download app

FOLLOW US ON >

Wednesday, June 29, 2022
Breaking News
ಗವಿಮಠಕ್ಕೆ ಹರಿದು ಬರುತ್ತಿದೆ ದೇಣಿಗೆ, ಸರ್ಕಾರದಿಂದಲೂ 10 ಕೋಟಿ ಘೋಷಣೆGST ಹೊಸ ದರಗಳ ವಿವರಣೆ ; ವಸ್ತುಗಳ ಸಂಪೂರ್ಣ ಪಟ್ಟಿ ಇಲ್ಲಿದೆಬಿಜೆಪಿ ಅಂದ್ರೆ ಬಿಸ್ನೆಸ್ ಕ್ಲಾಸಿನ ಕಾಮಧೇನು : ಹೆಚ್.ಡಿಕೆಚಾಮುಂಡೇಶ್ವರಿ ಅಮ್ಮನವರ ಆಷಾಢ ಶುಕ್ರವಾರದ ದರ್ಶನಕ್ಕೆ ಉಚಿತ ಸರ್ಕಾರಿ ಬಸ್ ಸೇವೆಮಂಡ್ಯ ಜನರಿಗಾಗಿ ಮಾತ್ರ ನಾನು ರಾಜಕೀಯಕ್ಕೆ ಬಂದಿದ್ದೇನೆ ; ಸುಮಲತಾಕನ್ಹಯ್ಯಾ ಹತ್ಯೆ ; ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ : ಸಿದ್ದರಾಮಯ್ಯನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ನೀಡಿದ ವ್ಯಕ್ತಿಯ ಶಿರಚ್ಛೇದ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳು40% ಕಮಿಷನ್ ಆರೋಪ : ಗುತ್ತಿಗೆದಾರರ ಸಂಘದಿಂದ ವರದಿ ಕೇಳಿದ ಗೃಹ ಸಚಿವಾಲಯಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ವಿದ್ಯುತ್ ದಾರಿದೀಪ ಅಳವಡಿಸಲ್ಪಟ್ಟ ನಗರ ‘ನಮ್ಮ ಬೆಂಗಳೂರು’
English English Kannada Kannada

ಎಚ್ಚರ! ಕಾಳಲ್ಲೂ ಕಲಬೆರಕೆ ಮಾಡ್ತಾರೆ, ಸಾಸಿವೆ ಜೀರಿಗೇನೂ ಬಿಟ್ಟಿಲ್ಲ ಕಲಬೆರಕೆ ಖದೀಮರು. ಈ ಕಲಬೆರಕೆ ಕಳ್ಳರ ಬಣ್ಣ ಬಯಲು ಮಾಡಿದೆ ವಿಜಯಟೈಮ್ಸ್‌.

Seed adulteration mafia secret out! Vijaya Times will reveal the truth behind the food adulteration. So please watch dirty food secret episode and save your life

ಸಾಸಿವೆ ಜೀರಿಗೆ, ಕಾಳುಮೆಣಸನ್ನೂ ಬಿಟ್ಟಿಲ್ಲ ಕಲಬೆರಕೆ ಖದೀಮರು. ಲಾಭಕ್ಕಾಗಿ ಜನರಿಗೆ ವಿಷ ಹಾಕೋ ವಿಷ ಆಹಾರ ಮಾಫಿಯಾ ಮಂದಿ ನಾವು ನಿತ್ಯ ಬಳಸೋ ಕಾಳುಗಳು, ಧಾನ್ಯಗಳಲ್ಲೂ ಕಲಬೆರಕೆ ಮಾಡುತ್ತಿದ್ದಾರೆ. ಜನರಿಗೆ ವಿಷವುಣಿಸುವ ಇಂಥಾ ಕಲಬೆರಕೆ ದಂಧೆಕೋಮಾಡೋ ಕಳ್ಳರ ಬಣ್ಣ ಬಯಲು ಮಾಡಿದೆ ವಿಜಯಟೈಮ್ಸ್‌. ಆಹಾರ ಪದಾರ್ಥಗಳಲ್ಲಿ ಅಸಲಿ ಯಾವುದು ನಕಲಿಯಾವುದು ಅಂತ ಪತ್ತೆ ಹಚ್ಚಲು ವಿಜಯಟೈಮ್ಸ್‌ ಹೇಳಿಕೊಡುತ್ತೆ ಸರಳ ಸೂತ್ರ.
