ಈ ಪರಮಭ್ರಷ್ಟ ವಿಶ್ವಗುರುಗಳನ್ನು ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಧೈರ್ಯ ನಮಗಿಲ್ಲವೇ? ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ಈಗ ನಾಚಿಕೆಗೆಟ್ಟು ಓಟು ಕೇಳಲು ಬರುವ ಈ ಪರಮಭ್ರಷ್ಟ ವಿಶ್ವಗುರುಗಳನ್ನು ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ (Actor Kishore Slams Modi) ಧೈರ್ಯ ನಮಗಿಲ್ಲವೇ? ಗೋದೀ ಮಾಧ್ಯಮವನ್ನು

ಮೆಟ್ಟಿನಲ್ಲಿ ಬಡಿದು ಬಹಿಷ್ಕಾರ ಹಾಕುವ, ಸರಿದಾರಿಗೆ ತರುವ ಸ್ಥೈರ್ಯ ನಮಗಿಲ್ಲವೇ? ನಾವು ನಿಜವಾದ ದೇಶಭಕ್ತರಾಗಿದ್ದರೆ ಅಂದು ತೋರಿದ ಧೈರ್ಯ ಇಂದು ತೋರಲಾರೆವೇ? ಎಂದು ನಟ ಕಿಶೋರ್

ಕುಮಾರ್ (Actor Kishore Kumar) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ದ ಕಟು ಪದಗಳ ಮೂಲಕ ಟೀಕಿಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಸೋನಮ್ ವಾಂಗ್ ಚುಕ್ (Sonam Whang Chuk) ಲಡಾಖನ್ನು ಗಣಿಗಾರಿಕೆಯ ಸೇಠ್ ಗಳಿಂದ ಉಳಿಸಲು ಮಾಡಿದ

21 ದಿನಗಳ ಉಪವಾಸ ಸತ್ಯಾಗ್ರಹ ಮುಗಿಸಿದರು.. ಆದರೆ ಇಷ್ಟೊಂದು ಸೂಕ್ಷ್ಮ ಗಂಭೀರ ವಿಷಯದ ಬಗ್ಗೆ ಯಾರೂ ಮಾತಾಡುತ್ತಿಲ್ಲವೇಕೆ? ಅಣ್ಣಾ ಹಜಾರೆ ಆಂದೋಲನದಲ್ಲಿ, 13 ದಿನದ ಉಪವಾಸಕ್ಕೆ

ಮಣಿದ ಆ ಸರ್ಕಾರವೆಲ್ಲಿ? ಜನಾಂದೋಲನಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದಷ್ಟು, ಆಡಿಕೊಳ್ಳುವಷ್ಟು ಈ ಗಲೀಜು ರಾಜಕಾರಿಣಿಗಳಿಗೆ ಧೈರ್ಯ ಬಂದದ್ದಾದರೂ ಹೇಗೆ ? ಇವರು ಪ್ರಶ್ನಾತೀತರಾದದ್ದು ಹೇಗೆ??

ನಿರ್ಭಯಾ ಆಂದೋಲನದಲ್ಲಿ ಬೀದಿಗಿಳಿದು ವ್ಯವಸ್ಥೆಯನ್ನು (Actor Kishore Slams Modi)ಪ್ರಶ್ನಿಸಿದ ಆ ಭಾರತೀಯರೆಲ್ಲಿ? ಎಂದು ಪ್ರಶ್ನಿಸಿದ್ದಾರೆ.

ಲಡಾಖ್ (Ladakh) ವಿನಾಶದ ಅಂಚಿನಲ್ಲಿದ್ದರೇನು, ಮಣಿಪುರ ಹೊತ್ತಿ ಉರಿದರೇನು, ರೈತರು ಸತ್ತರೇನು, ಯೋಧರನ್ನು ಸೈನ್ಯದಿಂದ ನಾಲ್ಕೇ ವರ್ಷದಲ್ಲಿ ಹೊರಗಟ್ಟಿದರೇನು, ಮಹಿಳಾ ಕುಸ್ತಿಪಟುಗಳ

ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೇನು, ದಲಿತ ಆದಿವಾಸಿಗಳ ಮಾನಭಂಗವಾದರೇನು, ದೇಶದ ಕಾಡೆಲ್ಲ ಕಲ್ಲಿದ್ದಲು ಕಳ್ಳರ ಪಾಲಾದರೇನು, ನೋಟು ಚಲಾವಣೆ ಬಂದ್ ಮಾಡಿದರೇನು, ಪೆಟ್ರೊಲು

ಗ್ಯಾಸಿನ (Petrol, Gas) ಬೆಲೆ ಗಗನ ಮುಟ್ಟಿದರೇನು ಕೊರೋನಾದಿಂದ ಲಕ್ಷಾಂತರ ಜನ ಸತ್ತರೇನು,

ಚುನಾವಣಾ ಬಾಂಡಿನ (Electoral Bond) ಹೆಸರಲ್ಲಿ ಭ್ರಷ್ಟ ಸರ್ಕಾರ ದೇಶವನ್ನೇ ಮಾರಿಬಿಟ್ಟರೂ ಭವ್ಯ ಭಾರತದ ಪ್ರಜೆಗಳಾದ ನಾವು ಏನೂ ಮಾತಾಡದೇ ಪ್ರತಿರೋಧ ಒಡ್ಡಿದವರನ್ನೆಲ್ಲ ದೇಶದ್ರೋಹಿಗಳೆಂದು

ಬ್ರಾಂಡ್ ಮಾಡಿ ಕೈಕಟ್ಟಿ ಕೂತಿರುವ ಕಾರಣವೇನು?? ನಿಜ ಸಮಸ್ಯೆಗಳು ಕಾಣದಂತೆ ನಮ್ಮನ್ನು ಹಿಂದೂ ಸುಖದಲ್ಲಿ ಮುಳುಗಿಸಿರುವ ಸರ್ಕಾರ ಕಾರಣವೇ? ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾದ ,

ಜನರ ಪರವಾಗಿ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಬೇಕಾದ ತಮ್ಮ ಕರ್ತವ್ಯ ಮರೆತ ಸರ್ಕಾರದ __ ನೆಕ್ಕುವ ವಿಶ್ವಾಸಘಾತುಕ ಮಾಧ್ಯಮಗಳೇ? ಇಲ್ಲಾ ಹೇಡಿ ಧರ್ಮಗುರುಡು ಪ್ರಜೆಗಳಾದ ನಾವೇ?

ಎಂದು ಟೀಕಿಸಿದ್ದಾರೆ.

ಇದನ್ನು ಓದಿ: ಚುನಾವಣಾ ಬಾಂಡ್ ಹಗರಣ ಭಾಗ-3: ಬಯಲಾಗುತ್ತಿದೆ ಕಾರ್ಪೋರೇಟ್ ಕಂಪನಿಗಳ ಕಾವಲು ಕಾಯುತ್ತಿರುವ ಚೌಕೀದಾರರ ಬಣ್ಣ!

Exit mobile version