ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸರ್ಕಾರ ರಚಿಸಲಿದೆ : ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೇರಲಿದೆ ಎಂದು ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಮೊದಲ ಎರಡು ಹಂತದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಈಗಾಗಲೇ ಶತಕ ಬಾರಿಸಿದ್ದು, ನಾಲ್ಕನೇ ಹಂತದ ವೇಳೆಗೆ ಸರ್ಕಾರ ರಚಿಸಲು ಬೇಕಾಗುವ ಸಂಖ್ಯಾಬಲವನ್ನು ಸಂಪಾದಿಸಲಿದೆ ಎಂದು ಪಕ್ಷದ ಮುಖಂಡ ಅಖಿಲೇಶ್ ಯಾದವ್ ತಿಳಿಸಿದ್ದಾರೆ. ಫಿರೋಝಾಬಾದ್ ನಲ್ಲಿ ನಡೆದ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್, ಮೊದಲ ಎರಡು ಹಂತದಲ್ಲಿ ಎಸ್ಪಿ ಈಗಾಗಲೇ ಶತಕ ಬಾರಿಸಿದ್ದು, ನಾಲ್ಕನೇ ಹಂತದ ಮತದಾನದ ವೇಳೆಗೆ ಸಮಾಜವಾದಿ ಪಕ್ಷ ಸರ್ಕಾರ ರಚಿಸುವಷ್ಟು ಸಂಖ್ಯಾಬಲವನ್ನು ಪಡೆಯಲಿದೆ ಎಂದು ತಿಳಿಸಿದರು.
ಸದ್ಯ ಉತ್ತರ ಪ್ರದೇಶದಲ್ಲಿ ಮೊದಲೆರಡು ಹಂತದ ಮತದಾನದಲ್ಲಿ ಕ್ರಮವಾಗಿ 113, 59 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮೂರನೇ ಹಂತದ ಮತದಾನ ಫೆಬ್ರವರಿ 20 ಮತ್ತು ನಾಲ್ಕನೇ ಹಂತದ ಮತದಾನ ಫೆಬ್ರವರಿ 23 ರಂದು ನಡೆಯಲಿದೆ.


ಮೋದಿ ಸರ್ಕಾರ ವಿಮಾನ ನಿಲ್ದಾಣ, ರೈಲ್ವೇ ಸೇರಿದಂತೆ ಎಲ್ಲವನ್ನು ಮಾರಾಟ ಮಾಡುತ್ತಿದೆ. ಇದರಿಂದ ಯಾರಿಗೂ ಉದ್ಯೋಗದಲ್ಲಿ ಮೀಸಲಾತಿ ಸಿಗುವುದಿಲ್ಲ ಎಂದು ಆರೋಪಿಸಿದರು.
ಮೊದಲ ಹಂತ ಅಧಿಸೂಚನೆ ಪ್ರಕಟ: ಜನವರಿ 14
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಜನವರಿ 21
ನಾಮಪತ್ರ ಪರಿಶೀಲನೆ: ಜನವರಿ 24
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜನವರಿ 27
ಮತದಾನದ ದಿನಾಂಕ: ಫೆಬ್ರವರಿ 10

ಎರಡನೇ ಹಂತ :
ಅಧಿಸೂಚನೆ ಪ್ರಕಟ: ಜನವರಿ 21
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಜನವರಿ 28
ನಾಮಪತ್ರ ಪರಿಶೀಲನೆ: ಜನವರಿ 29
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜನವರಿ 31
ಮತದಾನದ ದಿನಾಂಕ: ಫೆಬ್ರವರಿ 14

ಮೂರನೇ ಹಂತ :
ಅಧಿಸೂಚನೆ ಪ್ರಕಟ: ಜನವರಿ 25
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 1
ನಾಮಪತ್ರ ಪರಿಶೀಲನೆ: ಫೆಬ್ರವರಿ 2
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 4
ಮತದಾನದ ದಿನಾಂಕ: ಫೆಬ್ರವರಿ 20

ನಾಲ್ಕನೇ ಹಂತ :
ಅಧಿಸೂಚನೆ ಪ್ರಕಟ: ಜನವರಿ 27
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 3

ನಾಮಪತ್ರ ಪರಿಶೀಲನೆ: ಫೆಬ್ರವರಿ 4
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 7
ಮತದಾನದ ದಿನಾಂಕ: ಫೆಬ್ರವರಿ 23

ಐದನೇ ಹಂತ :
ಅಧಿಸೂಚನೆ ಪ್ರಕಟ: ಫೆಬ್ರವರಿ 1
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 8
ನಾಮಪತ್ರ ಪರಿಶೀಲನೆ: ಫೆಬ್ರವರಿ 9
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 11
ಮತದಾನದ ದಿನಾಂಕ: ಫೆಬ್ರವರಿ 27

ಆರನೇ ಹಂತ :
ಅಧಿಸೂಚನೆ ಪ್ರಕಟ: ಫೆಬ್ರವರಿ 4
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 11
ನಾಮಪತ್ರ ಪರಿಶೀಲನೆ: ಫೆಬ್ರವರಿ 14

ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 16
ಮತದಾನದ ದಿನಾಂಕ.

ಮಾರ್ಚ್ 3 ಏಳನೇ ಹಂತ :

ಅಧಿಸೂಚನೆ ಪ್ರಕಟ: ಫೆಬ್ರವರಿ 10
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 17
ನಾಮಪತ್ರ ಪರಿಶೀಲನೆ: ಫೆಬ್ರವರಿ 18
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 21
ಮತದಾನದ ದಿನಾಂಕ: ಮಾರ್ಚ್

Exit mobile version