ಜೋಕೆ !ಸಾಸಿವೆಗೆ ಸೇರಿಸಿರ್ತಾರೆ ದತ್ತೂರಿ ಬೀಜ : ಸಾಸಿವೆ ಬೀಜ ಬಳಸದ ಮನೆಯಿಲ್ಲ. ಪ್ರತಿ ನಿತ್ಯ ಪ್ರತಿ ಮನೆಯಲ್ಲಿ ಸಾಸಿವೆ ಬಳಕೆಯಾಗುತ್ತೆ. ಒಗ್ಗರಣೆಯಿಂದ ಹಿಡಿದು ಉಪ್ಪಿನಕಾಯಿವರೆಗೆ ತರಹೇವಾರಿಯಾಗಿ ಅಡುಗೆ ಮನೆಯಲ್ಲಿ ಸಾಸಿವೆ ಬಳಕೆಯಾಗುತ್ತೆ. ಆದ್ರೆ ಸಾಸಿವೆ ಕಾಳಲ್ಲೂ ಕಲಬೆರಕೆಯಾಗುತ್ತಿದೆ. ಹೊಲ ಗದ್ದೆಗಳಲ್ಲಿ ಬೆಳೆಯುವ ದತ್ತೂರಿ ಬೀಜವನ್ನು ಸಾಸಿವೆ ಕಾಳಿನ ಜೊತೆ ಕಲಬೆರಕೆ ಮಾಡ್ತಾರೆ. ಈ ದತ್ತೂರಿ ಬೀಜದ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ದತ್ತೂರಿ ಬೀಜ ಕಲಬೆರಕೆಯಾದ ಸಾಸಿವೆ ಸೇವಿಸಿದರೆ ಅನಾರೋಗ್ಯ ಕಾಡಲಾರಂಭಿಸುತ್ತದೆ.
ನಕಲಿ ಅಸಲಿ ಪರೀಕ್ಷೆ ಹೇಗೆ?: ಸಾಮಾನ್ಯವಾಗಿ ಸಾಸಿವೆ ಮೇಲ್ಪದರ ನೈಸಾಗಿರುತ್ತೆ. ಅದೇ ದತ್ತೂರಿ ಬೀಜದ ಮೇಲ್ಪದರ ಒರಟಾಗಿರುತ್ತೆ. ನಿಮ್ಮ ಮನೆಯಲ್ಲಿ ಭೂತ ಕನ್ನಡಿ ಇದ್ರೆ ಅದರ ಮೂಲಕ ನೋಡಿದ್ರೆ ಅಸಲಿ ಯಾವುದು ನಕಲಿ ಯಾವುದು ಅಂತ ಪತ್ತೆ ಹಚ್ಚ ಬಹುದು.

