• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಆದಿತ್ಯ L1 ಪಯಣ: ಸೂರ್ಯನೆಡೆಗೆ ಪಯಣ ಬೆಳೆಸಲು ಆದಿತ್ಯ L1 ಉಡಾವಣೆಗೆ ಇಸ್ರೋ ಕೊನೇ ಕ್ಷಣದ ಸಿದ್ಧತೆಯ ಮಾಹಿತಿ

Bhavya by Bhavya
in ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಆದಿತ್ಯ L1 ಪಯಣ: ಸೂರ್ಯನೆಡೆಗೆ ಪಯಣ ಬೆಳೆಸಲು ಆದಿತ್ಯ L1 ಉಡಾವಣೆಗೆ ಇಸ್ರೋ ಕೊನೇ ಕ್ಷಣದ ಸಿದ್ಧತೆಯ ಮಾಹಿತಿ
0
SHARES
547
VIEWS
Share on FacebookShare on Twitter

Sriharikota: ಭಾರತದ ಮೊದಲ ಸೂರ್ಯ ಮಿಷನ್ ಆದಿತ್ಯ L1 (Aditya L1) ಉಡಾವಣೆಗೆ ವಿಜ್ಞಾನಿಗಳು ಸಂಪೂರ್ಣ ಸಿದ್ಧತೆ ನಡೆಸಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ

ಇಸ್ರೋ (ISRO) ಇಂದು ಬೆಳಗ್ಗೆ 11.50ಕ್ಕೆ ಉಡಾವಣೆ ಮಾಡಲಿದೆ. ಭೂಮಂಡಲದಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ (930,000 ಮೈಲುಗಳು) ಲ್ಯಾಗ್ರೇಂಜ್ ಪಾಯಿಂಟ್-1

(Langrege point) ರಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಅಲ್ಲಿಂದ ಭಾರತವು ನಿರಂತರವಾಗಿ ಸೂರ್ಯನ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ. ಮತ್ತು ಶ್ರೀಹರಿಕೋಟಾದಲ್ಲಿ

ಇಂದಿನ ಹವಾಮಾನ ಸ್ಪಷ್ಟವಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

adityal1 mission launch

ಆಂಧ್ರಪ್ರದೇಶದ (Andrapradesh) ಶ್ರೀಹರಿಕೋಟಾದಿಂದ ಉಡಾವಣೆ ನಡೆಯಲಿದ್ದು, ಇದನ್ನು ಐದು ಲ್ಯಾಗ್ರೇಂಜ್ ಪಾಯಿಂಟ್‌ಗಳಲ್ಲಿ ಒಂದು ‘ಪಾಯಿಂಟ್-1’ (Point-1) ರಲ್ಲಿ ಸ್ಥಾಪಿಸಲಾಗುವುದು.

ಇದಕ್ಕಾಗಿ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಿಎಸ್‌ಎಲ್‌ವಿ ರಾಕೆಟ್‌ನ (PSLV Rocket) ಸಹಾಯದಿಂದ ಆದಿತ್ಯ ಎಲ್1 ತನ್ನ ಗಮ್ಯಸ್ಥಾನಕ್ಕೆ ಪಯಣಿಸಲಿದೆ. ಮಿಷನ್

ಉಡಾವಣೆ ಮಾಡಲು ಪಿಎಸ್‌ಎಲ್‌ವಿ ರಾಕೆಟ್‌ನ ಎಕ್ಸ್‌ಎಲ್ (XL) ಆವೃತ್ತಿಯನ್ನು ಬಳಸಲಾಗುವುದು ಎಂದು ಇಸ್ರೋ ತಿಳಿಸಿದೆ.

ಮಧುಮೇಹಿಗಳಿಗೆ ಸಕ್ಕರೆಗಿಂತ ಅಪಾಯಕಾರಿ ಈ ಹಣ್ಣುಗಳು..! ಇರಲಿ ಎಚ್ಚರ..!

ಭಾರತವು ಕಳೆದ ಕೆಲವು ದಿನಗಳ ಹಿಂದೆ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿ ಹೊರಹೊಮ್ಮಿತ್ತು. ಈ ಗೆಲುವಿನ ನಂತರ ಇಸ್ರೋ (ISRO) ಸೂರ್ಯ ಮಿಷನ್ ಉಡಾವಣೆ

ದಿನಾಂಕ ಘೋಷಿಸಿದ್ದು, ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ 930,000 ಮೈಲುಗಳು ಲ್ಯಾಗ್ರೇಂಜ್ ಪಾಯಿಂಟ್-1 ರಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ.

