ಕರ್ನಾಟಕದ 4ನೇ ಪ್ರಬಲ ಸಮುದಾಯದ ಹಾಲುಮತ ಕುರುಬರನ್ನು ಎಸ್ಟಿ (Actor Chethan against Siddaramaiah) ವರ್ಗಕ್ಕೆ ಸೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರು
ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಇದು ಘೋರವಾದ ಬ್ರಾಹ್ಮಣ್ಯವಾಗಿದೆ ಎಂದು ನಟ ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ (Karnataka) 4ನೇ ಪ್ರಬಲ ಸಮುದಾಯದ ಹಾಲುಮತ ಕುರುಬರನ್ನು
ಎಸ್ಟಿ ವರ್ಗಕ್ಕೆ ಸೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ— ಇದು ಘೋರವಾದ ಬ್ರಾಹ್ಮಣ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ
ಬೆಳಗಾವಿಯಲ್ಲಿ ನಡೆದ ಕುರುಬ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ‘ಸಮಾನ’ ಸಮಾಜ ನಿರ್ಮಾಣ ಮಾಡುವುದಾಗಿ ಹೇಳುತ್ತಲೇ ತಮ್ಮ ವೈಯಕ್ತಿಕ ಮಟ್ಟದಲ್ಲಿ ರಾಜಕೀಯ ಲಾಭಕ್ಕಾಗಿ
ಕುರುಬ ಲಾಬಿಗಳನ್ನು (Actor Chethan against Siddaramaiah) ಕ್ರೋಢೀಕರಿಸಿದ್ದಾರೆ.
ಇದು ಒಂದು ಬೂಟಾಟಿಕೆಯಾಗಿದೆ ಎಂದು ಟೀಕಿಸಿದ್ದಾರೆ. ಇನ್ನೊಂದು ಬರಹದಲ್ಲಿ, ಬಿಹಾರ (Bihar) ಸರ್ಕಾರವು ಇತ್ತೀಚೆಗೆ ಜಾತಿ ಗಣತಿಯನ್ನು ಬಿಡುಗಡೆ ಮಾಡಿದೆ– ಇದು ಒಳ್ಳೆಯ ನಿರ್ಧಾರ.
ಕರ್ನಾಟಕದ ಜಾತಿ ಗಣತಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಏಕೆ ವಿಳಂಬ ಮಾಡುತ್ತಿದ್ದಾರೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2015ರಲ್ಲಿ 262 ಕೋಟಿ ರೂ ವೆಚ್ಚದಲ್ಲಿ ಕ
ರ್ನಾಟಕದ ಜಾತಿ ಗಣತಿಗೆ ಚಾಲನೆ ನೀಡಿದರು ನಂತರ, ಮುಖ್ಯವಾಹಿನಿಯ ಎಲ್ಲಾ 3 ಪಕ್ಷಗಳ ರಾಜಕೀಯ ನಿರಾಸಕ್ತಿಯಿಂದಾಗಿ ಅದು ಧೂಳು ಹಿಡಿಯುತ್ತಿದೆ. ಜಾತಿ ಗಣತಿ ಬಿಡುಗಡೆ
ಮಾಡುವಂತೆ ಇತರ ಮುಖ್ಯಮಂತ್ರಿಗಳಿಗೆ ಬೇಡಿಕೆ ಇಡುವ ಸಿದ್ದರಾಮಯ್ಯನವರು ಈಗ ತಾವೇ ಮಾಡದಿರುವುದು ಬೂಟಾಟಿಕೆಯಂತೆ ಇದೆ ಎಂದಿದ್ದಾರೆ. ಇನ್ನೊಂದು ಬರಹದಲ್ಲಿ, ಶಾಮನೂರು
ಶಿವಶಂಕರಪ್ಪ (Shamanuru Shivashankarappa) ಹೇಳುತ್ತಾರೆ: ‘ನಾವು 74 ಲಿಂಗಾಯತ ಶಾಸಕರು- ನಾವು ನಮ್ಮದೇ ಸರ್ಕಾರವನ್ನು ಕಟ್ಟಬಹುದು/ರಚಿಸಬಹುದು.
ಒಂದು ಜಾತಿ ಸಮುದಾಯವನ್ನು ಆಧರಿಸಿದ ಸರ್ಕಾರವು ನಾಚಿಕೆಯಿಲ್ಲದ/ಲಜ್ಜೆಗೆಟ್ಟ ಬ್ರಾಹ್ಮಣ್ಯವಾಗಿದೆ ಇಂತಹ ಜಾತಿವಾದಿ ಚಿಂತನೆಗಳು ಕಾಂಗ್ರೆಸ್ (Congress) ಪಕ್ಷದ ವಾಸ್ತವವಾಗಿದ್ದು,
ಅದನ್ನು ಕಿತ್ತೊಗೆಯಬೇಕು. ಇಷ್ಟು ವಯಸ್ಸಾದ ಶಿವಶಂಕರಪ್ಪನವರು ಇನ್ನೂ ಮುಖ್ಯಮಂತ್ರಿ ಸ್ಥಾನದ ಆಸೆ ತೋರುತ್ತಿರುವುದು ಬೇಸರವಾಗಿದೆ ಎಂದಿದ್ದಾರೆ.
ಇದನ್ನು ಓದಿ: ಹುಬ್ಬಳ್ಳಿಗೆ ಅರ್ಧ ಗಂಟೆ ಮುಂಚೆ ತಲುಪಲಿದೆ ಧಾರವಾಡ -ಬೆಂಗಳೂರು ವಂದೇ ಭಾರತ್ ರೈಲು