ಜೀರಿಗೆಯಲ್ಲೂ ಕಲಬೆರಕೆ ಮಾಡ್ತಾರೆ ಖದೀಮರು : ಜೀರಿಗೆ ನಮ್ಮ ಆಹಾರ ಪದಾರ್ಥಗಳಲ್ಲಿ ಪ್ರಮುಖವಾಗಿ ಬಳಸುವ ಸಾಂಬಾರು ಪದಾರ್ಥ. ಇದು ದೇಹಕ್ಕೆ ಆರೋಗ್ಯದಾಯಕವೂ ಹಾಗೂ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ದೇಹದ ಉಷ್ಣವನ್ನು ಕಡಿಮೆ ಮಾಡಲು ಇದರ ಬಳಕೆ ಸಾಮಾನ್ಯ. ಬಾಯಿಹುಣ್ಣು, ಹೊಟ್ಟೆನೋವು, ಬಾಯಿವಾಸನೆ ನಿವಾರಣೆ ಹೀಗೆ ಹತ್ತು ಹಲವು ರೋಗಗಳ ನಿವಾರಣೆ ನಾವು ಜೀರಿಗೆಯನ್ನು ಸರಳ ಔಷಧಿಯಾಗಿ ಬಳಸುತ್ತೇವೆ. ಆದ್ರೆ ಇಷ್ಟೊಂದು ಒಳ್ಳೆ ಅಂಶಗಳನ್ನು ಹೊಂದಿರುವ ಜೀರಿಗೆ ಕಾಳಲ್ಲೂ ಕಲಬೆರಕೆ ಮಾಡ್ತಾರೆ. ಹುಲ್ಲಿನ ಬೀಜ ಅಥವಾ ಹುಲ್ಲಿನ ಕಾಳನ್ನು ಜೀರಿಗೆಗೆ ಮಿಕ್ಸ್‌ ಮಾಡಿ ಜನರಿಗೆ ಮೋಸ ಮಾಡ್ತಾರೆ. ಅಷ್ಟು ಮಾತ್ರವಲ್ಲ ಜನರ ಜೀವದ ಜೊತೆ ಚಲ್ಲಾಟ ಆಡ್ತಾರೆ. ಹುಲ್ಲಿನ ಬೀಜ ನೋಡೋಕೆ ಜೀರಿಗೆ ಕಾಳಿನಂತೆ ಕಾಣುತ್ತೆ. ಯಾವುದೇ ಬೆಲೆ ಇಲ್ಲದ ಈ ಹುಲ್ಲಿನ ಬೀಜ ಜೀರಿಗೆ ಬೀಜಕ್ಕಿಂತ ಸ್ವಲ್ಪ ಬಿಳಿಯಾಗಿದೆ. ಈ ಬಿಳಿಯನ್ನು ಮರೆಮಾಚಿಸಲು ಮಸಿ ಸೇರಿಸುತ್ತಾರೆ. ಆಗ ಅದು ಪಕ್ಕಾ ಜೀರಿಗೆ ಬೀಜದಂತೆ ಕಾಣುತ್ತೆ. ಹುಲ್ಲಿನ ಬೀಜ ಕಲಬೆರಕೆಯಾದ ಜೀರಿಗೆ ತಿಂದ್ರೆ ಅನಾರೋಗ್ಯ ಕಾಡುತ್ತೆ. ಔಷಧವಾಗಿ ಸೇವಿಸಿದ್ರೆ ಯಾವ ಪ್ರಯೋಜನವೂ ಆಗೋದಿಲ್ಲ.
ಅಸಲಿ ನಕಲಿ ಪತ್ತೆ ಹೇಗೆ?: ಒಂದು ವೇಳೆ ಜೀರಿಗೆಗೆ ಕಲಬೆರಕೆಯಾಗಿದೆ ಅನ್ನೋ ಅನುಮಾನ ಕಾಡಿದ್ರೆ, ಆಗ ನೀವು ಒಂಚೂರು ಜೀರಿಗೆಯನ್ನು ಅಂಗೈಗೆ ಹಾಕಿ ಚೆನ್ನಾಗಿ ತಿಕ್ಕಿ. ಆಗ ನಿಮ್ಮ ಅಂಗೈ ಕಪ್ಪಾದ್ರೆ ಜೀರಿಗೆ ಕಲಬೆರಕೆಯಾಗಿದೆ ಅಂತ ಅರ್ಥ.
