ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್​-1, ಭೂಮಿಯ ದತ್ತಾಂಶ ಸಂಗ್ರಹ ಕಾರ್ಯ ಆರಂಭ

ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾದ ಆದಿತ್ಯ ಎಲ್​1 (Aditya l1) ಮೇಲೆ ಎಲ್ಲರ ಭರವಸೆ ಇದ್ದು, ಇದೀಗ ಆದಿತ್ಯ ಎಲ್​1 ಭೂಮಿಯ ಐದು ಕಕ್ಷೆಗಳನ್ನು ಬದಲಿಸಿ ಇದೀಗ ಭೂಮಿಯಿಂದ ಹೊರಗೆ ಬಂದಿದೆ. ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಶುರು ಮಾಡಿದೆ.

ಭೂಮಿಯಿಂದ 50,000 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಸೂಪರ್ ಥರ್ಮಲ್, ಅಯಾನುಗಳು, ಎಲೆಕ್ಟ್ರಾನ್‌ಗಳ ಬಗ್ಗೆ ಅಧ್ಯಯನ ಮಾಡಲಿದೆ. ಭೂಮಿಯ ಕಕ್ಷೆಯಿಂದ ಹೊರಬಂದು ಆದಿತ್ಯ L-1 ಅಧ್ಯಯನ ಆರಂಭಿಸಿರುವ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.

ವಿಜ್ಞಾನಿಗಳಿಗೆ ಈ ದತ್ತಾಂಶವು ಭೂಮಿಯ ಸುತ್ತಲಿನ ಕಣಗಳ ನಡವಳಿಕೆಗಳನ್ನು ಅಳೆಯಲು ಸಹಾಯ ಮಾಡಲಿದ್ದು, ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಆದಿತ್ಯ-ಎಲ್1 ಮಿಷನ್‌ನ ಉದ್ದೇಶವು ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡಬಹುದಾಗಿದೆ.

ಸೆಪ್ಟೆಂಬರ್ 2 ರಂದು ಆದಿತ್ಯ L1 ಅನ್ನು ಬೆಳಿಗ್ಗೆ 11.50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C57 ನ XL ಆವೃತ್ತಿಯ ರಾಕೆಟ್ ಬಳಸಿ ಉಡಾವಣೆ ಮಾಡಲಾಯಿತು.

ಇದು ಜನವರಿ 2024ರಲ್ಲಿ ಅಂದರೆ ಮುಂದಿನ ವರ್ಷ 110 ದಿನಗಳ ನಂತರ ಲಾಗ್ರಾಂಜಿಯನ್ ಪಾಯಿಂಟ್ 1 ಅನ್ನು ತಲುಪುಲಿದ್ದು, ಈ ನೌಕೆಯು 15 ಲಕ್ಷ ಕಿಲೋಮೀಟರ್ ಪ್ರಯಾಣ ಪ್ರಾರಂಭಿಸಲಿದೆ.

ಉಡಾವಣೆಯಾದ 63 ನಿಮಿಷಗಳು ಮತ್ತು 19 ಸೆಕೆಂಡುಗಳ ನಂತರ ಬಾಹ್ಯಾಕಾಶ ನೌಕೆಯನ್ನು ಭೂಮಿಯ 235 ಕಿಮೀ x 19500 ಕಿಮೀ ಕಕ್ಷೆಯಲ್ಲಿ ಇರಿಸಲಾಯಿತು.

ಇಸ್ರೋ ಆದಿತ್ಯ ಎಲ್1 ವೈಜ್ಞಾನಿಕ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ ಎಂದು ತಿಳಿಸಿತ್ತು. ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾಗಿರುವ ಸುಪ್ರಾ ಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ ಅಥವಾ STEPS ಉಪಕರಣವನ್ನು ಸೆಪ್ಟೆಂಬರ್ (September) 10 ರಂದು ಭೂಮಿಯಿಂದ 50,000 ಕಿಲೋಮೀಟರ್ ದೂರದಲ್ಲಿ ಸಕ್ರಿಯಗೊಳಿಸಲಾಯಿತು.

ದತ್ತಾಂಶದ ಸಹಾಯದಿಂದ, ಸೂರ್ಯನ ಮೇಲೆ ಉಂಟಾಗುವ ಬಿರುಗಾಳಿಗಳು ಮತ್ತು ಬಾಹ್ಯಾಕಾಶ ಹವಾಮಾನದ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಲ್ಯಾಗ್ರೇಂಜ್ ಪಾಯಿಂಟ್ ಅನ್ನು ಇಟಾಲಿಯನ್-ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರೇಂಜ್ ಹೆಸರಿಡಲಾಗಿದ್ದು, ಇದನ್ನು ಆಡುಮಾತಿನಲ್ಲಿ L1 ಎಂದು ಕರೆಯಲಾಗುತ್ತದೆ.

ಭೂಮಿ ಮತ್ತು ಸೂರ್ಯನ ನಡುವೆ ಅಂತಹ ಐದು ಬಿಂದುಗಳಿವೆ, ಅಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯ ಬಲವು ಸಮತೋಲನವಾಗಿರುತ್ತದೆ. ಮೊದಲ ಲ್ಯಾಗ್ರೇಂಜ್ ಪಾಯಿಂಟ್ ಭೂಮಿ ಮತ್ತು ಸೂರ್ಯನ ನಡುವೆ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಈ ಹಂತದಲ್ಲಿ ಗ್ರಹಣದ ಪರಿಣಾಮವಿಲ್ಲ.

ಭವ್ಯಶ್ರೀ ಆರ್.ಜೆ

Exit mobile version