ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ; ಇವರ ಒಟ್ಟು ಆಸ್ತಿ ಮೊತ್ತ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ.

gowtham

ಅದಾನಿ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಅಧ್ಯಕ್ಷ(President) ಗೌತಮ್ ಅದಾನಿ(Gowtham Adhani) ಅವರು ಈಗ ಭಾರತದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾದ ಶ್ರೀಮಂತ(Asia’s Richest) ವ್ಯಕ್ತಿ ಎನಿಸಿದ್ದಾರೆ.

ಈ ಮೂಲಕ ರಿಲಯನ್ಸ್‌ನ(Reliance) ಮುಖೇಶ್‌ ಅಂಬಾನಿ(Mukhesh Ambani)ಅವರನ್ನು ಹಿಂದಿಕ್ಕಿದ್ದಾರೆ. ಏಷ್ಯಾದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗೌತಮ್ ಅದಾನಿ, ಒಂದು ಕಾಲಕ್ಕೆ ಸಣ್ಣ- ಪುಟ್ಟ ಪದಾರ್ಥಗಳ ವ್ಯವಹಾರವನ್ನು ಮಾಡಿಕೊಂಡಿದ್ದು, ಈಗ ಬಂದರಿನಿಂದ, ಗಣಿಗಾರಿಕೆ, ಗ್ರೀನ್​ ಎನರ್ಜಿ ತನಕ ದೊಡ್ಡ ಉದ್ಯಮ ಸಾಮ್ರಾಜ್ಯವನ್ನೇ ನಿರ್ಮಿಸಿರುವ ಗೌತಮ್ ಅದಾನಿ ಏಷ್ಯಾದ ಅತಿ ಶ್ರೀಮಂತ ಎಂಬ ಕಿರೀಟವನ್ನು ಧರಿಸಿದ್ದಾರೆ.

59 ವರ್ಷದ ಗೌತಮ್ ಅದಾನಿ ಆಸ್ತಿ ಮೌಲ್ಯ ಸೋಮವಾರದಂದು 8850 ಕೋಟಿ ಅಮೆರಿಕನ್ ಡಾಲರ್ ಮುಟ್ಟಿದೆ ಎಂದು ಬ್ಲೂಮ್​ಬರ್ಗ್ ಬಿಲಿಯನೇರ್ ಸೂಚ್ಯಂಕವು ತೋರಿಸುತ್ತಿದೆ. ಈ ಮೂಲಕ ಮುಖೇಶ್ ಅಂಬಾನಿ (8790 ಕೋಟಿ ಅಮೆರಿಕನ್ ಡಾಲರ್) ಅವರನ್ನು ಗೌತಮ್ ಅದಾನಿ ಮೀರಿಸಿದ್ದಾರೆ. 1200 ಕೋಟಿ ಅಮೆರಿಕನ್ ಡಾಲರ್​ನಷ್ಟು ಗೌತಮ್ ಅದಾನಿ ಆಸ್ತಿ ಏರಿಕೆ ಆಗಿದೆ. ಇವರಿಬ್ಬರ ಆಸ್ತಿಯನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಗೌತಮ್ ಅದಾನಿ ಆಸ್ತಿ 6,61,453.87 ಕೋಟಿ (6.61 ಲಕ್ಷ ಕೋಟಿ).

ಇನ್ನು ಮುಕೇಶ್ ಅಂಬಾನಿ ಆಸ್ತಿ 6,56,969.43 ಕೋಟಿ (6.57 ಲಕ್ಷ ಕೋಟಿ) ಆಗುತ್ತದೆ. ಈ ವರ್ಷದಲ್ಲಿ ಅತಿ ಹೆಚ್ಚಿನ ಆಸ್ತಿ ಗಳಿಕೆ ಕಂಡ ವ್ಯಕ್ತಿ ಕೂಡ ಗೌತಮ್ ಅದಾನಿ ಆಗಿದ್ದಾರೆ. ಈ ಗೌರವಕ್ಕೆ ಅದಾನಿ ಪಾತ್ರರಾಗಲೂ ಸ್ಪಷ್ಟ ಕಾರಣವೂ ಇದೆ. ಕಳೆದ ಸಾಲಿನಲ್ಲಿ ಅದಾನಿ ಕಂಪನಿ ದಿನಕ್ಕೆ 1002 ಕೋಟಿ ರೂ. ಆದಾಯ ಗಳಿಸುವ ಮೂಲಕ ತಮ್ಮ ಒಟ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಐಐಎಫ್‌ಎಲ್‌ ವೆಲ್ತ್‌ ಹುರಾನ್‌ ಇಂಡಿಯಾ ರಿಚ್‌ ಲಿಸ್ಟ್‌ 2021 ಪ್ರಕಾರ ಗೌತಮ್‌ ಅದಾನಿ ಈಗ ಏಷ್ಯಾದ ಅತಿ ದೊಡ್ಡ ಶ್ರೀಮಂತ.

ಗೌತಮ್ ಅದಾನಿ ಮತ್ತು ದುಬೈ ಮೂಲದ ಸಹೋದರ ವಿನೋದ್‌ ಶಾಂತಿ ಲಾಲ್‌ ಅದಾನಿ ಐಐಎಫ್‌ಎಲ್‌ ವೆಲ್ತ್‌ ಹುರಾನ್‌ ಇಂಡಿಯಾ ರಿಚ್‌ ಲಿಸ್ಟ್‌ನಲ್ಲಿ ಟಾಪ್‌ ಟೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ವಿನೋದ್‌ ಶಾಂತಿಲಾಲ್ ಅದಾನಿ ಮತ್ತು ಕುಟುಂಬ 12 ಸ್ಥಾನ ಏರಿಕೆ ಕಂಡು 8ನೇ ಸ್ಥಾನ ಪಡೆದಿದ್ದಾರೆ. ವಿನೋದ್‌ ಅದಾನಿ ಕುಟುಂಬದ ಆಸ್ತಿ ಮೌಲ್ಯ ಶೇಕಡ 21.2ರಷ್ಟು ಏರಿಕೆ ಕಂಡು, ಒಟ್ಟು 1,31,600 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

Exit mobile version