ಕಾಳು ಮೆಣಸಿನ ಕಲಬೆರಕೆ ಹೇಗಿರುತ್ತೆ?: ಕಲಬೆರಕೆ ಮಾಫಿಯಾ ಮಂದಿ ಕಾಳುಮೆಣಸನ್ನೂ ಬಿಟ್ಟಿಲ್ಲ. ಕಾಳುಮೆಣಸು ಅತೀ ಹೆಚ್ಚು ಬಳಕೆಯಲ್ಲಿ ಇರುವ ಸಾಂಬಾರು ಪದಾರ್ಥ. ಅಷ್ಟು ಮಾತ್ರವಲ್ಲ ಔಷಧೀಯ ಗುಣವನ್ನು ಹೊಂದಿರುವ ಪದಾರ್ಥ. ಕಾಳುಮೆಣಸನ್ನು ಆಹಾರ ಪದಾರ್ಥವಾಗಿಯೂ ಬಳಕೆ ಮಾಡ್ತೀವಿ. ಔಷಧವಾಗಿಯೂ ಬಳಕೆ ಮಾಡ್ತೀವಿ. ಅಲ್ಲದೆ ಅಸಲಿ ಕಾಳುಮೆಣಸು ಬೆಲೆಬಾಳುವ ಸಾಂಬಾರು ಪದಾರ್ಥವಾಗಿದೆ. ಇದಕ್ಕೆ ಕಲಬೆರಕೆ ಮಾಡಿ ಹೆಚ್ಚು ಲಾಭಗಳಿಸೋ ಸಲುವಾಗಿ ಕಲಬೆರಕೆ ಖದೀಮರು ಪಪ್ಪಾಯ ಬೀಜವನ್ನು ಸೇರಿಸ್ತಾರೆ. ಹೊರನೋಟಕ್ಕೆ ಪಕ್ಕಾ ಕಾಳುಮೆಣಸು ಥರಾ ಕಾಣೋ ಪಪ್ಪಾಯ ಬೀಜವನ್ನು ತಿಂದ್ರೆ ದೇಹಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಕಾಳುಮೆಣಸಿಗೆ ಇನ್ನೊಂದು ಕಲಬೆರಕೆಯಾಗುತ್ತೆ ಅದುವೇ ಪ್ಯಾರಫಿನ್ ಆಯಿಲನ್ನು ಸೇರಿಸುವುದು. ಕಾಳುಮೆಣಸು ಹಳೆಯದಾಗಿದ್ರೆ ಅಥವಾ ಫಂಗಸ್‌ ಬಂದಿದ್ರೆ ಅದು ಫಳಫಳ ಅಂತ ಹೊಳೆಯಲು ಪ್ಯಾರಫಿನ್ ಎಣ್ಣೆಯನ್ನು ಮಿಕ್ಸ್‌ ಮಾಡ್ತಾರೆ. ವೈಟ್‌ ಆಯಿಲ್‌ ಅಥವಾ ಈ ಪ್ಯಾರಫಿನ್ ಆಯಿಲ್ ಕ್ಯಾನ್ಸರ್‌ ಕಾರಕ. ಅದು ಪೆಟ್ರೋಲಿಯಂ ಉತ್ಪನ್ನ.
ಅಸಲಿ ನಕಲಿ ಪತ್ತೆ ಹೇಗೆ?: ಪಪ್ಪಾಯ ಬೀಜವನ್ನು ಕಾಳುಮೆಣಸಿಗೆ ಕಲಬೆರಕೆ ಮಾಡಿದ್ರೆ ಸರಳವಾದ ಪ್ರಯೋಗದಿಂದ ಪತ್ತೆ ಹಚ್ಚಬಹುದು. ಒಂದು ಲೋಟ ನೀರಿಗೆ ಹಾಕಿದಾಗ ಪಪ್ಪಾಯ ಬೀಜ ಲೋಟದ ಮೇಲೆ ತೇಲುತ್ತೆ. ಕಾಳುಮೆಣಸು ಒಳಗೆ ಹೋಗುತ್ತೆ. ಅಥವಾ ಭೂತ ಕನ್ನಡಿಯಿಂದ ಕೂಡ ಅಸಲಿ ನಕಲಿಯನ್ನು ಪತ್ತೆ ಹಚ್ಚಬಹುದು.
