ಜಾತಿಜನಗಣತಿಯ ಪ್ರಾಮುಖ್ಯತೆಯ ಬಗೆಗಿನ ಪತ್ರಿಕಾ ಗೋಷ್ಠಿಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿಯವರ (Actor Kishore – Sanatana Dharma) ಅಚಾನಕ್ ಪ್ರಶ್ನೆ- ಈ ಕೋಣೆಯಲ್ಲಿ
ಎಷ್ಟು ಜನ ಓಬಿಸಿ (OBC), ದಲಿತರು ಮತ್ತು ಆದಿವಾಸಿಗಳಿದ್ದೀರಿ?? ಈ ಪ್ರಶ್ನೆ ಇಂದಿನವರೆಗೆ ಧರ್ಮದ ಮುಸುಕಲ್ಲಿ ಮುಚ್ಚಿಟ್ಟ ಡೆಮಾಕ್ರೆಸಿಯ ತಾಯಿ ಭಾರತ ದೇಶದ ಕಠೋರ ವಾಸ್ತವಕ್ಕೆ, ಸತ್ಯಕ್ಕೆ ಕನ್ನಡಿ
ಹಿಡಿದದ್ದಂತೂ ಸತ್ಯ. ತುಂಬಿದ ಸಭೆಯಲ್ಲಿ ಒಬ್ಬ ಓಬಿಸಿ, ದಲಿತ, ಆದಿವಾಸಿ (Actor Kishore – Sanatana Dharma) ಪತ್ರಕರ್ತನೂ ಇರಲಿಲ್ಲ.
ದೇಶದಲ್ಲಿ ಇವರ ಒಟ್ಟು ಸಂಖ್ಯೆ ಸುಮಾರು 70% . ಸಮಾನತೆಯ ಢೋಂಗಿ ನಾಟಕವಾಡುವ ಅಧಿಕಾರ ಹಿಡಿದವರ ರಾಜಕೀಯ ದಾಳ, ಪ್ರಮುಖ ಬಂಡವಾಳ, ಯಾವುದನ್ನು ಉಳಿಸಿಕೊಳ್ಳಲು
ಏನು ಬೇಕಾದರೂ ಮಾಡಲೂ ತಯಾರಿದ್ದರೋ ಆ ಮಾಸ್ಟರ್ ಸ್ಟ್ರೋಕ್ (Master Stroke) “ಸನಾತನ ಧರ್ಮ”ದ ಅರ್ಥ ಹುಡುಕುತ್ತಿದ್ದ ನನಗೆ ಇದರಿಂದ ಉತ್ತರ ಸಿಕ್ಕಂತಾಯ್ತು ಎಂದು ನಟ ಕಿಶೋರ್
(Kishore) ಹೇಳಿದ್ದಾರೆ.
ಇನ್ನೊಂದ ಬರಹದಲ್ಲಿ, ಪ್ರಶ್ನೆಗೆ, ಸತ್ಯಕ್ಕೆ ಹೆದರಿದ ಭ್ರಷ್ಟ, ಹೇಡಿ ರಾಜನ ಈಡಿ, ಬೇಡಿಯ ತಲೆಬುಡವಿಲ್ಲದ ಆರೋಪಗಳ ಮುಚ್ಚುಮರೆಯ ಹೊಲಸು, ನಾಚಿಕೆಗೆಟ್ಟ ಗೂಂಡಾಗಿರಿ ರಾಜಕೀಯ..
(ವಿಶೇಷಣಗಳು ಸಾಲುತ್ತಿಲ್ಲ) ಚೀನಾ (China) ಅತಿಕ್ರಮಣವನ್ನು ಮುಚ್ಚಿಹಾಕಿದಾಗ, ಚೀನಾ ಕಂಪೆನಿಗಳು ಸಾವಿರಾರು ಕೋಟಿ, ಗೆಳೆಯ ಅದಾನಿಗೆ ಕಾನೂನು ಬಾಹಿರವಾಗಿಯೂ ಕೊಡುತ್ತಲೇ ಇರುವಾಗ,
ಲೆಕ್ಕಪುಸ್ತಕವಿಲ್ಲದ ಪಿಎಮ್ ಕೇರ್ಸ್ ಗೆ, ಗೋದೀ ಚಾನೆಲ್ಲುಗಳಿಗೆ, ಐಪಿಎಲ್ ಗೆ ಕಾನೂನು ಪ್ರಕಾರವೇ ಕೊಟ್ಟಾಗಲೆಲ್ಲ ಕಾಣದ ದೇಶದ್ರೋಹ, ಅದೇ ಚೀನೀ ಕಂಪನಿಗಳು ಹಣ ಕೊಟ್ಟದ್ದಕ್ಕೆ ಪ್ರಾಮಾಣಿಕವಾಗಿ
ಜನಪರವಾಗಿ ಕೆಲಸ ಮಾಡುವ ಪತ್ರಕರ್ತರ ಕೆಲಸದಲ್ಲಿ ಕಂಡುಬಿಟ್ಟಿತಲ್ಲ.
ಹಾಗಾದರೆ ವಿವೊ (Vivo), ಶಾಒಮಿ ಫೋನು ಬಳಸುವ ನಾವು ನೀವೆಲ್ಲರೂ ಇವರ ಪ್ರಕಾರ ದೇಶದ್ರೋಹಿಗಳೇ? ಚೀನಾದ ಜೊತೆ ಸಾವಿರಾರು ಕೋಟಿ ವ್ಯಾಪಾರ ನಡೆಸುತ್ತಿರುವ ಭಾರತ ಸರ್ಕಾರ?? ಇವರ
ತಲೆಬುಡವಿಲ್ಲದ ಆರೋಪಗಳಿಗೆ ಆಧಾರವೇನು? ಆ ಕಂಪನಿಗಳನ್ನು ಮುಚ್ಚಿಸುತ್ತಾರೆಯೇ? ಸುಮ್ಮನೇ ಏನು ಭಾರತದ ಪತ್ರಿಕಾ ಸ್ವಾತಂತ್ರ್ಯ ಜಗತ್ತಿನಲ್ಲಿ 161ನೇ ಸ್ಥಾನಕ್ಕೆ ಹೋಗಿಲ್ಲ ನಮಗಾಗಿ ಹೋರಾಡಿದ
ಜನ ಜೈಲಿಗೆ ಹೋಗುವಾಗ ಬಾಯಿಮುಚ್ಚಿ ಕುಳಿತ ನಾವು ಯೋಚಿಸಬೇಡವೇ? ನಮ್ಮ ಮುಂದಿನ ಪೀಳಿಗೆಯ ಗತಿಯೇನೆಂದು?? ನಮ್ಮ ಮಕ್ಕಳು ಭ್ರಷ್ಟರಾಗಬೇಕು ಇಲ್ಲಾ ಜೈಲು (Jail) ಸೇರಬೇಕು ಅಲ್ಲವೇ??
ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಇದನ್ನು ಓದಿ: ಕಾವೇರಿ ಕಿಚ್ಚು: ತಮಿಳುನಾಡಿನಲ್ಲಿ ಕರ್ನಾಟಕದ ವಿರುದ್ಧ ಪ್ರತಿಭಟನೆ, ಅಂಗಡಿ ಮುಂಗಟ್ಟುಗಳು ಬಂದ್