Bengaluru: ಚುನಾವಣೆಗೆಂದು ಗಿಮಿಕ್ ಮಾಡಬೇಕು ಎನ್ನುವ ಯೋಚನೆ ನನಗಿಲ್ಲ. ನಾನು ಚುನಾವಣೆಯನ್ನು (DKS vs HDK) ನೇರವಾಗಿ ಎದುರಿಸುತ್ತೇನೆ. ಜೇಬಲ್ಲಿ ಪೆನ್ ಡ್ರೈವ್ (Pen drive) ಇದೆ,
ಸಿ.ಡಿ ಇದೆ ಎಂದು ಹೆದರಿಸುವವನು ನಾನಲ್ಲ. ನನಗೆ ಇದ್ದಿದ್ದನ್ನು ಹೇಳಲು ಯಾರ ಭಯವೂ ಇಲ್ಲ. ಸದನದಲ್ಲಿ ಚರ್ಚೆಗೆ ಬರುವಂತೆ ನೇರ ಸವಾಲು ಹಾಕುವುದು ಬೆಂಗಳೂರಿನ (Bengaluru) ಕೆಂಪೇಗೌಡರ
ರಕ್ತದ ಗುಣ ಅದನ್ನೇ ಬೆಳೆಸಿಕೊಂಡು ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಅಷ್ಟಕ್ಕೂ ಪೆನ್ ಡ್ರೈವ್ ಪ್ರಕರಣದ ಹಿಂದೆ ಮಹಾನಾಯಕ ಡಿಕೆ ಶಿವಕುಮಾರ್ (D K Shivakumar) ಇದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಈಗಾಗಲೇ ಇದೆಲ್ಲವೂ ಹಳೇ ವಿಡಿಯೋ ಎಂದು ಸ್ವತಃ ರೇವಣ್ಣ ಅವರೇ ಒಪ್ಪಿಕೊಂಡಿದ್ದಾರೆ. ಉಪ್ಪು (DKS vs HDK) ತಿಂದವನು ನೀರು ಕುಡಿಯುತ್ತಾನೆ.
ಈ ವಿಚಾರವಾಗಿ ಪಕ್ಷದ ಹಿರಿಯರು , ಸಮರ್ಥ ನಾಯಕರೂ ಆದ ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.ಹೀಗಿರುವಾಗ ನನಗೂ ಈ ಪ್ರಕರಣಕ್ಕೂ ಏನು ಸಂಬಂಧವಿಲ್ಲ
ಎಂದು ಹೇಳಿದ್ದಾರೆ. ಕೆಲ ಕಡೆಗಳಲ್ಲಿ ಪೆನ್ ಡ್ರೈವ್ ವಿಚಾರ ಡಿಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ (D K Suresh) ಅವರಿಗೆ ಗೊತ್ತಿತ್ತು ಎಂಬುದಾಗಿ ಹೇಳಲಾಗ್ತಿದೆ ಅಷ್ಟಕ್ಕೂ ನಮಗೆ ಈ ವಿಚಾರ ಗೊತ್ತಿದ್ದರೆ
ನಾವು ಮುಂಚಿತವಾಗಿ ರಿಲೀಸ್ ಮಾಡಬಹುದಾಗಿತ್ತು.
ಇಂದು ಬೆಳಗ್ಗೆ ಅವರ ಚಾಲಕರೇ ಈ ಪೆನ್ ಡ್ರೈವ್ ವಿಚಾರ ಬಹಿರಂಗಗೊಳಿಸಿರುವುದಾಗಿ ಹೇಳಿದ್ದಾರೆ. ನಾನಂತೂ ಇಂತಹ ಚಿಲ್ಲರೆ ಕೆಲಸಕ್ಕೆ ಕೈ ಹಾಕುವುದಿಲ್ಲ. ಕುಮಾರಸ್ವಾಮಿ ಅವರ ಕುಟುಂಬದವರಿಗೆ ನನ್ನನ್ನು
ನೆನೆಸಿಕೊಳ್ಳಲಿದ್ದರೆ ಊಟ ಸೇರಲ್ಲ, ನಿದ್ದೆ ಬರಲ್ಲ, ಸ್ಫೂರ್ತಿಯೂ ಇರಲ್ಲ.
ಹಾಸನದ (Hassan) ಪ್ರಚಾರದ ವೇಳೆ ಕುಮಾರಸ್ವಾಮಿ ಅವರು ನನಗೆ ನಿಖಿಲ್ ಬೇರೆ ಅಲ್ಲ, ಪ್ರಜ್ವಲ್ ಬೇರೆ ಅಲ್ಲ ಎಂದು ಬೆನ್ನುತಟ್ಟಿ ಹೇಳಿದ್ದನ್ನು ನೋಡಿದ್ದೇವೆ. ಅದರಲ್ಲಿ ತಪ್ಪೇನಿಲ್ಲ. ಅವರ ಕುಟುಂಬ ಹಾಗೂ
ಅವರ ಕುಡಿ. ಈಗ ನನಗೂ ಪ್ರಜ್ವಲ್ (Prajwal) ಕುಟುಂಬಕ್ಕೂ ಸಂಬಂಧ ಇಲ್ಲ ಎಂದು ಮಾತು ಬದಲಿಸಿದ್ದಾರೆ ಅವರಲ್ಲೇ ಒಗ್ಗಟ್ಟಿಲ್ಲ ಇನ್ನು ನಾನೇನು ಮಾಡಲಿ ಎಂದು ನುಡಿದಿದ್ದಾರೆ.
ಇದನ್ನು ಓದಿ: ಭಾರತ ಸೂಪರ್ ಪವರ್ ಆಗುವ ಕನಸು ಕಾಣುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕ್ ಅಸೆಂಬ್ಲಿಯಲ್ಲಿ ಭಾರೀ ಚರ್ಚೆ