ತಾಲಿಬಾನಿಗಳ ವಿರುದ್ದ ಸೆಟದು ನಿಂತ ಅಫ್ಘಾನಿಸ್ತಾನ

ಕಾಬೂಲ್ ಆ 23:  ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ಹಿನ್ನಲೆಯಲ್ಲಿಅಲ್ಲಿನಾ ರೆಸಿಸ್ಟೆನ್ಸ್ ಫೋರ್ಸ್ ತಾಲಿಬಾನಿಗಳ ವಿರುದ್ದ ಸಮರ ಸಾರಿವೆ.  ಇಗ ಪಂಜಿಶಿರ್ ಸೇರಿದಂತೆ 3 ಜಿಲ್ಲೆಗಳನ್ನು ತಾಲಿಬಾನಿಗಳಿಂದ ವಶಪಡಿಸಿಕೊಂಡಿದ್ದು ಅಲ್ಲೀಗ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಪಂಜಿಶಿರ್ ಜಿಲ್ಲೆಯನ್ನು  ವಾಪಸ್ಸು ನೀಡಲು ತಾಲಿಬಾನ್ ಸುಮಾರು 20 ಮಕ್ಕಳನನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.  

ತಾಲಿಬಾನ್‌ಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಪಂಜಶೀರ್ ನಲ್ಲಿ ತಾಲಿಬಾನ್ ವಿರುದ್ಧ ನಿರ್ಮಿಸಲಾಗಿದ್ದ ಬ್ಯಾರಿಕೇಡ್ ಅನ್ನು ಹತ್ತಿಕ್ಕಲು ತಾಲಿಬಾನ್ ತನ್ನ ಸುಮಾರು 3000 ಹೋರಾಟಗಾರರನ್ನು ಕಳುಹಿಸಿತ್ತು. ಪಂಜಶೀರ್ ಕಡೆಗೆ ಹೋಗುವ ಅಂದ್ರಾಬ್ ಕಣಿವೆಯಲ್ಲಿ ತಾಲಿಬಾನ್ ಮತ್ತು ರೆಸಿಸ್ಟೆನ್ಸ್ ಫೋರ್ಸ್ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಹೋರಾಟದಲ್ಲಿ ತಾಲಿಬಾನಿಗಳಿಗೆ ಹಿನ್ನಡೆಯುಂಟಾಗಿದೆ. ಅಹ್ಮದ್ ಮಸೂದ್ ನೇತೃತ್ವದ ರೆಸಿಸ್ಟೆನ್ಸ್ ಫೋರ್ಸ್, ತಾಲಿಬಾನ್ ಜೊತೆ ಕಠಿಣ ಹೋರಾಟ ನಡೆಸುತ್ತಿದೆ.

300 ಉಗ್ರರು ಬಲಿ : ಪಂಜಶೀರ್ ಮೆಲೆ ದಾಳಿ ಮಾಡಲು ಪ್ರಯತ್ನಿಸಿದ ಸುಮಾರು 300 ತಾಲಿಬಾನಿಗಳನ್ನು ಪಂಜಶೀರ್ ಯೋಧರು ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪಂಜಶೀರ್ ಮುಖಂಡ ನಾವು ಯಾವುದೇ ಕಾರಣಕ್ಕೂ ಪಂಜಶೀರ್‌ನ್ನು ಕಣಿವೆಯನ್ನು ಬಿಟ್ಟು ಕೊಡುವುದಿಲ್ಲ ನಾವು ಅಫ್ಘಾನ್ ಅಧ್ಯಕ್ಷನಂತೆ ಹೆದರಿ ಓಡಿಹೋಗುವುದಿಲ್ಲ ತಾಕತ್ತಿದ್ದರು ಯುದ್ದಮಾಡಿ ಗೆಲ್ಲಿ ಎಂದು ತಾಲಿಬಾನಿಗಳಿಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ.

Exit mobile version