಪಡೆಯಲು ಮಗುವಿಗೆ 6 ವರ್ಷ ಕಡ್ಡಾಯ; ಹೈಕೋರ್ಟ್
ಜೂನ್(June) 11 ರಿಂದ ಆಗಸ್ಟ್ 15 ರವರೆಗೆ ಅಂದರೆ ಈ ಯೋಜನೆ ಆರಂಭವಾದ ದಿನದಿಂದ ಒಟ್ಟಾಗಿ 72,74,30,051 ಮಂದಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣವನ್ನು ಮಾಡಿದ್ದಾರೆ.
ಅದರಲ್ಲಿ ಒಟ್ಟು 40,02,29,256 ಮಂದಿ ಮಹಿಳಾ ಪ್ರಯಾಣಿಕರು ಆಗಿದ್ದಾರೆ. ಇನ್ನು 930,34,82,844 ರೂಪಾಯಿ ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್ (Ticket)ಮೌಲ್ಯ ಆಗಿದೆ. ಒಟ್ಟು
10,54,45,047 ಮಹಿಳೆಯರು ಈವರೆಗೆ ಉಚಿತವಾಗಿ ಪ್ರಯಾಣ ಮಾಡಿದ್ದು,ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್ 248,30,13,266 ರೂಪಾಯಿ .
ಶಕ್ತಿ ಯೋಜನೆಯ ಪ್ರಮುಖ ಮಾಹಿತಿ
ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಮಹಿಳೆಯರು ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಗಳಲ್ಲಿ ಈ
ಯೋಜನೆಯಡಿಯಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಇನ್ನೂ ಸರ್ಕಾರ ‘ಶಕ್ತಿ’ ಸ್ಮಾರ್ಟ್ಕಾರ್ಡ್ (Smart Card) ವಿತರಣೆ ಮಾಡಲು ಆರಂಭಿಸಿಲ್ಲ. ಆಧಾರ್ ಕಾರ್ಡ್ (Aadhar card),
ಮತದಾರರ ಗುರುತಿನ ಚೀಟಿ (Voter ID), ಅಥವಾ ಡ್ರೈವಿಂಗ್ ಲೈಸೆನ್ಸ್ (Driving Licence) ತೋರಿಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ರಶ್ಮಿತಾ ಅನೀಶ್