ಇಲ್ಲಿಂದ ಭಾರತ ನಿರಂತರವಾಗಿ ಸೂರ್ಯನ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ.

ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ (S Somanath) ಅವರು ಬೆಂಗಳೂರು ಕೇಂದ್ರ ಕಚೇರಿಗೆ ಆಗಮಿಸಿದ್ದು, ಮಿಷನ್ ಉಡಾವಣೆಗೂ ಮುನ್ನ ಕೇಂದ್ರ ಸಚಿವ ಜಿತೇಂದ್ರ ಸಿಂಗ್

(Jitendra Singh) ಇಸ್ರೋ ಕಚೇರಿಗೆ ಆಗಮಿಸಲಿದ್ದಾರೆ.

ಆದಿತ್ಯ ಎಲ್​1 (Aditya L1) ಮುಖ್ಯಾಂಶಗಳು
1. ಆದಿತ್ಯ ಎಲ್1 ಪಯಣ: ಸೂರ್ಯನೆಡೆಗೆ ಪಯಣ ಬೆಳೆಸಲು ಆದಿತ್ಯ L1 ಉಡಾವಣೆಗೆ ಇಸ್ರೋ (ISRO) ಕೊನೇ ಕ್ಷಣದ ಸಿದ್ಧತೆಯ ಮಾಹಿತಿ ಬಿಡುಗಡೆಯ ಸಂದರ್ಭವನ್ನು ಖಗೋಳಶಾಸ್ತ್ರಜ್ಞ

ಮತ್ತು ಪ್ರೊಫೆಸರ್ ಆರ್‌ಸಿ ಕಪೂರ್ (R C Kapoor) ಅವರು ಬಹಳ ಮುಖ್ಯವೆಂದು ಬಣ್ಣಿಸಿದ್ದು, ಆದಿತ್ಯ ಎಲ್ 1 ನಲ್ಲಿರುವ ಪ್ರಮುಖ ಸಾಧನವು ಸೂರ್ಯನ ಆವರಣದ ಬಗ್ಗೆ ಅಧ್ಯಯನ ಮಾಡುತ್ತದೆ

ಎಂದು ಅವರು ಹೇಳಿದ್ದಾರೆ. ಅಲ್ಲದೆ ಸಾಮಾನ್ಯವಾಗಿ ಇದನ್ನು ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ಅಧ್ಯಯನ ಮಾಡಬಹುದಾಗಿದೆ.

adityal1 mission launch

2. ಪದ್ಮಶ್ರೀ ವಿಜೇತ ಮತ್ತು ಮಾಜಿ ಇಸ್ರೋ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ (Mailaswami Annadorai) ಅವರು ತಾಂತ್ರಿಕವಾಗಿ L1 ಪಾಯಿಂಟ್‌ನಲ್ಲಿ ಉಪಗ್ರಹವನ್ನು ಇರಿಸುವುದು

ಮತ್ತು ಐದು ವರ್ಷಗಳ ಕಾಲ ಅದರ ಸುತ್ತ ಕಾರ್ಯ ನಿರ್ವಹಿಸುವುದು ಬಹು ಕಷ್ಟದ ಕೆಲಸವಾಗಿದೆ ಎಂದು ಭಾರತದ ಸೂರ್ಯ ಮಿಷನ್ ಆದಿತ್ಯ ಎಲ್​​1 ಉಡಾವಣೆ ಕುರಿತು ಪ್ರತಿಕ್ರಿಯಿಸಿದ್ದಾರೆ.

3. ಶ್ರೀಹರಿಕೋಟಾಕ್ಕೆ (Sriharikota) ಹೆಚ್ಚಿನ ಸಂಖ್ಯೆಯಲ್ಲಿ ಜನರು ಆದಿತ್ಯ L1 ಉಡಾವಣೆಯನ್ನು ನೋಡಲು ಬರುತ್ತಿದ್ದಾರೆ.

4. ದೇಶಾದ್ಯಂತ ಜನರು ಆದಿತ್ಯ L1 ಯಶಸ್ವಿ ಉಡಾವಣೆಗಾಗಿ ಪ್ರಾರ್ಥಿಸುತ್ತಿದ್ದು, ಚಂಡೀಗಢದಲ್ಲಿ ಆದಿತ್ಯ ಮಿಷನ್‌ಗಾಗಿ ‘ಅಖಂಡ ವಿಜಯೀ ಭವ’ ಯಜ್ಞವನ್ನು ನಡೆಸಲಾಗುತ್ತಿದೆ. ಭೋಪಾಲ್‌ನಲ್ಲಿ (Bhopal)

ಮಿಷನ್‌ನ ಯಶಸ್ಸಿಗಾಗಿ, ಮಾ ವೈಷ್ಣೋಧಾಮ ಆದರ್ಶ ನವದುರ್ಗಾ ದೇವಾಲಯದಲ್ಲಿ ಭಗವಾನ್ ಪಶುಪತಿನಾಥನಿಗೆ ರುದ್ರಾಭಿಷೇಕವನ್ನು ನಡೆಸಲಾಗುತ್ತಿದೆ. ಇನ್ನು ಕರ್ನಾಟಕದ (Karnataka)

ಹಲವೆಡೆಯೂ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.

