ಉದಾರ ದಾನಿಗಳು: 100 ಭಾರತೀಯರ ಪಟ್ಟಿಯಲ್ಲಿ ಅದಾನಿ, ಕುಮಾರ ಮಂಗಲಂ ಬಿರ್ಲಾ ಅಗ್ರಸ್ಥಾನ

ಅಮೆರಿಕಾ, ಆ. 13: ಸಮಾಜ ಸೇವಾ ಚಟುವಟಿಕೆಗಳಿಗಾಗಿ ಉದಾರವಾಗಿ ದಾನ ಮಾಡಿ, ಜಾಗತಿಕವಾಗಿ ಗುರುತಿಸಿಕೊಂಡಿರುವ 100 ಭಾರತೀಯರ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಾದ ಗೌತಮ್ ಅದಾನಿ, ನೀತಾ ಅಂಬಾನಿ, ಕುಮಾರ ಮಂಗಲಂ ಬಿರ್ಲಾ ಅವರು ಸ್ಥಾನ ಪಡೆದಿದ್ದಾರೆ.

ಅಮೆರಿಕ ಮೂಲದ ‘ಇಂಡಿಯಾಸ್ಪೊರಾ’ ಎಂಬ ಸಂಘಟನೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವಿಧ ಮೂಲಗಳು, ಅಧ್ಯಯನಗಳಿಂದ ಸಂಗ್ರಹಿಸಿರುವ ಮಾಹಿತಿ, ಸಾರ್ವಜನಿಕ ವಲಯದಲ್ಲಿ ಸಿಗುವ ದಾಖಲೆಗಳನ್ನು ಆಧರಿಸಿ ಇದೇ ಮೊದಲ ಬಾರಿಗೆ ಇಂಥ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 9 ಜನ ತೀರ್ಪುಗಾರರಿರುವ ತಂಡ ಈ ದಾನಿಗಳನ್ನು ಆಯ್ಕೆ ಮಾಡಿದೆ ಎಂದು ಮೂಲಗಳು ಹೇಳಿವೆ.

‘ಭಾರತದ ಗೌತಮ್‌ ಅದಾನಿ, ನೀತಾ ಅಂಬಾನಿ, ಕುಮಾರ ಮಂಗಲಂ ಬಿರ್ಲಾ, ಅಮೆರಿಕದ ಮಾಂಟೆ ಅಹುಜಾ, ಅಜಯ್ ಬಂಗಾ, ಮನೋಜ್‌ ಭಾರ್ಗವ, ಕೆನಡಾದ ಸೋನಮ್‌ ಅಜ್ಮೇರಾ, ಬಾಬ್‌ ಧಿಲ್ಲೋನ್‌ ಹಾಗೂ ಆದಿತ್ಯ ಝಾ, ಬ್ರಿಟನ್‌ನ ಮೊಹಮ್ಮದ್‌ ಅಮರ್ಸಿ, ಮನೋಜ್‌ ಬದಲೆ ಹಾಗೂ ಕುಜಿಂದರ್‌ ಬಹಿಯಾ ಅವರು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ’ ಎಂದು ಸಂಘಟನೆಯ ಸಂಸ್ಥಾಪಕ ಎಂ.ಆರ್‌.ರಂಗಸ್ವಾಮಿ ತಿಳಿಸಿದ್ದಾರೆ. ಯುಎಇ, ಆಸ್ಟ್ರೇಲಿಯಾ, ಸಿಂಗಪುರದಲ್ಲಿರುವ ಭಾರತೀಯರು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Exit mobile version