Chikkamagalauru: ಮೂರು ದಿನಗಳ ಕಾಲ ಚಿಕ್ಕಮಗಳೂರಿನ ಕೆಲವು ಪ್ರವಾಸ ತಾಣಗಳಿಗೆ ನಿರ್ಭಂಧ ಮಾಡಲಾಗಿದ್ದು, ಚಿಕ್ಕಮಗಳೂರಿಗೆ ಹೋಗುವ ಪ್ಲಾನ್ ಗಳು (Plan) ಇದ್ದರೆ ಬದಲಾವಣೆ ಮಾಡಿಕೊಳ್ಳಿ ಎಂದು ಚಿಕ್ಕಮಗಳೂರಿನ ಜಿಲ್ಲಾಡಳಿತ ಪ್ರವಾಸಿಗರಿಗೆ ಆದೇಶ ಹೊರಡಿಸಿದೆ.
ಮುಳ್ಳಯ್ಯನಗಿರಿ, ದತ್ತಪೀಠ (Dattapeeth), ಸೀತಾಳಯ್ಯನಗಿರಿ, ಮಾಣಿಕ್ಯಾದಾರ, ಗಾಳಿಕೆರೆ (Galikere), ಹೊನ್ನಮ್ಮನಹಳ್ಳ,ಈ ಪ್ರವಾಸ ತಾಣಗಳಿಗೆ ಮೂರು ದಿನಗಳವರೆಗೆ ಅಂದರೆ ನವೆಂಬರ್ 4 ರಿಂದ ನವೆಂಬರ್ (November) 6 ವರೆಗೂ ಪ್ರವಾಸಿಗರನ್ನು ನಿರ್ಭಂಧಿಸಲಾಗಿದೆ ಎಂದು ಚಿಕ್ಕಮಗಳೂರಿನ ಜಿಲ್ಲಾಡಳಿತ ತಿಳಿಸಿದೆ.
ರಾಜ್ಯಾದ್ಯಂತ ಶ್ರೀ ರಾಮಸೇನೆ ದತ್ತ ಮಾಲಾ ಅಭಿಯಾನ ಏರ್ಪಡಿಸಿದ್ದು, ಅಕ್ಟೋಬರ್ (October) 30 ರಿಂದ ನವೆಂಬರ್ 5 ವರೆಗೆ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಅಕ್ಟೋಬರ್ 30 ರಂದು ರಾಜ್ಯಾದ್ಯಂತ ದತ್ತಭಕ್ತರು ದತ್ತಮಾಲೆಯನ್ನು ಹಾಕಲಿದ್ದಾರೆ. ಆ ದಿನದಂದೆ ಚಿಕ್ಕಮಗಳೂರಿನ ಶಂಕರಮಠದ (Shankaramath) ಮಾಲಾಧಾರಣೆ, ನವೆಂಬರ್ 2 ರಂದು ದತ್ತ ದೀಪೋತ್ಸವ, ನವೆಂಬರ್ 4 ರಂದು ಪಡಿ ಸಂಗ್ರಹ ಮಾಡಲಾಗುತ್ತದೆ. ನವೆಂಬರ್ 5 ರಂದು ಶೋಭಾಯಾತ್ರೆ, ಇದೇ ಜಾಗದಲ್ಲಿ ಧರ್ಮಸಭೆ ನಡೆಸಿ, ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದು ನಂತರ ಹೋಮ, ಹವನ, ಪ್ರಸಾದ ವಿನಿಯೋಗ, ನಡೆಯಲಿದೆ ಎಂದು ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿಯವರು (Gangadhara Kulkarni) ಹೇಳಿಕೆ ಕೊಟ್ಟಿದ್ದಾರೆ.
ನಾಗರಾಜ್ (ಕೆ.ಕಲ್ಲಹಳ್ಳಿ).