2014 ನಂತ್ರ ದೇಶದ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಇಳಿಕೆ: ಭಾರತದ ಸ್ಕೋರ್ 0.4ಕ್ಕಿಂತ ಕಡಿಮೆ

India: 2014ರ ನಂತರ ಭಾರತ ದೇಶದಲ್ಲಿ ಶೈಕಣಿಕ ಸ್ವಾತಂತ್ರ್ಯಕ್ಕೆ ಭಾರೀ ಇಳಿಕೆ ಕಂಡಿದೆ ಎಂದು ಜಗತ್ತಿನಾದ್ಯಂತ ವಿದ್ವಾಂಸರ ಗುಂಪು ಬಿಡುಗಡೆ ಮಾಡಿರುವ `ಅಕಾಡೆಮಿಕ್ ಫ್ರೀಡಂ ಇಂಡೆಕ್ಸ್ ಅಪ್ಡೇಟ್ 2023‘(Academic Freedom Index Update 2023) ವರದಿ ತಿಳಿಸಿದೆ.

Academic Freedom Index Report


ಜಗತ್ತಿನಾದ್ಯಂತ 2917 ತಜ್ಞರು ಈ ವರದಿಯನ್ನು ಸ್ವೀಡನ್ ದೇಶದ ವಿ-ಡೆಮ್ಇನ್ಸ್ಟಿಟ್ಯೂಟ್ ಮತ್ತು ಜರ್ಮನಿಯ ಫ್ರೀಡ್ರಿಚ್ ಅಲೆಕ್ಸಾಂಡರ್ ವಿವಿಯ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸಾಯನ್ಸ್(Institute of Political Science) ಸಹಯೋಗದೊಂದಿಗೆ ಸಿದ್ಧಪಡಿಸಿದ್ದಾರೆ.

ಒಟ್ಟು 179 ದೇಶಗಳ ಪೈಕಿ ಕೆಳಗಿನ ಶೇಕಡಾ 30 ದೇಶಗಳ ಪಟ್ಟಿಯಲ್ಲಿ ಭಾರತವಿದ್ದು, ಸೂಚ್ಯಂಕ ಸ್ಕೋರ್(Score) 0.4ಕ್ಕಿಂತ ಕಡಿಮೆ ಇದೆ.

ಈ ವರದಿಯಲ್ಲಿ ಹತ್ತು ವರ್ಷಗಳಿಗೆ ಹೋಲಿಸಿದ್ರೆ ಈಗ ಗಮನಾರ್ಹವಾಗಿ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಕಳೆದುಕೊಂಡಿರುವ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಕಾಣದ ಪಟ್ಟಿಯಲ್ಲಿ ಒಟ್ಟು 22 ದೇಶಗಳ ಹೆಸರುಗಳಿವೆ.

https://youtu.be/2dWbPTHMGM0

ಈ ಪಟ್ಟಿಯಲ್ಲಿ ಭಾರತ, ಚೀನಾ, ಅಮೇರಿಕಾ ಹಾಗೂ ಮೆಕ್ಸಿಕೋ ಇವೆ. ಈ ದೇಶಗಳಲ್ಲಿ ವಿದ್ವಾಂಸರು, ನಾನಾ ವಿವಿಗಳಿದ್ದರೂ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆಯಾಗಿವೆ.

Academic freedom index


ಈ ಪಟ್ಟಿಯಲ್ಲಿ ಟಾಪ್ ಶೇಕಡಾ 50 ದೇಶಗಳಲ್ಲಿ ಅಮೇರಿಕಾ ಇದ್ದು ಅದರ ಸೂಚ್ಯಂಕ ಸ್ಕೋರ್ 0.8ಕ್ಕಿಂತ ಕಡಿಮೆ ಇದೆ. ಇನ್ನು ಕೆಳಗಿನ ಚೀನಾ (China) ಶೇ.10 ದೇಶಗಳ ಪೈಕಿ ಇದ್ದು,

ಅದರ ಸೂಚ್ಯಂಕ ಸ್ಕೋರ್ 0.1ಕ್ಕಿಂತ ಕಡಿಮೆ ಇದೆ.ಭಾರತದಲ್ಲಿ 2009ರಿಂದಲೇ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಇಳಿಮುಖ ಕಂಡಿದೆ.

ಆದ್ರೆ 2013ರ ನಂತ್ರ ಈ ಇಳಿಮುಖ ಬಹಳಷ್ಟು ಹೆಚ್ಚಾಗಿದ್ದು, 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ (academic freedom index 2023) ಬಳಿಕ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಬಹಳಷ್ಟು ಕುಸಿದಿದೆ ಎಂದು ವರದಿ ಸ್ಪಷ್ಟವಾಗಿ ಹೇಳಿದೆ


ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಕುಸಿಯುವಿಕೆಗೆ ಅನೇಕ ಮಾನದಂಡಗಳನ್ನು ಅನುಸರಿಸಲಾಗಿದೆ. ಸಂಶೋಧನೆ, ಕಲಿಸುವಿಕೆಯ ಸ್ವಾತಂತ್ರ್ಯಕ್ಕೆ,

ಶೈಕ್ಷಣಿಕ ವಿನಿಮಯದ ಸ್ವಾತಂತ್ರ್ಯಕ್ಕೆ, ವಿವಿಗಳ ಸಾಂಸ್ಥಿಕ ಸ್ವಾಯತ್ತತೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯಸ್ವಾತಂತ್ರ್ಯಕ್ಕೆ, ಭದ್ರತೆ ಅತಿಕ್ರಮಣಗಳು ಮತ್ತು ಕ್ಯಾಂಪಸ್ ಸರ್ವೇಕ್ಷಣೆ ಸಹಿತ ಐದು ಅಂಶಗಳ ಆಧಾರದಲ್ಲಿ ಅಂಕಗಳನ್ನು ನೀಡಲಾಗಿದೆ.

Exit mobile version