ಮೋದಿಯ ಹೊಸ ಕನಸು ‘ಅಗ್ನಿಪಥ್’ ; ಏನಿದು ಅಗ್ನಿಪಥ್? ಇಲ್ಲಿದೆ ಮಾಹಿತಿ!

Narendra Modi

ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ(Central Government) ಇದೀಗ ಅಗ್ನಿಪಥ್ ಎಂಬ ವಿಶೇಷ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಭಾರತೀಯ ಸೇನೆಯಲ್ಲಿ ಸೇವೆಯಲ್ಲಿಸಬೇಕೆಂದು ಕನಸು ಕಾಣುತ್ತಿರುವ ಅನೇಕ ಯುವಜನತೆಗೆ ಈ ಯೋಜನೆ ನೆರವಾಗಲಿದೆ. ಈ ಯೋಜನೆಯಡಿ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸುವ ಕನಸು ಕಾಣುತ್ತಿದ್ದವರಿಗೆ 4 ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಲು ಯೋಜಿಸಲಾಗಿದೆ.

ಅಗ್ನಿಪಥ್ ಯೋಜನೆಯಡಿ(Agnipath Yojana) ಆಯ್ಕೆಯಾಗುವ ಆಗ್ನಿವೀರರನ್ನು ಮೆರಿಟ್ ಆಧಾರಿತ ನೇಮಕಾತಿ, 17 ರಿಂದ 21 ವಯಸ್ಸಿನ ಮಿತಿ, ಆಕರ್ಷಕ ಮಾಸಿಕ ವೇತನ, ಸೇವಾ ನಿಧಿಯೊಂದಿಗೆ ರಾಷ್ಟ್ರಸೇವೆಗೆ ಸಜ್ಜುಗೊಳಿಸುತ್ತದೆ. ಮಿಲಿಟರಿ ನೀತಿಯೊಂದಿಗೆ ರಾಷ್ಟ್ರ ನಿರ್ಮಾಣ ಮತ್ತು ಯೋಗ್ಯ ನಾಗರಿಕರನ್ನು ಸಮಾಜಕ್ಕೆ ಅರ್ಪಿಸುವ ದೂರಚಿಂತನೆಯೇ ಅಗ್ನಿಪಥ್ ಯೋಜನೆಯದು. ಇನ್ನು ಅಗ್ನಿಪಥ್ ಯೋಜನೆಯಡಿ 4 ವರ್ಷಗಳ ಸೇವಾ ಅವಧಿ ಪೂರೈಸಿದ ನಂತರ 25% ಅಗ್ನಿವೀರರನ್ನು ಸಾಮಾನ್ಯ ಕೇಡರ್‍ಗಳಲ್ಲಿ ಮರು ಸೇರ್ಪಡೆ ಮಾಡಲಾಗುತ್ತದೆ.

ಅಗ್ನಿಪಥ್ ಯೋಜನೆಯ ಮೂಲಕ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಪರಿವರ್ತನೆಯ ಬದಲಾವಣೆ ಬರಲಿದೆ. ಅಗ್ನಿಪಥ್ ಯೋಜನೆಯಡಿ ನೇಮಕಗೊಂಡವರು ರಕ್ಷಣಾ ಪಡೆಗಳಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಬಹುದು. ಭೂಸೇನೆ, ವಾಯುಸೇನೆ ಮತ್ತು ನೌಕಾದಳದಲ್ಲಿ ಅಗ್ನಿಪಥ್ ಯೋಜನೆ ಮೂಲಕ ಆಯ್ಕೆಯಾಗಿ ಸೇವೆ ಸಲ್ಲಿಸಬಹುದು. ಅಗ್ನಿಪಥ್ ಯೋಜನೆಯಡಿ ನೇಮಕವಾಗುವವರಿಗೆ ಉತ್ತಮ ಸಂಬಳವನ್ನು ನೀಡಲಾಗುತ್ತದೆ. ಅಂದಾಜಿನ ಪ್ರಕಾರ 4.6 ಲಕ್ಷದಿಂದ 6.5 ಲಕ್ಷ ದವರೆಗೂ ವೇತನ ನೀಡಲಾಗುತ್ತದೆ.

17.5 ವರ್ಷದಿಂದ 21 ವರ್ಷದೊಳಗಿನ ಯುವಕ-ಯುವತಿಯರು ನೇಮಕಾತಿಗೆ ಅರ್ಹರಾಗಿರುತ್ತಾರೆ. ನಾಲ್ಕು ವರ್ಷಗಳ ಸೇವಾಧಿಯ ನಂತರ ಅನೇಕ ಸೌಲಭ್ಯಗಳನ್ನು ಸರ್ಕಾರ ನೀಡಲಿದೆ. ಬ್ಯಾಂಕ್ ಸಾಲ ಸೌಲಭ್ಯ, ಪಿಂಚಣಿ, ಆರೋಗ್ಯ ಮತ್ತು ಜೀವ ವಿಮೆ ಸೇರಿದಂತೆ ಅನೇಕ ಸೌಲಭ್ಯಗಳು ಲಭ್ಯವಾಗಲಿವೆ.

Exit mobile version