ಸೂರ್ಯನನ್ನು ತಲುಪಲು ಎಷ್ಟು ದಿನ ಬೇಕು?
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಆದಿತ್ಯ L1 ತನ್ನ ಗಮ್ಯಸ್ಥಾನವನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದು, ಆದಿತ್ಯ-L1 ಪೇಲೋಡ್ ಕರೋನಲ್ ಹೀಟಿಂಗ್

ಕರೋನಲ್ ಮಾಸ್ ಎಜೆಕ್ಷನ್ (CME), ಪ್ರೀ-ಫ್ಲೇರ್ ಮತ್ತು ಫ್ಲೇರ್ ಚಟುವಟಿಕೆಗಳು ಮತ್ತು ಅವುಗಳ ಗುಣಲಕ್ಷಣಗಳು, ಡೈನಾಮಿಕ್ಸ್ ಮತ್ತು ಬಾಹ್ಯಾಕಾಶ ಹವಾಮಾನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು

ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಇಸ್ರೋಗೆ ಉಪಗ್ರಹವು ಪ್ರತಿದಿನ 1400 ಕ್ಕೂ ಹೆಚ್ಚು ಚಿತ್ರಗಳನ್ನು ಕಳುಹಿಸಲಿದ್ದು, ಇದರಿಂದ ಸೂರ್ಯನ ಚಟುವಟಿಕೆಗಳ ಬಗ್ಗೆ ನೈಜ ಸಮಯದಲ್ಲಿ ಮಾಹಿತಿ ಲಭ್ಯವಾಗುತ್ತದೆ.

ಭವ್ಯಶ್ರೀ ಆರ್.ಜೆ

Tags: adityal1adityal1launchIndiaIsrosriharikotassomanath

Related News

ಹೃದಯಾಘಾತಕ್ಕೆ ಬಾಲಕ ಬಲಿ: 9ನೇ ತರಗತಿ ವಿದ್ಯಾರ್ಥಿ ತರಗತಿಯಲ್ಲೇ ಕುಸಿದು ಬಿದ್ದು ಸಾವು
ದೇಶ-ವಿದೇಶ

ಹೃದಯಾಘಾತಕ್ಕೆ ಬಾಲಕ ಬಲಿ: 9ನೇ ತರಗತಿ ವಿದ್ಯಾರ್ಥಿ ತರಗತಿಯಲ್ಲೇ ಕುಸಿದು ಬಿದ್ದು ಸಾವು

September 21, 2023
ಯಾತ್ರಾರ್ಥಿಗಳಿಗೆ ಬಂಪರ್ ಕೊಡುಗೆ: ದೇವರ ದರ್ಶನದ ಬುಕಿಂಗ್‌ ಜೊತೆ ಪಾರ್ಕಿಂಗ್ ಜಾಗವು ಬುಕ್‌
ದೇಶ-ವಿದೇಶ

ಯಾತ್ರಾರ್ಥಿಗಳಿಗೆ ಬಂಪರ್ ಕೊಡುಗೆ: ದೇವರ ದರ್ಶನದ ಬುಕಿಂಗ್‌ ಜೊತೆ ಪಾರ್ಕಿಂಗ್ ಜಾಗವು ಬುಕ್‌

September 21, 2023
ಅಯ್ಯೋ ಪಾಪ : ಬನ್ನೇರುಘಟ್ಟ ಉದ್ಯಾನವನದಲ್ಲಿ ಒಂದೇ ವಾರದಲ್ಲಿ 15 ಜಿಂಕೆಗಳ ಸಾವು !
ಪ್ರಮುಖ ಸುದ್ದಿ

ಅಯ್ಯೋ ಪಾಪ : ಬನ್ನೇರುಘಟ್ಟ ಉದ್ಯಾನವನದಲ್ಲಿ ಒಂದೇ ವಾರದಲ್ಲಿ 15 ಜಿಂಕೆಗಳ ಸಾವು !

September 21, 2023
ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!
ದೇಶ-ವಿದೇಶ

ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!

September 21, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.