ಶ್ರೀ ಸಿದ್ದರಾಮಯ್ಯ(Siddaramaiah) ಮತ್ತು ಖರ್ಗೆ- ಬ್ರಾಹ್ಮಣ್ಯವನ್ನು ಪ್ರಚೋದಿಸುವ(Provoke) ಈ ಇಬ್ಬರಿಗೂ, ಬುದ್ಧ – ಬಸವ – ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಸಾಮಾಜಿಕ ಹೋರಾಟಗಾರ(Social Activist) ಮತ್ತು ನಟ(Actor) ಚೇತನ್ ಅಹಿಂಸಾ(Chethan Ahimsa) ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಬ್ರಾಹ್ಮಣ್ಯವನ್ನು ಪ್ರತಿಪಾದಿಸುತ್ತಲೇ, ಬುದ್ಧ-ಬಸವ-ಅಂಬೇಡ್ಕರ್ (ಬಿಬಿಎ) ಅವರ ಹೆಸರುಗಳನ್ನು ಹೇಳಿಕೊಂಡು ಸಮಾನವಾದಿಗಳಾದ ನಮ್ಮನ್ನು ಕಾಂಗ್ರೆಸ್ ಪಕ್ಷವು(Congress Party) ಏಮಾರಿಸುತ್ತಲೇ ಬಂದಿದೆ.

ನಮಗೆಲ್ಲರಿಗೂ ಧರ್ಮದ ಹಕ್ಕಿದೆ, ಆದರೆ ಬುದ್ಧ – ಬಸವ ಮತ್ತು ಅಂಬೇಡ್ಕರ್ನ ಅನುಯಾಯಿಗಳು ವರಮಹಾಲಕ್ಷ್ಮಿ ಪೂಜೆಗೇ ಎಂದಿಗೂ ಉತ್ತೇಜನೆ ನೀಡುವುದಿಲ್ಲ. ಶ್ರೀ ಸಿದ್ದರಾಮಯ್ಯ ಮತ್ತು ಖರ್ಗೆ- ಬ್ರಾಹ್ಮಣ್ಯವನ್ನು ಪ್ರಚೋದಿಸುವ ಈ ಇಬ್ಬರಿಗೂ ಬುದ್ಧ – ಬಸವ – ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದ್ದಾರೆ. ಕೆಲ ದಿನಗಳ ಹಿಂದೆ, ಕರ್ನಾಟಕದ ಎರಡು ರಾಜಕೀಯ ಪಕ್ಷಗಳು ತಮ್ಮನ್ನು ತಾವೇ ಮುಜುಗರಕ್ಕೆ ಒಳಪಡಿಸಿಕೊಳ್ಳುತ್ತಿವೆ.
ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬವನ್ನು ಅಗತ್ಯವಿಲ್ಲದ ವೈಭವದೊಂದಿಗೆ ಆಚರಿಸುವ ಮೂಲಕ ಕಾಂಗ್ರೆಸ್ ಪಕ್ಷವು ‘ವ್ಯಕ್ತಿ ಪೂಜೆಯನ್ನು’ ಮಾಡುತ್ತಿದೆ. ಬಿಜೆಪಿಯಲ್ಲಿ, ಸಿದ್ದರಾಮ ಸ್ವಾಮಿಗೆ ಪ್ರತಿನಿತ್ಯ ‘ಉತ್ಸವ’ ಮಾಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿದ್ದು, ‘ಮೂರ್ತಿ ಪೂಜೆಯನ್ನು’ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಜನರ ಪಕ್ಷಗಳು ಬೇಕಿರುವುದು- ಪೂಜಾ ಪಕ್ಷಗಳಲ್ಲ. ಇನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಎಸ್ಡಿಪಿಐ(SDPI) ಪಕ್ಷವನ್ನು ನಿಷೇಧಿಸಬೇಕೆಂದು ಬಯಸುತ್ತಾರೆ.

ಎಸ್ಡಿಪಿಐಯ ಸಿದ್ಧಾಂತವನ್ನು ಒಪ್ಪದಿದ್ದರೂ, ರಾಜಕೀಯವಾಗಿ ಕಾರ್ಯನಿರ್ವಹಿಸುವ ಅದರ ಹಕ್ಕನ್ನು ಬೆಂಬಲಿಸುವವನಾಗಿ, ನಾನು ಸಿದ್ದರಾಮಯ್ಯ ಅವರ ಈ ಬೇಡಿಕೆಯನ್ನು ಒಪ್ಪುವುದಿಲ್ಲ. ಸಿದ್ದು ಅವರದ್ದು ಕಾಂಗ್ರೆಸ್ನ ಮುಸ್ಲಿಂ ಮತಗಳ ಪಾಲನ್ನು ಬಯಸುವ ಯಾರನ್ನಾದರೂ ಹೊಸಕಿಹಾಕುವ ಪ್ರಯತ್ನವಾಗಿದೆ. ಇದು ಸಿದ್ದು ಅವರ ಮತ್ತೊಂದು ಅವಕಾಶವಾದಿ ದೋರಣೆ ಎಂದು ಟೀಕಿಸಿದ್ದರು.