ರೇವಾ ಪಾರ್ಟಿಯಲ್ಲಿ(Reva Party) ಅಕ್ರಮವಾಗಿ ಡ್ರಗ್ಸ್(Drugs) ತಂದು ಸೇವನೆ ಮಾಡುತ್ತಿದ್ದ ತೆಲುಗು ನಟಿ(Telugu Actress) ನಿಹಾರಿಕಾ ಕೊನಿಡೇಲಾ(Niharika Konidela), ಬಿಗ್‍ಬಾಸ್(Bigboss) ತೆಲುಗು(Telugu)ವಿಜೇತ ರಾಹುಲ್ ಸಿಪ್ಲಿಗುಂಜ್(Rahul Sipligunj) ಮತ್ತು ಹಿರಿಯ ನಟ ನಾಗಬಾಬು(Nagababu) ಸೇರಿದಂತೆ 150ಕ್ಕೂ ಹೆಚ್ಚು ಮಂದಿಯನ್ನು ಭಾನುವಾರ ಬಂಧಿಸಿದ್ದಾರೆ ಹೈದ್ರಾಬಾದ್ ಬಂಜಾರ್ ಹಿಲ್ಸ್ ಪೊಲೀಸರು.

ಹೌದು, ರೇವಾ ಪಾರ್ಟಿಯಲ್ಲಿ ಎಣ್ಣೆಯ ನಶೆಯಲ್ಲಿದ್ದ ತಾರೆಯರ ಬಳಿ ಸಿಕ್ಕಿದ್ದು ಕೊಕೇನ್ ಎಂಬ ಮಾದಕ(Drug) ವಸ್ತು. ಹೈದ್ರಾಬಾದ್‍ನ(Hyderabad) ದುಬಾರಿ ಹೋಟೆಲ್ ನಲ್ಲಿ ಪ್ರಮುಖ ಹೋಟೆಲ್ ಆಗಿರುವ ಬಂಜಾರಾ ಹಿಲ್ಸ್‍ನ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‍ನಲ್ಲಿರುವ ದಿ ಮಿಂಕ್ ಪಬ್ ಸುತ್ತಮುತ್ತ ಪೊಲೀಸರು ಜಾಲ ಬೀಸಿದಾಗ ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ಪೋಲಿಸರು ಶೋಧ ನಡೆಸಿ, ನಟ, ನಟಿ ಸೇರಿದಂತೆ 150 ಮಂದಿಯನ್ನು ಬಂಧಿಸಿದ್ದು, ಇಂಥ ಮಾದಕ ವಸ್ತುವಾದ ಕೊಕೇನ್ ಬಳಕೆ ಹೆಚ್ಚು ವ್ಯಾಪಕವಾಗುತ್ತಿದೆ.
ಬಹಿರಂಗವಾಗಿ ಯಾರ ಭಯವಿಲ್ಲದೆ ಅಕ್ರಮವಾಗಿ ನಡೆಸುತ್ತಿರುವುದು ವಿಷಾಧ! ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಇಂಥ ಅಕ್ರಮ ಚಟುವಟಿಕೆಗಳಿಗೆ ಬಿಗಿಯಾದ ಬ್ರೇಕ್ ಹಾಕಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ನಟ ರಾಹುಲ್ ಮತ್ತು ನಟಿ ನಿಹಾರಿಕಾ ಅದೇ ಸ್ಥಳದಲ್ಲಿದದ್ದು ನಿಜವೇ ಆದ್ರೆ, ಮಾದಕ ದ್ರವ್ಯ ಸೇವನೆ ಮಾಡಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ! ಈ ಬಗ್ಗೆ ತನಿಖೆ ಆರಂಭಗೊಂಡಿವೇ ಎಂದು ಹೇಳಿದರು. ಇನ್ನು ತಮ್ಮ ಮಗಳು ನಿಹಾರಿಕಾ ಬಗ್ಗೆ ಮಾತನಾಡಿದ ನಟ ನಾಗಬಾಬು, ನನ್ನ ಮಗಳಿಗೂ ಡ್ರಗ್ಸ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ!

ರಾತ್ರಿ ಪಂಚತಾರಾ ಹೋಟೆಲ್ ಪಬ್‍ನಲ್ಲಿ ಹಾಜರಿದ್ದದ್ದೇ ಅವಳಿಗೆ ದೊಡ್ಡ ಮುಳುವಾಗಿದೆ. ಆದ್ರೆ ಈ ಬಗ್ಗೆ ಪೊಲೀಸರೇ ಅಕೆಯನ್ನು ಕಿರು ಪರೀಕ್ಷೆಗೆ ಒಳಪಡಿಸಿ, ಆಕೆಗೂ ಮಾದಕ ವಸ್ತುವಿಗೂ ಯಾವುದೇ ಸಂಬಂಧವಿರುವುದು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕೆಯ ಬಗ್ಗೆ ಇಲ್ಲ ಸಲ್ಲದ ಆರೋಪಗಳು ಹರಿದಾಡುತ್ತಿವೆ. ದಾಖಲೆಗಳ ಆಧಾರವಿಲ್ಲದೆ, ಸುಳ್ಳು ವದಂತಿಗಳು ಹರಿದಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ, ದಯವಿಟ್ಟು ಇಂಥ ವದಂತಿಗಳನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತೇನೆ ಎಂದು ನಾಗಬಾಬು ಹೇಳಿದ್ದಾರೆ.