ಕೃಷಿ ಕಾಯ್ದೆ ವಿರುದ್ದ ಪ್ರತಿಭಟನೆಗೆ ಬೆಂಗಳೂರು ಸಜ್ಜು

ಬೆಂಗಳೂರು ಸೆ 27: ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಯ ವಿರುದ್ಧ ರೈತರು ಸತತ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ ಆ ಪ್ರಯುಕ್ತ ರಾಜಧಾನಿ ಬೆಂಗಳೂರಿಗೂ ಬಂದ್​ ಬಿಸಿ ತಟ್ಟಿದ್ದು, ರೈತರ ಕಿಚ್ಚಿಗೆ ಬೆಂಗಳೂರು ಸ್ತಬ್ಧವಾಗ್ತಿದೆ.  ಎಲ್ಲಾ ಹೈವೇ ಬಂದ್​​ಗೆ  ಹೋರಾಟಗಾರರು ಸಜ್ಜಾಗಿದ್ದು, ನೂರಾರು ಸಂಘಟನೆಗಳಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ನಡಯುಲಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕೆ.ಆರ್. ಪುರಂನಿಂದ  ಟೌನ್​​ಹಾಲ್​​​ವರೆಗೂ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಗಿರೀಶ್​ಗೌಡ ನೇತೃತ್ವದಲ್ಲಿ ಸುಂಕದಕಟ್ಟೆಯಿಂದ ಫ್ರೀಡಂಪಾರ್ಕ್‌ವರೆಗೆ​ ರ್ಯಾಲಿ ನಡೆಯಲಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ  ಅತ್ತಿಬೆಲೆಯಲ್ಲಿ ಹಾಗೂ ಟೌನ್​​ಹಾಲ್​ನಿಂದ ಮೈಸೂರು ಬ್ಯಾಂಕ್ ಸರ್ಕಲ್​ ವರೆಗೆ ಹಾಗೂ ವರಲಕ್ಷ್ಮಿ ನೇತೃತ್ವದಲ್ಲಿ ರ್ಯಾಲಿ ನಡೆಯುಲಿದೆ.  

ಹಲವು ವಿವಿ ಪರೀಕ್ಷೆಗೆ ಬಂದ್ ಬಿಸಿ ತಟ್ಟಲ್ಲ.  

ಕೆಲವಡೆ ಬಂದ್ ಬಿಸಿ ಜೋರಾಗಿದ್ದರೆ ಇತ್ತ ದಾವಣಗೆರೆ ವಿವಿಯ ಎಲ್ಲ ಪರೀಕ್ಷೆಗಳು ನಡೆಯಲಿವೆ ಎಂದು ವಿವಿ ಉಪಕುಲಪತಿ ಪ್ರೊ.ಶರಣಪ್ಪ ಹಲಸೆ ಮಾಹಿತಿ ನೀಡಿದ್ದಾರೆ. ಭಾರತ್ ಬಂದ್ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಿಲ್ಲ. ಇಂದು ವಿವಿಯ ಎಲ್ಲ ಪರೀಕ್ಷೆಗಳು ನಡೆಯಲಿವೆ. ಮುಂದೂಡಿಕೆ ಮಾಡುವಂತೆ ಯಾವುದೇ ಮನವಿ ಬಂದಿಲ್ಲ. ಬಸ್ ಸಂಚಾರ ಇರುವ ಹಿನ್ನಲೆ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲ. ಯಾಥಾಪ್ರಕಾರ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಜೊತೆಗೆ ಬೆಂಗಳೂರು ಉತ್ತರ ವಿವಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ. ಬೆಂ. ಉತ್ತರ ವಿವಿ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಗೈರಾದ್ರೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶವಿಲ್ಲ ಎಂದು ವಿವಿ ಸ್ಪಷ್ಟಪಡಿಸಿದೆ

Exit mobile version