ಇಂಗಿಗೆ ಸೇರಿಸ್ತಾರೆ ವಿಷ ಪದಾರ್ಥ !: ಇಂಗು ನಮ್ಮ ಅಡುಗೆ ಮನೆಯ ಅತ್ಯಂತ ಪ್ರಮುಖ ಸಾಂಬಾರು ಪದಾರ್ಥ. ಇಂಗು ಹಾಕಿದ್ರೆ ಸಾಂಬಾರು ಪದಾರ್ಥ ಘಮಘಮ ಅನ್ನುತ್ತೆ. ಇದನ್ನು ಸಸ್ಯಹಾರಿಗಳ ಮನೆಯಲ್ಲಿ ನಿತ್ಯ ಬಳಸುತ್ತಾರೆ. ಅಲ್ಲದೆ ಇಂಗು ದುಬಾರಿ ಸಾಂಬಾರು ಪದಾರ್ಥ. ಇನ್ನು ಇಂಗಿಗೆ ಔಷಧೀಯ ಗುಣ ಇದೆ. ಅದನ್ನು ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಮಜ್ಜಿಗೆ ಅಥವಾ ಬಿಸಿ ನೀರಿಗೆ ಹಾಕಿ ಕುಡಿಯೋದೂ ಇದೆ. ಈ ಇಂಗು ಅಂಟಿನ ರೂಪದಲ್ಲಿರುತ್ತೆ ಇನ್ನು ಕೆಲವು ಪೌಡರ್‌ ರೂಪದಲ್ಲೂ ಇರುತ್ತೆ. ಪೌಡರ್‌ ರೂಪದಲ್ಲಿರುವ ಇಂಗಿಗೆ ಕಲಬೆರಕೆ ಮಾಡ್ತಾರೆ. ಮರಳಿನ ಪುಡಿ, ಕಲ್ಲಿನ ಪುಡಿ, ಚಾಕ್ ಪೀಸ್‌, ಜಿಪ್ಸಮ್‌ ಮುಂತಾದ ಅಪಾಯಕಾರಿ ರಾಸಾಯನಿಕಗಳನ್ನು ಸೇರಿಸ್ತಾರೆ. ಇದರಿಂದ ಆರೋಗ್ಯ ಹಾಳಾಗುತ್ತೆ.
ನಕಲಿ ಅಸಲಿ ಪತ್ತೆ ಹೇಗೆ?: ಇಂಗು ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನು ಬಹಳ ಸರಳವಾಗಿ ಪತ್ತೆ ಹಚ್ಚಬಹುದು. ಇಂಗನ್ನು ಒಂದು ಗ್ಲಾಸ್‌ ನೀರಿಗೆ ಹಾಕಿ. ಆ ಬಳಿಕ ನೀರಿಗೆ ಅಯೋಡಿನ್ ದ್ರಾವಣ ಸೇರಿಸಿ. ಚೆನ್ನಾಗಿ ಕಲಸಿ. ಒಂದುವೇಳೆ ದ್ರಾವಣ ನೀಲಿ ಬಣ್ಣಕ್ಕೆ ಬದಲಾದ್ರೆ ಅದು ಕಲಬೆರಕೆ ಇಂಗು ಅಂತ ಅರ್ಥ. ಇನ್ನೊಂದು ಸರಳ ವಿಧಾನದಿಂದ ನೀವು ಇಂಗು ಅಸಲಿಯೋ ನಕಲಿಯೋ ಅನ್ನೋದನ್ನು ಪತ್ತೆ ಹಚ್ಚಬಹುದು. ಒಂದು ಚಮಚದಲ್ಲಿ ಇಂಗು ಇಟ್ಟುಕೊಳ್ಳಿ ಅದಕ್ಕೆ ಬೆಂಕಿ ಕೊಡಿ. ಒಂದು ವೇಳೆ ಇಂಗು ಕರ್ಪೂರದ ರೀತಿ ಉರಿದ್ರೆ ಅದು ಅಸಲಿ ಇಂಗು, ಉರಿಯದಿದ್ರೆ ಅದಕ್ಕೆ ಕಲಬೆರಕೆ ಆಗಿದೆ ಅಂತ ತಿಳ್ಕೊಳ್ಳಿ.
