2002 ರಲ್ಲಿ ಗುಜರಾತ್ 2023 ರಲ್ಲಿ ಮಣಿಪುರ (Actor Kishore criticizes Modi) .. ಜೀವಗಳು ಮುಖ್ಯವಲ್ಲ ಓಟುಗಳಷ್ಟೇ ಮುಖ್ಯ…ಇತಿಹಾಸಕ್ಕೆ ಮರೆವಿಲ್ಲ ನೆನಪಿರಲಿ.. ಎಂದು ಕನ್ನಡದ ನಟ ಕಿಶೋರ್ (Kishore)
ಪ್ರಧಾನಿ ನರೇಂದ್ರ ಮೋದಿ ವಿರುದ್ದ ತೀವ್ರ ವಾಗ್ದಾಳಿ (Actor Kishore criticizes Modi) ನಡೆಸಿದ್ದಾರೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ (Instagram) ಪೋಸ್ಟ್ನಲ್ಲಿ ಬರೆದುಕೊಂಡಿರುವ ಅವರು, ಮನ್ ಕೀ ಬಾತ್ ನಲ್ಲಿ ಕಳೆದುಹೋದ ಮಣಿಪುರದ ಬಾತ್. ದೇಶದಲ್ಲಿ ಎಲ್ಲೇ ಅಶಾಂತಿ ಮೂಡಿದಾಗಲೂ ಒಬ್ಬ ಪ್ರಧಾನಿ
ಮಾಡಬಹುದಾದ ಮೂಲಭೂತ, ಅತೀ ಸರಳ, ಕಾಮನ್ ಸೆನ್ಸ್ ನ (Common Sense) ಕೆಲಸ ಶಾಂತಿಯ ಕರೆ ಕೊಡುವುದು. ಅದನ್ನೂ ಕೂಡ ಮಾಡದ ಪ್ರಧಾನಿಯ ಮನಸ್ಥಿತಿಯೇನು? ನೂರ ನಲವತ್ತು
ಕೋಟಿ ಓಟಿನ ದೇಶದಲ್ಲಿ ಕೇವಲ 2 ಲೋಕಸಭೆ ಸೀಟಿನ ಮಣಿಪುರದ ಸತ್ತುಹೋದ ನೂರು ಓಟು, ಮನೆ ಕಳೆದುಕೊಂಡ 50 ಸಾವಿರ ಓಟುಗಳು, ಈ ಪ್ರಚಾರದಾಹಿ ಅಧಿಕಾರದಾಹಿ ಪ್ರಧಾನಿಗೆ
ಯಾವ ಲೆಕ್ಕವೆಂಬುದೇ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲಿಸಿ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದ ನಟ ಕಿಶೋರ್, ಕುಸ್ತಿಪಟುಗಳ ಪ್ರಕರಣದಲ್ಲಿ
ಇದನ್ನು ಓದಿ: ಜುಲೈ 2 ಭಾನುವಾರದಂದು ನೇರಳೆ ಮಾರ್ಗದಲ್ಲಿ ಬೆಳಗ್ಗೆ ಎರಡು ಗಂಟೆ ಕಾಲ ನಮ್ಮ ಮೆಟ್ರೋ ಸಂಚಾರ ಇರಲ್ಲ
ವಿನೇಶ್ ಫೋಗಟ್ (Vinesh Phogat) ಅವರು ಅಪ್ರಾಪ್ತ ವಯಸ್ಕ ಬಾಲಕಿಯೂ ಸೇರಿದಂತೆ ಮಹಿಳಾ ಕುಸ್ತಿ ಪಟುಗಳ ಮೇಲೆ ದೈಹಿಕ ಕಿರುಕುಳದ ಬಗ್ಗೆ ಮೊದಲು ತಿಳಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ,
ಅವರು ಪೊಲೀಸರಿಗೆ ತಿಳಿಸದೆ ಕ್ರೀಡಾ ಸಚಿವರಿಗೆ ತಿಳಿಸಿದರು, ಕ್ರೀಡಾ ಸಚಿವರೂ ಅದನ್ನು ಪೊಲೀಸರಿಗೆ ತಿಳಿಸಲಿಲ್ಲ ಬದಲಿಗೆ ಆರೋಪಿ ಬ್ರಿಜ್ ಭೂಷಣ್ (Brij Bhushan) ಗೇ ತಿಳಿಸಿಬಿಟ್ಟರು ..
ಆತ ಈ ಬಗ್ಗೆ ಕುಸ್ತಿಪಟುಗಳಿಗೆ ಬೆದರಿಕೆ ಹಾಕಲು ಆರಂಭಿಸಿದ .. ಜನವರಿಯಲ್ಲಿ ನಡೆದ ಧರಣಿಯ ನಂತರ ಕ್ರೀಡಾ ಸಚಿವಾಲಯವು ಸಮಿತಿಯನ್ನು ರಚಿಸಿತು, ಇದರಲ್ಲಿ ಮತ್ತೆ ಕುಸ್ತಿಪಟುಗಳು ಅಪ್ರಾಪ್ತ ವಯಸ್ಕರು
ಮತ್ತು ಇತರರ ಮೇಲೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ಈ ಹಿಂದೆ ಪ್ರಧಾನಿಗೆ ತಿಳಿಸಲಾದ ವಿಷಯವನ್ನು (Actor Kishore criticizes Modi) ತಿಳಿಸಿದರು.

ಅವರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ. ನಂತರ ಕುಸ್ತಿಪಟುಗಳು ಪೊಲೀಸ್ ಠಾಣೆಗೆ ಹೋದಾಗಲೂ, ಒಂದು ಜವಾಬ್ದಾರಿಯುತ ಸಂಸ್ಥೆಯಾದ ದೆಹಲಿ ಪೊಲೀಸ್ ಎಫ್ಐಆರ್ ದಾಖಲಿಸಲಿಲ್ಲ.
ಐದು ತಿಂಗಳ ನಂತರ ರಾಷ್ಟ್ರದಾದ್ಯಂತ ಜನರು ಪ್ರತಿಭಟನೆಯನ್ನು ಪ್ರಾರಂಭಿಸಿದಾಗ, ಸುಪ್ರೀಂ ಕೋರ್ಟ್ (Supreme Court) ಮಧ್ಯಪ್ರವೇಶಿಸಿ ಎಫ್ಐಆರ್ (FIR) ದಾಖಲಿಸಲು ದೆಹಲಿ ಪೊಲೀಸರನ್ನು
ಒತ್ತಾಯಿಸಿತು. ಆದ್ದರಿಂದ ಪೋಕ್ಸೊ ಕಾಯ್ದೆಯಡಿ ಪ್ರಧಾನಿ, ಕ್ರೀಡಾ ಸಚಿವ, ವಿಚಾರಣೆಗೆ ರಚಿಸಲಾದ ಸಮಿತಿ, ಪೊಲೀಸರಿಗೆ ಮಾಹಿತಿ ನೀಡದ ಕಾರಣಕ್ಕೆ ಮತ್ತು ಎಫ್ಐಆರ್ ದಾಖಲಿಸದ
ದೆಹಲಿ ಪೊಲೀಸರು ಎಲ್ಲರೂ ಶಿಕ್ಷಾರ್ಹರು ಎಂದು ವಾಗ್ದಾಳಿ ನಡೆಸಿದ್ದರು.