ವಿದ್ಯಾರ್ಥಿನಿ ಮೇಲೆ ಮುಖ್ಯಶಿಕ್ಷಕನಿಂದ ಆ್ಯಸಿಡ್ ದಾಳಿ: ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಲು ಆದೇಶ.

Chitradurga: ಚಿತ್ರದುರ್ಗ ತಾಲ್ಲೂಕಿನ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ (Acid attack on Student) ಓದುತ್ತಿದ್ದ ಸಿಂಚನಾ

(Sinchana) ಎಂಬ ವಿದ್ಯಾರ್ಥಿನಿಯ ಮೇಲೆ ಅದೇ ಶಾಲೆಯ ರಂಗಸ್ವಾಮಿ ಎಂಬ ಮುಖ್ಯ ಶಿಕ್ಷಕ ಆ್ಯಸಿಡ್ (Acid) ಎರಚಿರುವ ಸುದ್ದಿಯೊಂದು ಕೇಳಿ ಬರುತ್ತಿದೆ. ಶೌಚಾಲಯ ಸ್ವಚ್ಛಗೊಳಿಸುವ

ಆ್ಯಸಿಡ್ ಅನ್ನು ಆ ಪುಟ್ಟ ವಿದ್ಯಾರ್ಥಿನಿಯ ಮೇಲೆ (Acid attack on Student) ಎರಚಿರುವ ಘಟನೆ ನಡೆದಿದೆ.

ದಸರಾ (Dasara) ರಜೆ ಮುಗಿಸಿ ಖುಷಿ ಖುಷಿಯಿಂದ ಮಕ್ಕಳು ಚಿತ್ರದುರ್ಗ ತಾಲ್ಲೂಕಿನ ಜೋಡಿಚಿಕ್ಕೇನಹಳ್ಳಿಯ (Jodichikkenhalli) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದಿದ್ದರು. ಶಾಲೆಗೆ

ಬಂದಿರುವ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ (Rangaswamy) ಶೌಚಾಲಯ ಸ್ವಚ್ಛಗೊಳಿಸಲು ಸೂಚಿಸಿದ್ದಾರೆ.ಹೇಗೆ ಶೌಚಾಲಯಗಳನ್ನು ಸ್ವಚ್ಛ ಮಾಡುತ್ತಿದ್ದಾರೆ ಎಂದು ತಿಳಿಯಲು

ಸಿಂಚನಾ ಎಂಬ ವಿದ್ಯಾರ್ಥಿನಿ ಅಲ್ಲಿಗೆ ತೆರಳಿದ್ದಾರೆ ಆಗ ಶಾಲೆಯ ಮುಖ್ಯಶಿಕ್ಷಕ ಕೋಪಗೊಂಡು ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಎರಚಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಆ್ಯಸಿಡ್ ಎರಚಿದ ಪರಿಣಾಮದಿಂದ ಸಿಂಚನಾ ವಿದ್ಯಾರ್ಥಿನಿ ಬೆನ್ನು ಗಾಯಗೊಂಡಿದೆ. ತಕ್ಷಣ ಮುಖ್ಯಶಿಕ್ಷಕ ರಂಗಸ್ವಾಮಿಯವರು ತನ್ನ ವಿದ್ಯಾರ್ಥಿನಿಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಸೇರಿಸಿದ ನಂತರ

ಸಿಂಚನಾ ಪುತ್ರಿಯ ತಾಯಿ ಈ ಬಗ್ಗೆ ವಿಚಾರಣೆ ನಡೆಸಿ ಮುಖ್ಯ ಶಿಕ್ಷಕನ ಮೇಲೆ ಸೂಕ್ತವಾದ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಡಿಡಿಪಿಐ (DDPI) ರವಿಶಂಕರ ರೆಡ್ಡಿ (Ravishankara Reddy) ಅವರು, ಮುಖ್ಯ ಶಿಕ್ಷಕ ರಂಗಸ್ವಾಮಿಯನ್ನು ಶಾಲೆಯಿಂದ ಅಮಾನತುಗೊಳಿಸಲು ಆದೇಶ ಹೊರಡಿಸಿದ್ದಾರೆ.

ಮುಖ್ಯ ಶಿಕ್ಷಕ ರಂಗಸ್ವಾಮಿಯನ್ನು ಹೆಚ್ಚು ವಿಚಾರಿಸಿದಾಗ ದಸರಾ ರಜೆ ಮುಗಿದು ಶಾಲೆ ಪ್ರಾರಂಭವಾಗಿತ್ತು. ಕೆಲವು ಹಿರಿಯ ವಿದ್ಯಾರ್ಥಿಗಳೊಂದಿಗೆ ಶೌಚಾಲಯ ಸ್ವಚ್ಛಮಾಡುತ್ತಿದ್ದವು, ಆ ಸಮಯದಲ್ಲಿ

ಸಿಂಚನಾ ಎಂಬ ವಿದ್ಯಾರ್ಥಿನಿ ಅಲ್ಲಿಗೆ ಬಂದಿದ್ದರು. ನೀನು ಇಲ್ಲಿಂದ ಹೋಗಮ್ಮ ಎನ್ನುವಷ್ಟರಲ್ಲಿ ಪಾಕೆಟ್ ಕಟ್ (Pocket Cut) ಮಾಡಿದ ಆ್ಯಸಿಡ್ ಪುಡಿ ಅವಳ ಮೇಲೆ ಬಂದಿರಬಹುದು, ಆದ್ರೆ ಯಾವುದೇ

ದುರುದ್ದೇಶದಿಂದ ಈ ಕೆಲಸ ಮಾಡಿಲ್ಲ ಎಂದು ಮುಖ್ಯ ಶಿಕ್ಷಕ ರಂಗಸ್ವಾಮಿ ಹೇಳಿದ್ದಾರೆ.

ಇದನ್ನು ಓದಿ: ಚಿಕ್ಕಮಗಳೂರು ಕೆಲವು ಪ್ರವಾಸ ತಾಣಗಳಿಗೆ ನ. 4 ರಿಂದ 6 ವರೆಗೂ ನಿರ್ಬಂಧ: ಜಿಲ್ಲಾಡಳಿತ ಆದೇಶ

Exit mobile version