ಇಂತಹ ನಿಜ ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರು – ನಟ ಚೇತನ್

Bengaluru: ಇಂತಹ ನಿಜ-ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರು ಎಂದು ನಟ ಚೇತನ್ ಅಹಿಂಸಾ (Chethan Ahimsa) ಅವರು ಅಭಿಪ್ರಾಯಪಟ್ಟಿದ್ದಾರೆ.

Darshan Arrested

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ #ActorDarshan ಮೇಲೆ ಕೇಳಿ ಬಂದಿರುವ ಕೊಲೆ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಅವರು, ನಟ ದರ್ಶನ್ ಅವರು ಸದಾ ಕಾಲ ಕಾನೂನಿನೊಂದಿಗೆ ಸಂಘರ್ಷ ನಡೆಸುತ್ತಲೇ ಇದ್ದಾರೆ. ಸದ್ಯ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಆದರೆ ಅವರ ಮೇಲೆ ಕೇಳಿ ಬಂದಿರುವ ಆರೋಪ ಅತ್ಯಂತ ಗಂಭೀರವಾದದು. ನೇಹಾ ಹಿರೇಮಠ ಹತ್ಯೆ (Neha Hiremath Murder Case) ಯನ್ನು ಖಂಡಿಸಿದ್ದ ಕನ್ನಡ ಚಿತ್ರರಂಗ ರೇಣುಕಾಸ್ವಾಮಿ (Renukaswamy) ಅವರ ಕೊಲೆಯ ಕುರಿತು ಮಾತನಾಡುತ್ತಿಲ್ಲ. ಚಿತ್ರರಂಗದ ಈ ನಡೆ ನನಗೇನು ಆಶ್ಚರ್ಯ ಉಂಟು ಮಾಡಿಲ್ಲ. ಏಕೆಂದರೆ ಚಿತ್ರರಂಗ ಎಂದಿಗೂ ತನ್ನ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚುವುದಿಲ್ಲ ಎಂದು ಟೀಕಿಸಿದ್ಧಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಟ ದರ್ಶನ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು ಗಂಭೀರವಾಗಿವೆ. ನಮ್ಮ ರಾಜ್ಯ ಪೊಲೀಸರು ಅದಕ್ಕೆ ಅನುಗುಣವಾಗಿ ತನಿಖೆ ನಡೆಸುತ್ತಾರೆ ಎಂದು ನಾವು ನಂಬುತ್ತೇವೆ. ಅಲ್ಲದೆ, ಚಲನಚಿತ್ರ ತಾರೆಯರು ಸುಮಾರು ಒಂದು ಶತಮಾನದಿಂದ ಅವರು ಪಡೆದಿರುವ ಜೀವನಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಅರ್ಹರಲ್ಲ. ಇಂತಹ ನಿಜ-ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರು ಎಂದು ಅಭಿಪ್ರಾಯಪಟ್ಟಿದ್ದಾರೆ.

Exit mobile version