ಡೆಲ್ಟಾ ಆಯ್ತು, ಇದೀಗ ಕೊರೊನಾದ ಹೊಸ ರೂಪಾಂತರ ತಳಿ ‘ಲ್ಯಾಂಬ್ಡಾ’

ವಿಶ್ವಸಂಸ್ಥೆ, ಜು. 08: ಡೆಲ್ಟಾ ನಂತರ ಇದೀಗ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ‘ಲ್ಯಾಂಬ್ಡಾ’ ಕಾಣಿಸಿಕೊಂಡಿದೆ. ಈ ತಳಿಯ ಸೋಂಕಿನ ಪ್ರಸರಣ ಜಗತ್ತಿಗೆ ಹೊಸ ಅಪಾಯ ತಂದೊಡ್ಡಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಇಟಲಿ, ಜರ್ಮನಿ ಸೇರಿದಂತೆ 31 ರಾಷ್ಟ್ರಗಳಲ್ಲಿ ಈ ತಳಿಯ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಈವರೆಗೆ ಈ ತಳಿಯ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ.

ವೈರಸ್‌ನ ಲ್ಯಾಂಬ್ಡಾ ತಳಿಯ ಸೋಂಕು ತೀವ್ರವಾಗಿ ಹರಡಬಲ್ಲದು. ಅಲ್ಲದೇ, ಕೋವಿಡ್‌ ಲಸಿಕೆಗಳಿಗೆ ಈ ತಳಿಯ ವೈರಸ್‌ ಪ್ರತಿರೋಧ ಒಡ್ಡುವ ಸಾಧ್ತತೆಗಳಿವೆ. ಆದರೆ, ಈ ವಾದವನ್ನು ಪುಷ್ಟೀಕರಿಸುವ ವೈಜ್ಞಾನಿಕ ಆಧಾರಗಳು ಲಭ್ಯವಿಲ್ಲ ಎಂದು ಬ್ರಿಟನ್‌ನ ಆರೋಗ್ಯ ಸಂಸ್ಥೆ ‘ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌’ನ (ಪಿಎಚ್ಇ) ವಿಜ್ಞಾನಿಗಳು ಹೇಳಿದ್ದಾರೆ.

Exit mobile version