ನೀವು ಬಳಸೋ ಚೆಕ್ಕೆ ನಕಲಿಯಾಗಿರಬಹುದು: ಮಾಂಸಹಾರಿಗಳಿಗೆ ಬಹು ಪ್ರಿಯ ಚೆಕ್ಕೆ. ಚೆಕ್ಕೆಯನ್ನು ಗರಂ ಮಸಾಲ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸ್ತೀವಿ. ಈ ಚೆಕ್ಕೆ ಆಹಾರಕ್ಕೆ ಅಪರೂಪದ ಪರಿಮಳವನ್ನು ತಂದು ಕೊಡುತ್ತೆ. ಇಂಥ ಅಪರೂಪದ ಸಾಂಬಾರು ಪದಾರ್ಥಕ್ಕೂ ಕಲಬೆರಕೆ ಮಾಡ್ತಾರೆ ಗೊತ್ತಾ? ಕಾಸಿಯಾ ಮರದ ಚೆಕ್ಕೆಯನ್ನು ಸಾಂಬಾರು ಚೆಕ್ಕೆಗೆ ಮಿಕ್ಸ್‌ ಮಾಡಿದ್ರೆ ಗೊತ್ತೇ ಆಗಲ್ಲ. ಆದ್ರೆ ಕಲಬೆರಕೆಯಾಗಿರೋ ಚೆಕ್ಕೆಗೆ ಆ ಅಪರೂಪದ ಪರಿಮಳವೇ ಇರಲ್ಲ.
ಅಸಲಿ ಹಾಗೂ ನಕಲಿ ಪತ್ತೆ ಹಚ್ಚೋದು ಹೇಗೆ?: ಅಸಲಿ ಚೆಕ್ಕೆ ತೆಳುವಾಗಿರುತ್ತೆ. ಪದರಗಳು ಇರೋದಿಲ್ಲ. ಬೇಗ ರೋಲ್‌ ಆಗುತ್ತೆ. ಆದ್ರೆ ನಕಲಿ ಚೆಕ್ಕೆಗೆ ಪದರಗಳು ಜಾಸ್ತಿ ಇರುತ್ತೆ. ವಿಶೇಷ ಸುವಾಸನೆ ಇರಲ್ಲ. ರೋಲ್‌ ಆಗಲ್ಲ.
ಹಳದಿ ಕೊಂಬಿಗೂ ಹಾಕ್ತಾರೆ ಕೃತಕ ಬಣ್ಣ !: ಹಳದಿ ಅಥವಾ ಅರಸಿನವನ್ನು ಸಾಂಬಾರು ಪದಾರ್ಥವಾಗಿ ಹಾಗೂ ಔಷಧೀಯ ಪದಾರ್ಥವಾಗಿ ನಾವು ಅವ್ಯಾಹತವಾಗಿ ಬಳಕೆ ಮಾಡ್ತೀವಿ. ಅರಸಿನಕ್ಕೆ ರೋಗ ನಿರೋಧಕ ಶಕ್ತಿ ಇರೋದ್ರಿಂದ ಅದನ್ನು ನಾನಾ ಬಗೆಯಲ್ಲಿ ಬಳಕೆ ಮಾಡ್ತೀವಿ. ಇನ್ನು ಇದಕ್ಕೆ ಸೌಂದರ್ಯ ವರ್ಧಕ ಗುಣ ಇರೋದ್ರಿಂದ ಸೌಂದರ್ಯ ವರ್ಧಕವಾಗಿಯೂ ಬಳಸ್ತೀವಿ. ಇತ್ತೀಚಿನ ದಿನಗಳಲ್ಲಿ ಅರಸಿನ ಪುಡಿಗೆ ಕಲಬೆರಕೆಯಾಗುತ್ತೆ ಅಂತ ಅರಸಿನ ಕೊಂಬು ಬಳಸ್ತಾರೆ. ದುರಂತ ಅಂದ್ರೆ ಈ ಅರಸಿನ ಕೊಂಬಲ್ಲೂ ಕಲಬೆರಕೆ ಮಾಡಲಾಗುತ್ತಿದೆ. ಇಷ್ಟೊಂದು ಒಳ್ಳೆ ಗುಣ ಇರೋ ಅರಸಿನಕ್ಕೂ ಕಲಬೆರಕೆ ಮಾಡ್ತಾರೆ. ರಾಸಾಯನಿಕ ಬಣ್ಣ ಬೆರೆಸಿ ಅರಸಿನವನ್ನು ಕಲಬೆರಕೆ ಮಾಡ್ತಾರೆ. ಇದು ಅತ್ಯಂತ ಅಪಾಯಕಾರಿ. ಪೆಟ್ರೋಲಿಯಂ ಉತ್ಪನ್ನವಾಗಿರೋ ಕೃತಕ ಅರಸಿನ ಬಣ್ಣ ನಿತ್ಯ ಬಳಕೆ ಮಾಡಿದ್ರೆ ಕ್ಯಾನ್ಸರ್‌ ಗ್ಯಾರಂಟಿಯಾಗಿ ಬರುತ್ತೆ.
