ನಟ ಅಮೀರ್​ಖಾನ್​ ಮತ್ತು ಪತ್ನಿ ಕಿರಣ್​ ರಾವ್ ದಾಂಪತ್ಯ ಅಂತ್ಯ

ಮುಂಬೈ, ಜು. 03: ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಅಮೀರ್​ಖಾನ್​ ಮತ್ತು ಪತ್ನಿ ಕಿರಣ್​ ರಾವ್ ಪರಸ್ಪರ​ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ.

ಲಗಾನ್ ಸಿನೇಮಾದಲ್ಲಿ ಆತ್ಮೀಯರಾಗಿದ್ದ ಅಮೀರ್ ಖಾನ್ ಹಾಗೂ ಕಿರಣ್‌ ರಾವ್, ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಲು ಬಯಸುತ್ತೇವೆ ಎಂದು ಈ ದಂಪತಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆ ಮೂಲಕ ಈ ಇಬ್ಬರ ನಡುವಿನ 16 ವರ್ಷದ ದಾಂಪತ್ಯದ ಅಂತ್ಯಕ್ಕೆ ನಿರ್ಧರಿಸಿದ್ದಾರೆ.

ನಟ ಅಮೀರ್ ಖಾನ್ ಈ ಹಿಂದೆ 2002ರಲ್ಲಿ ಮೊದಲ ಪತ್ನಿ ರೀಮಾ ರಾವ್‌ಗೆ ವಿಚ್ಛೇದನ ನೀಡಿದ್ದರು.

Exit mobile version