ಪ್ರಧಾನನ ಮಂತ್ರಿ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಗೈರು: ವೈದ್ಯಕೀಯ ವಿ.ವಿ.ಯ 36 ವಿದ್ಯಾರ್ಥಿಗಳ ವಿರುದ್ಧ ಕ್ರಮ

Chandigarh : ಚಂಡೀಗಢದ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (PGIMER) ನ 36 ವಿದ್ಯಾರ್ಥಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ನ 100 ನೇ ಸಂಚಿಕೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ.

ಪ್ರಧಾನಮಂತ್ರಿಯವರ ‘ಮನ್ ಕಿ ಬಾತ್’ (Mann Ki Baat) ಕಾರ್ಯಕ್ರಮಕ್ಕೆ ಗೈರಾದ ಪರಿಣಾಮವಾಗಿ, ವಿಶ್ವವಿದ್ಯಾನಿಲಯದಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜುಕೇಶನ್‌ನ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ನಿಂದ ಏಳು ದಿನಗಳ ಕಾಲ ಹೊರಗೆ ಹೋಗದಂತೆ ನಿಷೇಧಿಸಲಾಗಿದೆ.

“ದಿ ಇಂಡಿಯನ್ ಎಕ್ಸ್‌ಪ್ರೆಸ್” (The Indian Express) ವರದಿಯ ಪ್ರಕಾರ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜುಕೇಶನ್‌ನ ಪ್ರಾಂಶುಪಾಲರಾದ ಡಾ.ಸುಖ್ಪಾಲ್ ಕೌರ್ (Dr. Sukhpal Kaur) ಅವರು ಒಟ್ಟು 36 ವಿದ್ಯಾರ್ಥಿಗಳಿಗೆ ಮೇ 3 ರಂದು ಆದೇಶ ಹೊರಡಿಸಿದ್ದಾರೆ – ಅವರಲ್ಲಿ 28 ವಿದ್ಯಾರ್ಥಿಗಳು ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಇನ್ನು 8 ವಿದ್ಯಾರ್ಥಿಗಳು ಮೂರನೇ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ.

ಇದನ್ನೂ ಓದಿ : https://vijayatimes.com/hd-kumaraswamy-statement/

‘ಮಂಕಿ ಬಾತ್’ನಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಬೇಕಿತ್ತು. ಅದೇನೇ ಇದ್ದರೂ, ಗೈರುಹಾಜರಾದ ಯಾವುದೇ ವಿದ್ಯಾರ್ಥಿಗಳನ್ನು ಗಮನಿಸಲಾಗುವುದು ಎಂದು ಕೌರ್ ಆದೇಶಿಸಿದರು. ‘ಹಿಂದೂಸ್ತಾನ್ ಟೈಮ್ಸ್’ ಪ್ರಕಾರ, ಹಾಸ್ಟೆಲ್ ವಾರ್ಡನ್ ಅವರು ಹಲವಾರು ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದ್ದರು ಆದಾಗ್ಯೂ,

ವಿದ್ಯಾರ್ಥಿಗಳು ಅವರ ಉಪದೇಶದ ಮಹತ್ವವನ್ನು ಗುರುತಿಸದೆ ನನ್ನ ಮಾತಿಗೆ ಯಾವುದೇ ಬೆಲೆ ನೀಡಲಿಲ್ಲಎಂದು ಹಾಸ್ಟೆಲ್ ವಾರ್ಡನ್ ಹೇಳಿರುವುದಾಗಿ ವರದಿಯಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ, ಕಾಲೇಜಿನಲ್ಲಿ ಆಯೋಜಿಸುವ ಬೇರೆ ಬೇರೆ ಅತಿಥಿ ಉಪನ್ಯಾಸ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಲ್ಲುವ ಅಗತ್ಯ ಇದೆ ಎಂದು ಎಂದು ಕೌರ್ ಹೇಳಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳಿಗೆ ನಾನು ಉತ್ತರದಾಯಿ ಆದ್ದರಿಂದ ನನ್ನ ನಿರ್ದೇಶನವನ್ನು ಅನುಸರಿಸದೇ ಇದ್ದರೆ ನಾನು ಅವರನ್ನು ದಂಡಿಸುವ ಅಗತ್ಯತೆ ಇದೆ ಎಂದು ಕೌರ್ ಹೇಳಿದ್ದಾರೆ.

Exit mobile version