ಅಫ್ಗಾನ್ : 500ಕ್ಕೂ ಅಧಿಕ ಪ್ರಜೆಗಳನ್ನ ಸ್ಥಳಾಂತರಿಸಿರುವ ರಷ್ಯಾ

ಮಾಸ್ಕೊ, ಆ. 25: ಅಫ್ಗಾನಿಸ್ತಾನದಲ್ಲಿರುವ 500ಕ್ಕೂ ಅಧಿಕ ರಷ್ಯಾದ ಪ್ರಜೆಗಳನ್ನು ಸೇನಾಪಡೆಯ ನಾಲ್ಕು ಸರಕು ಸಾಗಣೆ ವಿಮಾನಗಳ ಮೂಲಕ ಸ್ಥಳಾಂತರಿಸಲಾಗುವುದು ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

‘ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಕ್ಷಣಾ ಸಚಿವರು, ಸೇನಾಪಡೆಯ ಜನರಲ್ ಸರ್ಗೈ ಸೊಯಿಗು ಅವರ ಆದೇಶದ ಮೇರೆಗೆ ಆಗಸ್ಟ್ 25ರಂದು ಇಸ್ಲಾಮಿಕ್‌ ರಿಪಬ್ಲಿಕ್ ಆಫ್‌ ಅಫ್ಗಾನಿಸ್ತಾನದಿಂದ ರಷ್ಯ, ಉಕ್ರೇನ್‌, ಸಿಎಸ್‌ಟಿಒ ಸದಸ್ಯ ರಾಷ್ಟ್ರಗಳಾದ ಬೆಲಾರಸ್‌, ಕಿರ್ಗಿಸ್ತಾನ್, ತಜಕಿಸ್ತಾನ್‌ ಮತ್ತು ಉಜ್ಬೇಕಿಸ್ತಾನದ 500ಕ್ಕೂ ಅಧಿಕ ಪ್ರಜೆಗಳನ್ನು ಸೇನಾಪಡೆಯ ಸರಕು ಸಾಗಣೆ ವಿಮಾನಗಳಲ್ಲಿ ಸ್ಥಳಾಂತರಿಸಲಾಗುವುದು‌’ ಎಂಬ ರಕ್ಷಣಾ ಸಚಿವಾಲಯದ ಆದೇಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Exit mobile version