ಅಘ್ಫಾನಿಸ್ತಾನ: ‘ಜನರನ್ನು ನಗಿಸುವ ಕೆಲಸ ಮಾಡುತ್ತಿಯಾ’ ಎಂದು ಹಾಸ್ಯನಟನನ್ನು ಕೊಂದ ತಾಲಿಬಾನಿಗಳು

ಅಫ್ಘಾನಿಸ್ತಾನ್, ಜು. 29: ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತ ಘಟನೆ ನಡೆದಿದೆ. ಅಫ್ಘಾನಿಸ್ಥಾನದ ಜನಪ್ರಿಯ ಹಾಸ್ಯನಟ ಎಂದು ಹೆಸರು ಮಾಡಿದ್ದ ಖಾಶಾ ಜ್ವಾನ್‌ (ನಜರ್ ಮೊಹಮ್ಮದ್) ಅವರನ್ನು ಇಸ್ಲಾಂ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತಾಲಿಬಾನಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಕಂದಹಾರ್ ಪ್ರದೇಶದ ತಮ್ಮ ಮನೆಯಿಂದ ಹೊರಗೆ ನಡೆದುಕೊಂಡು ಹೋಗುವಾಗ ಕಾಶನ್ ಅವರನ್ನು ತಾಲಿಬಾನಿಗಳು ಮೊದಲು ಅಪಹರಿಸಿ, ಕಾರ್‌ ಒಂದರಲ್ಲಿ ಕೂರಿಸಿಕೊಂಡು ‘ಇಸ್ಲಾಂನಲ್ಲಿ ಹುಟ್ಟಿ ನೀನು ಜನರನ್ನು ನಗಿಸುವ ಕೆಲಸ ಮಾಡುತ್ತಿಯಾ‘ ಎಂದು ಕಪಾಳಕ್ಕೆ ಹೊಡೆದಿದ್ದಾರೆ. ನಂತರ ಕಾರ್‌ನಿಂದ ಹೊರಗೆಳೆದು ಗುಂಡಿಕ್ಕಿ ಕೊಂದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ಕಳೆದ ಗುರುವಾರ ರಾತ್ರಿ ನಡೆದಿದ್ದು, ತಾಲಿಬಾನಿಗಳ ಮೇಲೆ ಕಾಶನ್ ಮನೆಯವರು ಆರೋಪ ಹೊರಿಸಿದ್ದಾರೆ. ಆದರೆ, ತಮ್ಮ ಮೇಲಿನ ಆರೋಪವನ್ನು ತಾಲಿಬಾನಿಗಳು ನಿರಾಕರಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Exit mobile version