ಅಸಲಿ ನಕಲಿ ಪತ್ತೆ ಹೇಗೆ?: ಒಂದು ಗ್ಲಾಸ್‌ ನೀರಿಗೆ ಅರಸಿನ ಕೊಂಬು ಹಾಕಿ. ಸ್ಲಲ್ಪ ಹೊತ್ತು ಬಿಡಿ ಒಂದು ವೇಳೆ ನೀರು ಹಳದಿ ಬಣ್ಣಕ್ಕೆ ತಕ್ಷಣ ತಿರುಗಲು ಪ್ರಾರಂಭಿಸಿದ್ರೆ ಅರಸಿನಕ್ಕೆ ಬಾಹ್ಯ ಬಣ್ಣವನ್ನು ಮಿಕ್ಸ್‌ ಮಾಡಿದ್ದಾರೆ ಅನ್ನೋದು. ಅಸಲಿ ನಕಲಿ ಪತ್ತೆಗೆ ಇನ್ನೊಂದು ಪ್ರಯೋಗ ಮಾಡಬಹುದು. ಅದೇನಂದ್ರೆ ಒಂದು ಗ್ಲಾಸ್‌ ನೀರಿಗೆ ಅರಸಿನ ಕೊಂಬು ಹಾಕಿ, ಬಳಿಕ ಅದಕ್ಕೆ ಹೈಡ್ರೋಕ್ಲೋರಿಕ್ ಆಸಿಡ್‌ ಹಾಕಿ. ಒಂದು ವೇಳೆ ದ್ರಾವಣ ತಿಳಿ ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಅದಕ್ಕೆ ಕೃತಕ ಬಣ್ಣ ಸೇರಿಸಲಾಗಿದೆ ಅದು ಅಸಲಿ ಅರಸಿನ ಕೊಂಬು ಅಲ್ಲ ಅನ್ನೋದು ಸ್ಪಷ್ಟ.
ಹೀಗೆ ನಾವು ನಿತ್ಯ ಬಳಸೋ ಕಾಳು, ಸಾಂಬಾರು ಪದಾರ್ಥಗಳಿಗೆ ಕಲಬೆರಕೆ ಮಾಡಿ ನಮ್ಮ ಆರೋಗ್ಯದ ಜೊತೆ ಚಲ್ಲಾಟ ಮಾಡ್ತಾರೆ ಕಲಬೆರಕೆ ಮಾಫಿಯಾ ಮಂದಿ. ಇವರ ವಿರುದ್ಧ ಹೋರಾಡಲು ನಾವು ಜಾಗೃತರಾಗಬೇಕು. ಅಸಲಿ ನಕಲಿಯನ್ನು ಪತ್ತೆ ಹಚ್ಚುವ ಸರಳ ಸೂತ್ರಗಳನ್ನು ತಿಳಿದುಕೊಳ್ಳಬೇಕು. ಕಲಬೆರಕೆ ಎಲ್ಲಾದ್ರೂ ಕಂಡು ಬಂದ್ರೆ ತಕ್ಷಣ ಅವರ ವಿರುದ್ಧ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article